ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಕಾರಿಗೆ ಅಡ್ಡಬಂದ ಎತ್ತು, ಟ್ವೀಟ್ ಮಾಡಿ ಹೇಳಿದ್ದು ಹೀಗೆ!

Suvarna News   | Asianet News
Published : Mar 16, 2022, 06:48 PM IST
ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಕಾರಿಗೆ ಅಡ್ಡಬಂದ ಎತ್ತು, ಟ್ವೀಟ್ ಮಾಡಿ ಹೇಳಿದ್ದು ಹೀಗೆ!

ಸಾರಾಂಶ

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಸೀತಾಪುರಕ್ಕೆ ಪ್ರಯಾಣ ಪ್ರಯಾಣದ ವೇಳೆ ಅಖಿಲೇಶ್ ಯಾದವ್ ಕಾರಿಗೆ ಅಡ್ಡ ಬಂದ ಎತ್ತು  

ಲಕ್ನೋ (ಮಾ.16): ಉತ್ತರ ಪ್ರದೇಶ ವಿಧಾನಸಭೆಯ (Uttar Pradesh Election) ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಸುಮ್ಮನಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (samajwadi party Chief akhilesh yadav), ಬುಧವಾರ ಕಾರ್ಯಕ್ರಮದ ನಿಮಿತ್ತ ಸೀತಾಪುರಕ್ಕೆ (Sitapur) ಪ್ರಯಾಣ ಬೆಳೆಸಿದ್ದರು. ಈ ವೇಳೆ ಅವರ ಬೆಂಗಾವಲು ಪಡೆಯ ವಾಹನಗಳ ಪೈಕಿ, ಸ್ವತಃ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಎತ್ತು(Bull) ಅಡ್ಡ ಬಂದಿತು. 

ಈ ದೃಶ್ಯವನ್ನು ವಿಡಿಯೋ ಮಾಡಿರುವ ಅಖಿಲೇಶ್ ಯಾದವ್,  ಅದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಸಫರ್ ಮೇ ಸಾಂಡ್ ತೋ ಮಿಲೇಂಗೆ (ಪ್ರಯಾಣದ ವೇಳೆ ಇಲ್ಲಿ ಎತ್ತುಗಳು ಸಿಗುತ್ತವೆ). ನೀವು ನಡೆಯಬಲ್ಲಿರಿ ಎಂದಾದರೆ ಮಾತ್ರ ಬರಬಹುದು. ಉತ್ತರ ಪ್ರದೇಶದ ರಸ್ತೆಗಳ್ಲಿ ಪ್ರಯಾಣ ಮಾಡುವುದೇ ಕಷ್ಟ" ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಮಾಜಿ ಸಚಿವ ನರೇಂದ್ರ ವರ್ಮ ಅವರ ಸಹೋದರ ಮಹೇಂದ್ರ ವರ್ಮ ಅವರ ನಿಧನಕ್ಕೆ ಸಂತಾಪ ಕೋರುವ ಸಲುವಾಗಿ ಅಖಿಲೇಶ್ ಯಾದವ್ ಸೀತಾಪುರಕ್ಕೆ ಬಂದಿದ್ದರು. ಇವರ ಬೆಂಗಾವಲು ಪಡೆ ಸೀತಾಪುರದ ಮಹಮುದಾಬಾದ್ ಬಸ್ ನಿಲ್ದಾಣದಲ್ಲಿ ಬರುತ್ತಿದ್ದ ವೇಳೆಯಲ್ಲಿ ಎತ್ತು ಅಡ್ಡ ಬಂದಿದೆ. ಈ ವೇಳೆ ಒಬ್ಬ ವ್ಯಕ್ತಿ ಇದನ್ನು ವಿಡಿಯೋ ಮಾಡಿದ್ದು, ಅಖಿಲೇಶ್ ಯಾದವ್ ಈ ವಿಡಿಯೋವನ್ನು ಶೇರ್ ಮಾಡುವ ವೇಳೆ ಸರ್ಕಾರವನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯುಪಿ ಚುನಾವಣೆಯಲ್ಲಿ ಎಸ್‌ಪಿ (SP) ಸಾಧನೆ ಕುರಿತು ಸೀತಾಪುರದಲ್ಲಿ ಮಾತನಾಡಿದರು. 'ಈಗಿರುವ ಚುನಾವಣೆಯು ಸಮಾಜವಾದಿಗಳ ನೈತಿಕ ಗೆಲುವಿಗೆ ಕಾರಣವಾಗಿದೆ. ಸಮಾಜವಾದಿ ಕಾರ್ಯಕರ್ತರು ಮತ್ತು ಮುಖಂಡರ ಹೋರಾಟ ಮತ್ತು ಜನರ ಸಹಕಾರದಿಂದ ಸಮಾಜವಾದಿ ಪಕ್ಷದ ಪ್ರಭಾವ ಹೆಚ್ಚುತ್ತಿದೆ ಮತ್ತು ರಾಜ್ಯದಲ್ಲಿ ಬಿಜೆಪಿಯ ಪ್ರಭಾವ ಕಡಿಮೆ ಆಗುತ್ತಿದೆ. ನಮ್ಮ ಸ್ಥಾನ ಮತ್ತು ಮತ ಶೇಕಡಾವಾರು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಖೀಂಪುರ ಫೈಲ್ಸ್ ಏಕೆ ಮಾಡೋದಿಲ್ಲ: ಕಾಶ್ಮೀರದಲ್ಲಿ ಪಂಡಿತರ ಮೇಲಿನ ಹಿಂಸಾಚಾರದ ಕುರಿತಾಗಿ ಬಂದಿರುವ ದಿ ಕಾಶ್ಮೀರ ಫೈಲ್ಸ್ (The Kashimr Files) ಚಿತ್ರದ ಬಗ್ಗೆ ಸೀತಾಪುರದಲ್ಲಿ ಮಾತನಾಡಿದ ಅಖಿಲೇಶ್ ಯಾದವ್, "ಕಾಶ್ಮೀರ ಫೈಲ್ಸ್ ಚಿತ್ರವನ್ನು ಮಾಡಬಹುದಾದರೆ, ಲಖೀಂಪುರದಲ್ಲಿ ಜೀಪ್ ಹತ್ತಿಸಿ ಪ್ರತಿಭಟನಾನಿರತರನ್ನು ಹತ್ಯೆ ಮಾಡಿದ ಘಟನೆಯ ಬಗ್ಗೆ ಲಖೀಂಪುರ ಫೈಲ್ಸ್ (Lakhimpur Files) ಅನ್ನು ಏಕೆ ಮಾಡಬಾರದು" ಎಂದು ಪ್ರಶ್ನೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಪಂಡಿತರ ಮೇಲಿನ ಹಿಂಸಾಚಾರದ ಪರವಾದ ಕಥೆಯನ್ನು ದಿ ಕಾಶ್ಮೀರ ಫೈಲ್ಸ್ ಹೊಂದಿದೆ ಎಂದು ಹೇಳುತ್ತಾರೆ. ಲಖೀಂಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಲಖೀಂಪುರ ಫೈಲ್ಸ್ ಕೂಡ ಮಾಡಬಹುದಲ್ಲವೇ?  ಪಕ್ಕದ ಜಿಲ್ಲೆಯಲ್ಲಿಯೇ ಜೀಪ್ ಹತ್ತಿಸಿ ರೈತರ ಹತ್ಯೆ ಮಾಡಲಾಯಿತು. ಬಹುಶಃ ಮುಂದೊಂದು ದಿನ ಲಖೀಂಪುರ ಹಿಂಸಾಚಾರದ ಕುರಿತಾಗಿಯೂ ಚಿತ್ರ ಬರಬಹುದು ಎಂದರು.

2024ರ ಚುನಾವಣೆಗೆ ಬಿಜೆಪಿ ಸಿದ್ಧತೆ, ಯೋಗಿ ಸರ್ಕಾರ ಸಚಿವರ ಆಯ್ಕೆ ಹೊಣೆ ಅಮಿತ್ ಶಾ ಹೆಗಲಿಗೆ!
ಇದೇ ವೇಳೆ ಚುನಾವಣೆಯ ಬಳಿಕ ಪಕ್ಷದ ಸ್ಥಿತಿಗತಿ ಕುರಿತಾಗಿ ಮಾತನಾಡಿದ ಅವರು, ಇಂದಿಗೂ ಮೂಲಭೂತ ಸಮಸ್ಯೆಗಳು ಭಾರತೀಯ ಜನತಾ ಪಕ್ಷದ ಮುಂದೆ ನಿಂತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಎಸ್ ಪಿ ಪ್ರಭಾವ ಹೆಚ್ಚಾಗಿರುವುದನ್ನು ನೀವು ಚುನಾವಣೆಯಲ್ಲಿ ಗಮನಿಸಿದ್ದೀರಿ ಎಂದು ಹೇಳಿದ್ದಾರೆ. ಹಣದುಬ್ಬರ, ನಿರುದ್ಯೋಗ ಮತ್ತು ಯುಪಿ ಅಭಿವೃದ್ಧಿಯಂತಹ ಮೂಲಭೂತ ವಿಷಯಗಳ ಬಗ್ಗೆ ಬಿಜೆಪಿ ಇಲ್ಲಿನ ಜನರಿಗೆ ಉತ್ತರಿಸಬೇಕಿದೆ ಎಂದಿದ್ದಾರೆ.
.
ಯುಪಿ ಸೋಲಿನ ಬೆನ್ನಲ್ಲೇ ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ!
ಹಣದುಬ್ಬರ-ನಿರುದ್ಯೋಗದಂತಹ ವಿಷಯಗಳನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, "ಇಂತಹ ಫಲಿತಾಂಶವನ್ನು ಯಾರೂ ಊಹಿಸಿರಲಿಲ್ಲ, ಅನೇಕ ಜನರು ವಿಷ ಸೇವಿಸಿದರು, ಅನೇಕ ಜನರು ಬೆಟ್ಟಿಂಗ್ ನಲ್ಲಿ ಸೋಲು ಕೂಡ ಕಂಡರು. ಆದರೆ ಈ ಫಲಿತಾಂಶವು ಭವಿಷ್ಯದಲ್ಲಿ ಸಮಾಜವಾದಿಗಳಿಗೆ ನೈತಿಕ ಜಯವನ್ನು ನೀಡುವ ವಿಶ್ವಾಸ ಮೂಡಿಸಿದೆ" ಎಂದು ಹೇಳಿದರು. ಸದನದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಸಮಾಜವಾದಿಗಳ ಪಾತ್ರ ಇನ್ನು ಮುಂದೆ ಗೋಚರವಾಗಲಿದೆ ಎಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!