ಜಮ್ಮು - ಕಾಶ್ಮೀರದಲ್ಲಿ ಸೇನೆ ಮೇಲೆ ದಾಳಿ: ಚೀನಾ ನಿರ್ಮಿತ ಶಸ್ತ್ರಾಸ್ತ್ರ ಬಳಸ್ತಿರೋ ಭಯೋತ್ಪಾದಕರು

By BK Ashwin  |  First Published Dec 26, 2023, 3:05 PM IST

ಪಾಕಿಸ್ತಾನ ಸೇನೆಗೆ ಡ್ರೋನ್‌, ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಚೀನಾ ಪೂರೈಸುತ್ತಿದೆ. ಇತ್ತೀಚಿನ ದಾಳಿಗಳಲ್ಲಿ ಭಯೋತ್ಪಾದಕ ಗುಂಪುಗಳು ಇದನ್ನು ಬಳಸುತ್ತಿದ್ದು, ಅದಕ್ಕೆ ಪುರಾವೆಗಳು ಭದ್ರತಾ ಪಡೆಗಳಿಗೆ ದೊರೆತಿವೆ.


ನವದೆಹಲಿ (ಡಿಸೆಂಬರ್ 26, 2023): ಜಮ್ಮು ಕಾಶ್ಮೀರದಲ್ಲಿ ಸೇನೆಯ ಮೇಲಿನ ದಾಳಿಗೆ ಭಯೋತ್ಪಾದಕರು ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳನ್ನು ಬಳಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಪ್ತಚರ ಸಂಸ್ಥೆ ಮೂಲಗಳ ಪ್ರಕಾರ, ಜೈಷ್ ಎ ಮೊಹಮ್ಮದ್‌ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗಳು ಸೇನೆಯ ಮೇಲೆ ದಾಳಿ ಮಾಡಲು ಚೀನಾದ ಶಸ್ತ್ರಾಸ್ತ್ರ, ಬಾಡಿಸೂಟ್ ಕ್ಯಾಮೆರಾ ಮತ್ತು ಸಂವಹನ ಸಾಧನಗಳನ್ನು ಬಳಸುತ್ತಿವೆ.

ಪಾಕಿಸ್ತಾನ ಸೇನೆಗೆ ಡ್ರೋನ್‌, ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಚೀನಾ ಪೂರೈಸುತ್ತಿದೆ. ಇತ್ತೀಚಿನ ದಾಳಿಗಳಲ್ಲಿ ಭಯೋತ್ಪಾದಕ ಗುಂಪುಗಳು ಇದನ್ನು ಬಳಸುತ್ತಿದ್ದು, ಅದಕ್ಕೆ ಪುರಾವೆಗಳು ಭದ್ರತಾ ಪಡೆಗಳಿಗೆ ದೊರೆತಿವೆ ಎಂದೂ ಮೂಲಗಳು ತಿಳಿಸಿವೆ. ಈ ವರ್ಷ ನಡೆಸಲಾದ ಮೂರು ಪ್ರಮುಖ ಭಯೋತ್ಪಾದಕ ದಾಳಿಗಳು ಈ ಸಂಬಂಧವನ್ನು ಬಹಿರಂಗಪಡಿಸಿದೆ.

Tap to resize

Latest Videos

ಭಾರತ - ಪಾಕ್‌ ನಡುವೆ ಮಾತುಕತೆ ನಡೆಯದಿದ್ರೆ ಕಾಶ್ಮೀರ ಗಾಜಾ ಆಗಲಿದೆ: ಫಾರೂಕ್ ಅಬ್ದುಲ್ಲಾ

ಒಳನುಸುಳುಕೋರರೊಂದಿಗೆ ಚೀನಾ ಶಸ್ತ್ರಾಸ್ತ್ರ, ಸಾಧನಗಳು 
 ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರು ಭಾರತೀಯ ಸೈನಿಕರ ವಿರುದ್ಧ ಚೀನಾ ತಂತ್ರಜ್ಞಾನದಿಂದ ತಯಾರಿಸಿದ ಸ್ನೈಪರ್ ಗನ್ ಬಳಸುತ್ತಿರುವುದು ಪತ್ತೆಯಾಗಿದೆ. ಅಂತಹ ಒಂದು ದಾಳಿಯನ್ನು ನವೆಂಬರ್‌ನಲ್ಲಿ ನಡೆಸಲಾಗಿದ್ದು, ಅಲ್ಲಿ ಜಮ್ಮು ಗಡಿಯಲ್ಲಿ ಭಾರತೀಯ ಸೈನಿಕನ ವಿರುದ್ಧ ಸ್ನೈಪರ್ ಗನ್ ಬಳಸಲಾಗಿದೆ.

ಈ ವರ್ಷ ಮೂರು ಪ್ರಮುಖ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕ ಸಂಘಟನೆಯು ಬಿಡುಗಡೆ ಮಾಡಿದ ಚಿತ್ರಗಳನ್ನು ಚೀನಾ ನಿರ್ಮಿತ ಬಾಡಿ ಕ್ಯಾಮೆರಾಗಳಿಂದ ತೆಗೆಯಲಾಗಿದೆ ಮತ್ತು ಅವುಗಳನ್ನು ಎಡಿಟ್‌ ಹಾಗೂ ಮಾರ್ಫ್ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಭಯೋತ್ಪಾದಕರು ಸಂವಹನಕ್ಕಾಗಿ ಬಳಸುವ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸಾಧನಗಳು ಸಹ ಚೀನಾ ನಿರ್ಮಿತ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.

ಪಾಕ್‌ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ: ಮೊದಲ ಹಿಂದೂ ಮಹಿಳಾ ಶಾಸಕಿಯಾಗ್ತಾರಾ ಸವೀರಾ ಪ್ರಕಾಶ್?

ಪಾಕಿಸ್ತಾನಿ ಸೇನೆ ನಿಯಮಿತವಾಗಿ ಚೀನಾದಿಂದ ಶಸ್ತ್ರಾಸ್ತ್ರಗಳು, ಕ್ಯಾಮೆರಾಗಳು ಮತ್ತು ಸಂವಹನ ಸಾಧನಗಳ ಸರಬರಾಜುಗಳನ್ನು ಪಡೆಯುತ್ತದೆ, ಆದರೆ ಅವುಗಳನ್ನು ಬಳಸುವ ಬದಲು, ಭಾರತದಲ್ಲಿ ಒಳನುಸುಳುವಿಕೆ ಮತ್ತು ಭಯೋತ್ಪಾದಕ ದಾಳಿಗಳಿಗಾಗಿ ಅವುಗಳನ್ನು POK ನಲ್ಲಿರುವ ಭಯೋತ್ಪಾದಕ ಸಂಘಟನೆಗಳಿಗೆ ಲಭ್ಯವಾಗುವಂತೆ ಮಾಡುತ್ತದೆ.

ಭಾರತೀಯ ಪಡೆಗಳನ್ನು ಡೈವರ್ಟ್‌ ಮಾಡಲು ಚೀನಾ ಪ್ಲ್ಯಾನ್‌
ಗಲ್ವಾನ್‌ನಲ್ಲಿ 2020 ರ ಗಡಿ ವಾಗ್ಯುದ್ಧದ ನಂತರ ಲಡಾಖ್‌ನಲ್ಲಿ ಭಾರತದ ಹೆಚ್ಚಿನ ಸೈನಿಕ ಉಪಸ್ಥಿತಿಯಿಂದ ನಿರಾಶೆಗೊಂಡ ಚೀನಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸಲು ಬಯಸುತ್ತಿದೆ. ಈ ಹಿನ್ನೆಲೆ ಲಡಾಖ್ ಗಡಿಯಿಂದ ಕಾಶ್ಮೀರಕ್ಕೆ ಮತ್ತೆ ಸೈನ್ಯವನ್ನು ನಿಯೋಜಿಸುವಂತೆ ಭಾರತೀಯ ಸೇನೆಯನ್ನು ಒತ್ತಡ ಹೇರಲು ಈ ದಾಳಿ ನಡೆಇರಬಹುದೂ ಎಂದು ಮೂಲಗಳು ಹೇಳಿವೆ.

click me!