ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕೆ.ಕವಿತಾಗೆ ಇ.ಡಿ.ಸಮನ್ಸ್‌

By Kannadaprabha News  |  First Published Sep 15, 2023, 8:19 AM IST

ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪುತ್ರಿ ಕೆ.ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ಜಾರಿ ಮಾಡಿದೆ.


ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪುತ್ರಿ ಕೆ.ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ಜಾರಿ ಮಾಡಿದೆ. ದಿಲ್ಲಿಯಲ್ಲಿ ತೆಲಂಗಾಣ ಮದ್ಯೋದ್ಯಮಿಗಳಿಗೆ ಅಬಕಾರಿ ಲೈಸೆನ್ಸ್‌ ಕೊಡಿಸುವಲ್ಲಿ ಕವಿತಾ ಪ್ರಮುಖ ಪಾತ್ರ ವಹಿಸಿ, ದೆಹಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್‌  (Arvind Kejriwal.)ಜೊತೆ ಕೈಜೋಡಿಸಿದ್ದರು ಎಂಬ ಆರೋಪ ಇದೆ. ಹೀಗಾಗಿ ಇ.ಡಿ. ಹಲವು ಬಾರಿ ಕವಿತಾ ಅವರನ್ನು ವಿಚಾರಣೆಗೆ ಮಾಡಿತ್ತು. ಇದರೊಂದಿಗೆ ಕವಿತಾ ಅವರ ಲೆಕ್ಕಪರಿಶೋಧಕನನ್ನೂ ವಿಚಾರಣೆ ನಡೆಸಿತ್ತು. ಇದೀಗಿ ದೆಹಲಿಯ ಕಚೇರಿಗೆ ಶುಕ್ರವಾರ ಹಾಜರಾಗುವಂತೆ ಸಮನ್ಸ್‌ ನೀಡಿದೆ.

ಆಂಧ್ರದಲ್ಲಿ ಟಿಡಿಪಿ, ಜನಸೇನಾ ಮೈತ್ರಿ: ಪವನ್‌ ಕಲ್ಯಾಣ್‌ ಘೋಷಣೆ

Tap to resize

Latest Videos

ರಾಜಮಹೇಂದ್ರವರಮ್‌ (ಆ.ಪ್ರದೇಶ): ಮುಂಬರುವ ಚುನಾವಣೆಗಳಲ್ಲಿ ಟಿಡಿಪಿ ಮತ್ತು ಜನಸೇನಾ ಪಕ್ಷಗಳು (Jana Sena partie) ರಾಜ್ಯದಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್‌ ಕಲ್ಯಾಣ್‌ (actor Pawan Kalyan)ಹೇಳಿದ್ದಾರೆ.

ದಿಲ್ಲಿ ಅಬಕಾರಿ ಹಗರಣ: ಭ್ರಷ್ಟಾಚಾರದಲ್ಲಿ ಆಪ್‌, ಬಿಆರ್‌ಎಸ್‌ ಏಕತೆ: ಮೋದಿ ಚಾಟಿ

ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಬಂಧಿತರಾಗಿ ರಾಜಮಹೇಂದ್ರವರಂ ಕೇಂದ್ರೀಯ ಕಾರಾಗೃಹದಲ್ಲಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು(TDP chief Chandrababu Naidu) ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಪವನ್‌ ‘ವೈಎಸ್‌ಆರ್‌ಸಿಪಿಯ ಜಗನ್‌ ಮೋಹನ್‌ ರೆಡ್ಡಿ (Jagan Mohan Reddy.) ನೇತೃತ್ವದ ಆಡಳಿತವನ್ನು ಸಹಿಸಿಕೊಳ್ಳಲು ಆಂರ್ಧರಪ್ರದೇಶಕ್ಕೆ ಸಾಧ್ಯವಿಲ್ಲ. ಹೀಗಾಗಿ ಮುಂದಿನ ಚುನಾವಣೆಗಳಲ್ಲಿ ಜನಸೇನಾ ಮತ್ತು ಟಿಡಿಪಿ ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸಲಿವೆ’ ಎಂದರು. ಜನಸೇನಾ ಪಕ್ಷವು ಎನ್‌ಡಿಎ ಮೈತ್ರಿಕೂಟದಲ್ಲಿರುವುದರಿಂದ ಆಂಧ್ರ ರಾಜಕೀಯದಲ್ಲಿನ ಈ ಹೊಸ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಟಿಡಿಪಿ ಕೂಡ ಎನ್‌ಡಿಎ ಸೇರಬಹುದು ಎಂಬ ಊಹಾಪೋಹಕ್ಕೆ ನಾಂದಿ ಹಾಡಿದೆ.

ದೆಹಲಿ ಅಬಕಾರಿ ನೀತಿ ಹಗರಣ, ಮನೀಶ್ ಸಿಸೋಡಿಯಾ ಇತರ ಆರೋಪಿಗಳ 52 ಕೋಟಿ ರೂ ಆಸ್ತಿ ಜಪ್ತಿ!

click me!