ಬದ್ಗಾಮ್(ಮೇ.12): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚಾಗಿದೆ. ಕಳೆದೆರಡು ವಾರದಲ್ಲಿ ಸೇನೆ ಸತತ ಕಾರ್ಯಾಚರಣೆ ನಡೆಸುತ್ತಿದೆ. ಉಗ್ರರು ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಕಂದಾಯ ಇಲಾಖೆ ಉದ್ಯೋಗಿ, ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಚದೂರದಲ್ಲಿರುವ ತಹಸಿಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದೆ. ಇಬ್ಬರು ಉಗ್ರರು ಕಚೇರಿ ಬಳಿ ಆಗಮಿಸಿ ರಾಹುಲ್ ಭಟ್ ಮೇಲೆ ಸತತ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ರಾಹುಲ್ ಭಟ್‌ನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪಾಕ್ ಗಡಿಯಲ್ಲಿ ನಿಗೂಢ ಸುರಂಗ ಪತ್ತೆ, ಅಮರನಾಥ ಯಾತ್ರೆಗೆ ಅಡ್ಡಿಗೆ ಉಗ್ರರ ಯತ್ನ
ತಹಸಿಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ಭಟ್ ಟಾರ್ಗೆಟ್ ಮಾಡಿದ್ದ ಉಗ್ರರು, ನೇರವಾಗಿ ಕಚೇರಿಗ ನುಗ್ಗಿ ರಾಹುಲ್ ಭಟ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿದ್ದ ಸಿಬ್ಬಂದಿಗಳು, ನಾಗರೀಕರು ಭಯಭೀತರಾಗಿ ಹೊರಗೆ ಬಂದಿದ್ದಾರೆ. ಇದರಿಂದ ಉಗ್ರರು ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಹುಲ್ ಭಟ್‌ನನ್ನು SMHS ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬದುಕುಳಿಯಲಿಲ್ಲ. ಕಾಶ್ಮೀರದಲ್ಲಿ ಉಗ್ರರು ಮತ್ತೆ ಪಂಡಿತ್ ಹಾಗೂ ಹಿಂದೂ ಸಮುದಾಯವನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದಾರೆ. ಜಿಹಾದಿ ನಿಲ್ಲದವರೆಗೆ ಈ ದಾಳಿಗಳು ನಿಲ್ಲುವುದಿಲ್ಲ. ಕಾಶ್ಮೀರ ಪಂಡಿತರ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಇದೆ. ದಾಳಿಕೋರರು, ಮೊಘಲರು, ಬ್ರಿಟೀಷರ ಆಡಳಿತದಲ್ಲಿ ಹಾಗೂ ಸ್ವತಂತ್ರ ಭಾರತದಲ್ಲೂ ಕಾಶ್ಮೀರ ಪಂಡಿತರ ಮೇಲೆ ದಾಳಿ ನಡೆಯುತ್ತಿದೆ. 1990ರ ಹತ್ಯಾಕಾಂಡ ಕಣ್ಣಮುಂದಿದೆ. ಆದರೂ ಪಂಡಿತರಿಗೆ ಭದ್ರತೆ ಸಿಕ್ಕಿಲ್ಲ. ತಕ್ಷಣವೇ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್ ಆಗ್ರಹಿಸಿದ್ದಾರೆ.
ಈ ದಾಳಿ ಹೊಣೆಯನ್ನು ಕಾಶ್ಮೀರ ಟೈಗರ್ಸ್ ಉಗ್ರರ ಗುಂಪು ಹೊಣೆ ಹೊತ್ತುಕೊಂಡಿದೆ.
ಕರ್ನಾಲ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಅರೆಸ್ಟ್, ಬುಲೆಟ್, ಗನ್‌ಪೌಡರ್ ವಶಕ್ಕೆ!
ಇತ್ತೀಚೆಗೆ ಕಾಶ್ಮೀರರೇತರ ಮೇಲೆ ದಾಳಿ ಮಾಡಿ ಹಲವರನ್ನು ಹತ್ಯೆ ಮಾಡಿದ್ದರು. ಈ ಮೂಲಕ ಕಾಶ್ಮೀರದಲ್ಲಿ ಹೊರಗಿನಿಂದ ಯಾರು ಬರದಂತೆ ಹಾಗೂ ಸಂಪೂರ್ಣ ಜಮ್ಮು ಕಾಶ್ಮೀರ ಜಿಹಾದಿಗಳದ್ದು ಅನ್ನೋ ಭಯ ಹುಟ್ಟಿಸಲು ದಾಳಿ ಮಾಡಲಾಗಿತ್ತು.
ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್: ಪಾಕ್ ಉಗ್ರ ಸೇರಿ 2 ಉಗ್ರರು ಬಲಿ
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಪಾಕಿಸ್ತಾನದ ಲಷ್ಕರ್-ಎ- ತೊಯ್ಬಾದ ಉಗ್ರ ಸೇರಿದಂತೆ 2 ಉಗ್ರರು ಭದ್ರತಾಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಭಾನುವಾರ ಹತರಾಗಿದ್ದಾರೆ.
‘ದಕ್ಷಿಣ ಭಾರತದ ಚೆಯಾನ್ ದೇವಸರ್‌ನಲ್ಲಿ ಭದ್ರತಾಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಬಂಡಿಪೋರಾದಲ್ಲಿ ನಡೆದ ದಾಳಿಯಲ್ಲಿ ಸಕ್ರಿಯ ಪಾತ್ರವಹಿಸಿದ ಪಾಕಿಸ್ತಾನಿ ಉಗ್ರ ಹೈದರ್ ಗುಂಡೇಟಿಗೆ ಬಲಿಯಾಗಿದ್ದಾನೆ. ಇನæೂಬ್ಬ ಸ್ಥಳೀಯ ಉಗ್ರ ಶಹಬಾಜ್ ಶಾ ಕೂಡಾ ಮೃತಪಟ್ಟಿದ್ದಾನೆ. ಕುಲ್ಗಾಂÜಲ್ಲಿ ಏ.13 ರಂದು ಸತೀಶ್ ಕುಮಾರ್ ಸಿಂಗ್ ಎಂಬುವವರ ಹತ್ಯೆ ಮಾಡಿದ್ದ ಆರೋಪ ಈತನ ಮೇಲಿತ್ತು’ ಎಂದು ಕಾಶ್ಮೀರದ ಐಜಿಪಿ ವಿಜಯ ಕುಮಾರ್ ತಿಳಿಸಿದ್ದಾರೆ.
ಕಾಶ್ಮೀರಕ್ಕೆ ನುಸುಳಲು ಗಡಿಯಲ್ಲಿ ಕಾದಿದ್ದಾರೆ 200 ಪಾಕ್ ಉಗ್ರರು
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರರ ನುಸುಳುವಿಕೆ ಪ್ರಮಾಣ ಕಡಿಮೆಯಾಗಿದೆಯಾದರೂ, ಭಾರತದ ಗಡಿಯೊಳಗೆ ನುಗ್ಗಲೂ ಈಗಲೂ ಪಾಕಿಸ್ತಾನದ ಲಾಂಚ್ ಪ್ಯಾಡ್‌ಗಳಲ್ಲಿ ಕನಿಷ್ಠ 200 ಉಗ್ರರು ಕಾದು ಕುಳಿತಿದ್ದಾರೆ ಎಂದು ಸೇನೆ ಹೇಳಿದೆ.