ಜೋಮ್ಯಾಟೋ ಫುಡ್ ಡೆಲಿವರಿ ಮೇಲೆ ಗ್ರಾಹಕನಿಗೆ ಹಾಕುವ ತಿನಿಸು ಶುಲ್ಕ, ಕನ್‌ವೀನಿಯನ್ಸ್ ಫೀ, ಇತರ ಚಾರ್ಜಸ್ ಬಳಿಕ ಉತ್ಪನ್ನ ಬೆಲೆ ದುಬಾರಿಯಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ಇದೇ ಚಾರ್ಜಸ್ ಕುರಿತು ಜೋಮ್ಯಾಟೋವನ್ನು ವಿಂಡಬನೆ ಮಾಡಲಾಗಿದೆ. ಜೊಮ್ಯಾಟೋ ಏಳನೀರು ಮಾರಿದರೂ ಬೆಲೆ ಎಷ್ಟಾಗಲಿದೆ?
ಆ್ಯಪ್ ಆಧಾರಿತ ಫುಡ್ ಡೆಲಿವರಿ ಸ್ಟಾರ್ಟ್ಅಪ್ ಗ್ರಾಹಕರ ಮೇಲೆ ಹಲವು ಚಾರ್ಜಸ್ ವಿಧಿಸುತ್ತಾರೆ. ಹೀಗಾಗಿ ಉತ್ಪನ್ನದ ಬೆಲೆಗಿಂತ ವಿಧಿಸುವ ಶುಲ್ಕ ಹೆಚ್ಚಾಗಲಿದೆ. ಈ ಕುರಿತು ಕೆಲ ವಿಡಂಬನೆಗಳು, ಟ್ರೋಲ್, ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಹೊಸದಾಗಿ ಏಳನೀರು ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜೊಮ್ಯಾಟೋ ಏಳನೀರು ಮಾರಾಟ ಮಾಡಿದರೆ ಗ್ರಾಹನಿಗೆ ತಲುವ ವೇಳೆ ಶುಲ್ಕ ಎಷ್ಟಾಗಲಿದೆ ಅನ್ನೋ ವಿಡಂಬನೆ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಅಸಿಮ್ ಇಂಡಿಯಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತ ತಮಾಷೆಯೊಂದು ಭಾರಿ ವೈರಲ್ ಆಗುತ್ತಿದೆ. ಒಂದು ವೇಳೆ ಜೋಮ್ಯಾಟೋ ಏಳನೀರು ಮಾರಾಟ ಮಾಡಲು ಮುಂದಾದರೆ, ಏಳನೀರು ಮೊತ್ತದ ಜೊತೆಗೆ ವಿಧಿಸುವ ಶುಲ್ಕ ಯಾವುದು ಹಾಗೂ ಎಷ್ಟು ಅನ್ನೋದು ವಿವರವಾಗಿ ನೀಡಲಾಗಿದೆ.
ಏಳನೀರು ಬೆಲೆ 50 ರೂಪಾಯಿ.
ತೆಂಗಿನ ಮರ ಹತ್ತುವ ಚಾರ್ಜ್ 20 ರೂಪಾಯಿ,
ಏಳನೀರು ಹಿಡಿದು ತೆಂಗಿನ ಮರ ಇಳಿಯುವ ಚಾರ್ಜ್ 20 ರೂಪಾಯಿ
ಏಳನೀರು ಕತ್ತರಿಸುವ ಚಾರ್ಚ್ 15 ರೂಪಾಯಿ
ಏಳನೀರು ಕುಡಿಯಲು ನೀರುವ ಪರಿಸರ ಸ್ನೇಹಿ ಸ್ಟ್ರಾಗೆ 5 ರೂಪಾಯಿ
ಏಳನೀರು ಕತ್ತರಿಸಿ ಒಳಗಿನ ತಿರುಳು ನೀಡುವ ಚಾರ್ಜ್ 20 ರೂಪಾಯಿ
ಹೆಚ್ಚಿನ ತೂಕದ ಸರ್ಜಚಾರ್ಜ್ 20 ರೂಪಾಯಿ
ತ್ಯಾಜ್ಯ ನಿರ್ವಹಣೆ ಚಾರ್ಜ್ 10 ರೂಪಾಯಿ
ಏಳನೀರು ಮಾರಾಟಗಾರನಿಗೆ ಟಿಪ್ಸ್ 20 ರೂಪಾಯಿ
ಕನ್‌ವೀನಿಯನ್ಸ್ ಶುಲ್ಕ 12 ರೂಪಾಯಿ
ಜಿಎಸ್‌ಟಿ 55.16 ರೂಪಾಯಿ
ಒಟ್ಟು ಬೆಲೆ 252.16 ರೂಪಾಯಿ
undefined
ಎಕ್ಸ್ ಬಳಕೆದಾರನ ಸಲಹೆಗೆ ಜೊಮ್ಯಾಟೋ ಸಿಇಒ ಫುಲ್ ಖುಷ್, ಭರ್ಜರಿ ಉದ್ಯೋಗದ ಆಫರ್!
ಎಲ್ಲಾ ಚಾರ್ಜಸ್ ಬಳಿಕ ಏಳನೀರು ಬೆಲೆ 252.16 ರೂಪಾಯಿ ಆಗಲಿದೆ ಎಂದು ಪೋಸ್ಟ್ ವಿಡಂಬನೆ ಮಾಡಿದೆ.ಆದರೆ ಬಳಕೆದಾರರು ಕೆಲ ಕಮೆಂಟ್ ಮಾಡಿದ್ದಾರೆ. ಇಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸಿಲ್ಲ. ಎಲ್ಲಾ ಉತ್ಪನ್ನದ ಮೇಲೆ ಪ್ಲಾಟ್‌ಫಾರ್ಮ್ ಫೀ ವಿಧಿಸಲಾಗುತ್ತದೆ. ಇದು ಸೇರಿಸಿದರೆ ಏಳನೀರು ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ಟ್ರೋಲ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇದೀಗ ಏಳನೀರು ಭಾರಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಬೆಂಗಳೂರು ಏಳನೀರು ಮಾರಾಟಗಾರ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳಿಗೆ ಚಾಲೆಂಜ್ ಮಾಡಿದ್ದ ಜಾಹೀರಾತು ಭಾರಿ ವೈರಲ್ ಆಗಿತ್ತು. ಬೆಂಗಳೂರಿನ ಏಳನೀರು ಮಾರಾಟಗಾರ ತನ್ನ ಬೀದಿ ಬದಿಯ ಏಳನೀರು ಶಾಪ್ ಮುಂದೆ ಜಾಹೀರಾತು ಅಂಟಿಸಿದ್ದ. ಇದರಲ್ಲಿ ನೀವು ಬ್ಲಿಂಕಿಟ್ ಮೂಲಕ ಏಳನೀರು ಖರೀದಿಸಿದರೆ 80 ರೂಪಾಯಿ, ಜೆಪ್ಟೋ ಮೂಲಕ ಏಳನೀರು ಖರೀದಿಸಿದರೆ 80 ರೂಪಾಯಿ, ಬಿಗ್‌ಬಾಸ್ಕೆಟ್ ಮೂಲಕ ಏಳನೀರು ಆರ್ಡರ್ ಮಾಡಿದರೆ 70 ರೂಪಾಯಿ. ಆದರೆ ನಮ್ಮಲ್ಲಿ ಬನ್ನಿ ಫ್ರೆಶ್ ಏಳನೀರು ಕೇವಲ 55 ರೂಪಾಯಿಗೆ ಎಂದು ಜಾಹೀರಾತು ನೋಟಿಸ್ ಅಂಟಿಸಿದ್ದ. ಈ ಫೋಟೋ ದೇಶಾದ್ಯಂತ ಭಾರಿ ವೈರಲ್ ಆಗಿದೆ.
ಏಳನೀರು ಮಾರಾಟಗಾರ ಆನ್‌ಲೈನ್ ಡೆಲಿವರಿ ಆ್ಯಪ್‌ಗಳಿಗೆ ಸವಾಲು ಹಾಕಿದ್ದ. ಈತನ ಹೊಸ ಮಾರ್ಕೆಂಟಿಂಗ್ ಟೆಕ್ನಿಕ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಏಳನೀರು ಮಾರಾಟಗಾರನ ಬಳಿ ಖರೀದಿಸಿ ಎಂದು ಹಲವರು ಸಲಹೆ ಸೂಚನೆ ನೀಡಿದ್ದರು. ಎಲ್ಲವನ್ನೂ ಆನ್‌ಲೈನ್ ಮೂಲಕ ಖರೀದಿಸಬೇಡಿ, ಬೀದಿ ಬದಿ, ಪಟ್ಟಣದಲ್ಲಿರುವ ವ್ಯಾಪಾರಿಗಳ ಬಳಿ ಖರೀದಿಸಿ. ಕಡಿಮೆ ಬೆಲೆಗೆ ಉತ್ತಮ ಉತ್ಪನ್ನಗಳು ಸಿಗಲಿದೆ ಎಂದು ಹಲವರು ಸಲಹೆ ನೀಡಿದ್ದರು. ಇಷ್ಟೇ ಅಲ್ಲ ಇತ್ತೀಗೆ ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಏಳನೀರು ಬೆಲೆ 60 ರೂಪಾಯಿ ದಾಟಿತ್ತು. ದುಬಾರಿ ಬೆಲೆ ನೋಡಿ ಹಲವರು ಹೌಹಾರಿದ್ದರು.