Terror Attack: ಶ್ರೀನರದಲ್ಲಿ ಉಗ್ರರ ಗುಂಡಿನ ದಾಳಿಗೆ 29 ವರ್ಷದ ಪೊಲೀಸ್ ಹುತಾತ್ಮ!

By Suvarna News  |  First Published Nov 7, 2021, 10:28 PM IST
  • ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ್ದ ಉಗ್ರರು
  • ಪೊಲೀಸ್ ಪೇದೆ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು
  • 29 ವರ್ಷಗ ಪೊಲೀಸ್ ಪೇದೆ ಹುತಾತ್ಮ

ಶ್ರೀನಗರ(ನ.07): ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ. ನಾಗರೀಕರನ್ನು ಗುರಿಯಾಗಿಸಿ ನಡೆಯುತ್ತಿದ್ದ ದಾಳಿ ನಿಯಂತ್ರಿಸುವಲ್ಲಿ ಕಣಿವೆ ರಾಜ್ಯದ ಭದ್ರತಾ ಪಡೆ ಯಶಸ್ವಿಯಾಗಿತ್ತು. ಆದರೆ ಇಂದು 29 ವರ್ಷದ ಪೊಲೀಸ್ ಪೇದೆ( Police constable) ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಪೊಲೀಸ್ ಪೇದೆ ಹುತಾತ್ಮರಾಗಿದ್ದಾರೆ.

ಉಗ್ರರ ದಾಳಿಯಲ್ಲಿ ಹತ್ಯೆಯಾದ ಬಿಹಾರ ಕಾರ್ಮಿಕರ ಕುಟುಂಬಕ್ಕೆ ತಲಾ 2 ಲಕ್ಷ ರೂ ಘೋಷಣೆ!

Latest Videos

undefined

ಬಾಟಾಮಾಲೂ ಬಳಿಯ ಎಸ್‌ಡಿ ಕಾಲೋನಿಯಲ್ಲಿರುವ ನಿವಾಸದ ಬಳಿ ಪೊಲೀಸ್ ಪೇದೆ ತೌಸಿಫ್ ಅಹಮ್ಮದ್ ಮೇಲೆ ಗುಂಡಿನ ದಾಳಿ ನಡೆದಿದೆ. ರಾತ್ರಿ 8 ಗಂಟೆಗೆ ಉಗ್ರರು ತೌಸಿಫ್ ಅಹಮ್ಮದ್ ಮೇಲೆ ದಾಳಿ(Terror Attack) ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತೌಸಿಫ್ ಅಹಮ್ಮದ್‌ನನ್ನು ತಕ್ಷಣವೇ  ಸ್ಥಳೀಯ SMHS ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೌಸಿಫ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದೆ. ತೌಸಿಫ್ ಅಹಮ್ಮದ್ ನಿವಾಸದ ಬಳಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಇತ್ತ ಅಡಗಿ ಕುಳಿತಿರುವ ಉಗ್ರರಿಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ.  ದಾಳಿಯನ್ನು ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫೆರೆನ್ಸ್ ಪಕ್ಷ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.  

ಭಯೋತ್ಪಾದನೆ ಭಾರತದತ್ತ ತಿರುಗಿದರೆ ವಾಯುದಾಳಿಗೆ ಸಿದ್ಧರಾಗಿ; ತಾಲಿಬಾನ್ ಉಗ್ರರಿಗೆ ಯೋಗಿ ನೇರ ಎಚ್ಚರಿಕೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರನ್ನು ಗುರಿಯಾಗಿಸಿ ಸತತ ದಾಳಿ ನಡೆದಿದೆ. ಆಕ್ಟೋಬರ್ ತಿಂಗಳಲ್ಲಿ ಬಿಹಾರ ಮೂಲದ ಕಾರ್ಮಿಕರು, ಬೀದಿ ಬದಿ ವ್ಯಾಪಾರಿ ಸೇರಿದಂತೆ ಹಲವು ನಾಗರೀಕರ ಮೇಲೆ ದಾಳಿ ನಡೆದಿತ್ತು. ಈ ಸತತ ದಾಳಿ ಕಣಿವೆ ರಾಜ್ಯದ ಭದ್ರತೆಗೆ ಸವಾಲು ಒಡ್ಡಿತ್ತು.

ಸತತ ದಾಳಿಯಿಂದ ಕಂಗೆಟ್ಟಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಸ್ಪಷ್ಟ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.  ಭದ್ರತೆಯಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ ಎಂದಿದ್ದರು. 

ಪರಿಸ್ಥಿತಿ ಶಾಂತಗೊಂಡಿರುವ ಬೆನ್ನಲ್ಲೇ ದಾಳಿ ನಡೆದಿದೆ. ಪಾಕಿಸ್ತಾನ ಬೆಂಬಲದ ಹಲವು ಉಗ್ರರು ಬಾಟಾಮೂಲೂ ಸೆಕ್ಟರ್‌ನಲ್ಲಿ ಅಡಗಿಕುಳಿತಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. 

ಭಾರತೀಯ ಮೀನುಗಾರರ ಮೇಲೆ ಪಾಕ್ ನೌಕಾಪಡೆ ಗುಂಡಿನ ದಾಳಿ
ಪಾಕಿಸ್ತಾನ ಮತ್ತೊಂದು ಹೀನ ಕೃತ್ಯ ಎಸಗಿ ತನಗೇನು ಗೊತ್ತಿಲ್ಲ ಎಂಬಂತೆ ನಟಿಸುತ್ತಿದೆ. ಇಂದು ಗುಜರಾತ್ ದ್ವಾರಕಾ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ಭಾರತೀಯರ ಮೀನುಗಾರರ(Indian Fisherman) ಮೇಲೆ ಪಾಕಿಸ್ತಾನ ನೌಕಾ(Pakistan Navy) ಪಡೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಮೀನುಗಾರ ಸಾವನ್ನಪ್ಪಿದ್ದಾನೆ. ಹಲವರು ಗಾಯಗೊಂಡಿದ್ದಾರೆ.

ಭಾರತದ ಮೀನುಗಾರರು ಪಾಕಿಸ್ತಾನ ಗಡಿ ಪ್ರವೇಶಿಸಿಲ್ಲ. ಭಾರತದ ಸಮುದ್ರ ಭಾಗದಲ್ಲೇ ಮೀನು ಹಿಡಿಯುತ್ತಿದ್ದರು. ಈ ವೇಳೆ ಮೀನುಗಾರರ ಮೇಲೆ ಪಾಕಿಸ್ತಾನ ನೌಕಾಪಡೆ ಗುಂಡಿನ ದಾಳಿ ನಡೆಸಿದೆ.  ಪಾಕಿಸ್ತಾನ ನಡೆಯನ್ನು ಭಾರತ ಖಂಡಿಸಿದೆ. ಸಾವನ್ನಪ್ಪಿದ ಮೀನುಗಾರ ಶವ ಪರೀಕ್ಷೆಗಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇನ್ನು ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಗುಜರಾತ್ ಕರವಾಳಿ ತೀರದಿಂದ ಮೀನುಗಾರಿಕೆಗಾಗಿ ತೆರಳಿದ ಜಲ್ಪರಿ ಅನ್ನೋ ಬೋಟ್ ದ್ವಾರಕ ಸಮುದ್ರದಲ್ಲಿ ಮೀನುಗಾರಿ ಮಾಡಿದೆ. ಭಾರತ ಗಡಿ ಬಿಟ್ಟು ತೆರಳದ ಮೀನುಗಾರರ ಮೇಲೆ ಸಂಜೆ ನಾಲ್ಕು ಗಂಟೆ ವೇಳೆಗೆ ಪಾಕಿಸ್ತಾನ ನೌಕಾಪಡೆ ಗುಂಡಿನ ದಾಳಿ ನಡೆಸಿದೆ. ಏಕಾಏಕಿ ಗುಂಡಿನ ದಾಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗಿಲ್ಲ. ಭಾರತ ಪ್ರಕರಣವನ್ನು ತನಿಖೆಗೆ ಆದೇಶಿಸಿದೆ. ಆದರೆ ಈ ಕುರಿತು ಪಾಕಿಸ್ತಾನ ಮೌನ ತಾಳಿದೆ.

click me!