ಇನ್ಮುಂದೆ ಸುಪ್ರೀಂ ಕೇಸುಗಳ ಮಾಹಿತಿಯೂ ಕ್ಷಣದಲ್ಲೇ ವೆಬ್‌ಸೈಟ್‌ನಲ್ಲಿ ಲಭ್ಯ

Published : Sep 15, 2023, 08:45 AM IST
ಇನ್ಮುಂದೆ ಸುಪ್ರೀಂ ಕೇಸುಗಳ ಮಾಹಿತಿಯೂ ಕ್ಷಣದಲ್ಲೇ ವೆಬ್‌ಸೈಟ್‌ನಲ್ಲಿ ಲಭ್ಯ

ಸಾರಾಂಶ

ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿರುವ ಹಾಗೂ ಇತ್ಯರ್ಥವಾದ ಪ್ರಕರಣಗಳ ವಿವರ ಇನ್ನುಮುಂದೆ ರಿಯಲ್‌ ಟೈಮ್‌ನಲ್ಲಿ ವೆಬ್‌ಸೈಟಿನಲ್ಲಿ ಲಭ್ಯವಾಗಲಿದೆ. ಈವರೆಗೆ ತಾಲೂಕು ಕೋರ್ಟ್‌ಗಳಿಂದ ಹಿಡಿದು ಹೈಕೋರ್ಟ್‌ಗಳವರೆಗೆ ಮಾತ್ರ ಲಭ್ಯವಿದ್ಧ ಈ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್‌ಗೂ ವಿಸ್ತರಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ತಿಳಿಸಿದ್ದಾರೆ.

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿರುವ ಹಾಗೂ ಇತ್ಯರ್ಥವಾದ ಪ್ರಕರಣಗಳ ವಿವರ ಇನ್ನುಮುಂದೆ ರಿಯಲ್‌ ಟೈಮ್‌ನಲ್ಲಿ ವೆಬ್‌ಸೈಟಿನಲ್ಲಿ ಲಭ್ಯವಾಗಲಿದೆ. ಈವರೆಗೆ ತಾಲೂಕು ಕೋರ್ಟ್‌ಗಳಿಂದ ಹಿಡಿದು ಹೈಕೋರ್ಟ್‌ಗಳವರೆಗೆ ಮಾತ್ರ ಲಭ್ಯವಿದ್ಧ ಈ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್‌ಗೂ ವಿಸ್ತರಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ತಿಳಿಸಿದ್ದಾರೆ.

ಗುರುವಾರ ಸುಪ್ರೀಂಕೋರ್ಟ್‌ನ ಕಲಾಪಕ್ಕೂ ಮುನ್ನ ನ್ಯಾಯಾಲಯದ ಆವರಣದಲ್ಲೇ ಈ ವಿಷಯ ಪ್ರಕಟಿಸಿದ ಚಂದ್ರಚೂಡ್‌ (D.Y.Chandrachud), ಸುಪ್ರೀಂಕೋರ್ಟ್‌ನ ದತ್ತಾಂಶಗಳನ್ನು ಶೀಘ್ರದಲ್ಲೇ ನ್ಯಾಷನಲ್‌ ಜುಡಿಷಿಯಲ್‌ ಡೇಟಾ ಗ್ರಿಡ್‌ (NJDG)ಗೆ ಲಿಂಕ್‌ ಮಾಡಲಾಗುವುದು. ತನ್ಮೂಲಕ ಸುಪ್ರೀಂಕೋರ್ಟ್‌ನ ಕೇಸುಗಳ ಮಾಹಿತಿಯನ್ನು ರಿಯಲ್‌ ಟೈಮ್‌ನಲ್ಲಿ ವೆಬ್‌ಸೈಟಿಗೆ ಅಪ್‌ಲೋಡ್‌ ಮಾಡಲಾಗುವುದು. ಇದೊಂದು ಐತಿಹಾಸಿಕ ದಿನವಾಗಿದೆ. ಎನ್‌ಐಸಿಯವರು ಅಭಿವೃದ್ಧಿಪಡಿಸಿರುವ ವೆಬ್‌ಸೈಟಿನಲ್ಲಿ ಇನ್ನುಮುಂದೆ ಸ್ಥಳೀಯ ಕೋರ್ಟ್‌ಗಳಿಂದ ಹಿಡಿದು ಸುಪ್ರೀಂಕೋರ್ಟ್‌ನವರೆಗೆ (Supreme court) ದೇಶದ ಎಲ್ಲಾ ಕೋರ್ಟ್‌ಗಳ ಬಾಕಿ ಪ್ರಕರಣಗಳು, ಇತ್ಯರ್ಥವಾದ ಪ್ರಕರಣಗಳು, ತೀರ್ಪುಗಳು ಮುಂತಾದ ಸಮಗ್ರ ಮಾಹಿತಿ ಲಭಿಸಲಿದೆ. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ’ ಎಂದು ತಿಳಿಸಿದರು.

ಎನ್‌ಜೆಡಿಜಿಯಲ್ಲಿ ಸದ್ಯ ತಾಲೂಕು ಕೋರ್ಟ್‌ಗಳಿಂದ ಹಿಡಿದು ಹೈಕೋರ್ಟ್‌ಗಳವರೆಗೆ ದೇಶದ 18,735 ಕೋರ್ಟ್‌ಗಳ ತೀರ್ಪು ಹಾಗೂ ಕೇಸುಗಳ ವಿವರ ರಿಯಲ್‌ ಟೈಮ್‌ನಲ್ಲಿ ಅಪ್‌ಲೋಡ್‌ ಆಗುತ್ತಿದೆ. ಸುಪ್ರೀಂಕೋರ್ಟ್ ಕೇಸುಗಳ ವಿವರ ಅದರಲ್ಲಿ ಲಭ್ಯವಿಲ್ಲ.

ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕೆ.ಕವಿತಾಗೆ ಇ.ಡಿ.ಸಮನ್ಸ್‌

ಪ್ರಧಾನಿ ಮೋದಿ ಶ್ಲಾಘನೆ:

ಎನ್‌ಜೆಡಿಜಿಗೆ ಸುಪ್ರೀಂಕೋರ್ಟನ್ನು ಸೇರ್ಪಡೆ ಮಾಡುವ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ತಂತ್ರಜ್ಞಾನಗಳನ್ನು ಹೀಗೆ ಬಳಕೆ ಮಾಡಿಕೊಳ್ಳುವುದರಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ಹಾಗೂ ದಕ್ಷತೆ ಬರುತ್ತದೆ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಬೆಲೆ ಏರಿಕೆ ಹಿನ್ನೆಲೆ: 2000 ಟನ್‌ವರೆಗೆ ಮಾತ್ರ ಗೋಧಿ ದಾಸ್ತಾನಿಗೆ ಅವಕಾಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ
ಕೊಬ್ಬರಿ ರೈತರಿಗೆ ಕೇಂದ್ರ ಬಂಪರ್ : ಬೆಂಬಲ ಬೆಲೆ ಹೆಚ್ಚಳ