
ಶ್ರೀನಗರ(ಏ,15): ಕಾಶ್ಮೀರಿ ಪಂಡಿತರು ವಾಸಿಸುತ್ತಿರುವ ಬಾರಾಮುಲ್ಲಾದ ವೀರ್ವಾನ್ ಕಾಲೋನಿಗೆ ಉಗ್ರ ಸಂಘಟನೆಯೊಂದರಿಂದ ಬೆದರಿಕೆ ಪತ್ರ ಬಂದಿದೆ. ಕಾಶ್ಮೀರಿ ಪಂಡಿತರ ಕುರಿತ ‘ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಲಷ್ಕರ್-ಎ-ಇಸ್ಲಾಂ ಎಂಬ ಉಗ್ರ ಸಂಘಟನೆ ಈ ಪತ್ರ ರವಾನಿಸಿದೆ. ‘ಪಂಡಿತರು ಮತ್ತು ಮುಸ್ಲಿಮರಲ್ಲದವರು (ಕಾಫಿರರು) ಇಸ್ಲಾಂಗೆ ಮತಾಂತರ ಆಗಬೇಕು. ಇಲ್ಲವೇ ಕಾಶ್ಮೀರ ಕಣಿವೆ ಬಿಡಬೇಕು. ಇಲ್ಲದೇ ಹೋದರೆ ಸಾವಿಗೆ ಸಿದ್ಧರಾಗಬೇಕು. ಕಾಶ್ಮೀರ ಇರುವುದು ಕೇವಲ ಅಲ್ಲಾನ ಅನುಯಾಯಿಗಳಿಗೆ ಮಾತ್ರ’ ಎಂಬ ಬೆದರಿಕೆ ಒಡ್ಡಲಾಗಿದೆ.
ರಕ್ಷಣಾ ಪಡೆಗಳಿಗೆ ಈ ಪತ್ರ ಮೊದಲು ಪೋಸ್ಟ್ ಮೂಲಕ ಬಂದಿದ್ದು, ಅದನ್ನು ಅವರು ವೀರ್ವಾನ್‌ನಲ್ಲಿರುವ ಪಂಡಿತರ ಕಾಲೋನಿಯ ಅಧ್ಯಕ್ಷರಿಗೆ ನೀಡಿದ್ದಾರೆ. ಈ ಕುರಿತಾಗಿ ಬಾರಾಮುಲ್ಲಾದ ಎಸ್‌ಎಸ್‌ಪಿ ಅವರಿಗೆ ದೂರು ನೀಡಲಾಗಿದೆ ಮತ್ತು ತನಿಖೆ ನಡೆಸುವಂತೆ ಕೋರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪಂಡಿತರ ಕಾಲೋನಿಯಲ್ಲಿ ಸುಮಾರು 350 ಪಂಡಿತರು ವಾಸವಾಗಿದ್ದಾರೆ.
ಲಷ್ಕರ್-ಇ-ಇಸ್ಲಾಂ ಸಂಘಟನೆಯನ್ನು 2015ರಲ್ಲೇ ನಿರ್ನಾಮ ಮಾಡಲಾಗಿದೆ. ಇಲ್ಲಿಯವರೆಗೆ ಅವರು ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವುದರ ಕುರಿಯತಾಗಿ ಸಾಕ್ಷ್ಯಗಳು ಲಭ್ಯವಾಗಿಲ್ಲ. ಕಾಶ್ಮೀರದ ಶಾಂತಿಯನ್ನು ಕದಡಲು ಕಿಡಿಗೇಡಿಗಳು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ