ತೆಲಂಗಾಣದ ಮಹಿಳೆಯೊಬ್ಬರು ಗಂಡನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾರೆ. ಮೊದಲ ಪತ್ನಿಯ ನಿರ್ಧಾರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಮಹಿಳೆಗೆ ಮದುವೆಯಾಗಿ 10 ವರ್ಷ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಹೈದರಾಬಾದ್: ಮಹಿಳೆ ಎಂದಿಗೂ ತನ್ನ ಕುಟುಂಬವನ್ನು ಬಿಟ್ಟುಕೊಡಲ್ಲ. ಮಹಿಳೆ ತನ್ನ ವಸ್ತುಗಳನ್ನು ಬೇರೆಯವರ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದ್ರೆ ಇಂದಿಗೂ ಗಂಡನ ಪ್ರೀತಿಯನ್ನು ಯಾರೊಂದಿಗೆ ಹಂಚಿಕೊಳ್ಳಲ್ಲ. ಒಂದು ವೇಳೆ ಗಂಡ ಬೇರೆ ಮದುವೆಯಾಗಿ ಬಂದರೆ ಇದನ್ನು ಪತ್ನಿ ಎಂದಿಗೂ ಸಹಿಸಿಕೊಳ್ಳಲ್ಲ. ಗಂಡನ ಎರಡನೇ ಹೆಂಡತಿ ತನ್ನ ಸ್ಥಾನ ಹಾಗೂ ಹಕ್ಕನ್ನು ಕಿತ್ತುಕೊಳ್ಳಲು ಬಂದಿದ್ದಾಳೆ ಎಂಬ ಭಾವನೆಯಿಂದ ಆಕ್ರೋಶ ವ್ಯಕ್ತಪಡಿಸುತ್ತಾಳೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಹಿಳೆಯ ಮುಂದೆ ನಿಂತು ಗಂಡನಿಗೆ ಎರಡನೇ ಮದುವೆ ಮಾಡಿಸಿದ್ದಾರೆ. ಮದುವೆಯ ಎಲ್ಲಾ ಶಾಸ್ತ್ರಗಳನ್ನು ಮಹಿಳೆ ಪೂರೈಸುತ್ತಿದ್ದರನ್ನು ಎಲ್ಲರೂ ಶಾಕ್ ಆಗಿದ್ದರು.
ತೆಲಂಗಾಣದ ಗುಡೂರು ನಿವಾಸಿ ಸರಿತಾ ಎಂಬವರೇ ಪತಿಗೆ ಮದುವೆ ಮಾಡಿಸಿದ ಮಹಿಳೆ. 10 ವರ್ಷಗಳ ಹಿಂದೆ ಸುರೇಶ್ ಎಂಬವರ ಜೊತೆ ಸರಿತಾ ಮದುವೆ ನಡೆದಿತ್ತು. ದಂಪತಿಯ 10 ವರ್ಷದ ದಾಂಪತ್ಯಕ್ಕೆ ಒಂದು ಹೆಣ್ಣು, ಒಂದು ಗಂಡು ಮಗು ಸಾಕ್ಷಿಯಾಗಿದೆ. ಸುರೇಶ್-ಸರಿತಾ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು. ಖುಷಿ ಖುಷಿಯಿಂದಲೇ ಸುರೇಶ್ ಜೊತೆ ಸರಿತಾ ಸಂಸಾರ ನಡೆಸುತ್ತಿದ್ದರು. ಒಮ್ಮೆ ಸರಿತಾಗೆ ಆ ವಿಷಯ ಗೊತ್ತಾಗುತ್ತದೆ. ಆ ವಿಷಯ ತಿಳಿದ ಕೂಡಲೇ ಕೊಂಚವೂ ಯೋಚನೆ ಮಾಡದೇ ಸುರೇಶ್‌ಗೆ ಮದುವೆ ಮಾಡಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಮಗಳನ್ನ ಮದ್ವೆಯಾಗಲು ಹೆಂಡತಿ ಮದ್ಯದಲ್ಲಿ ಸ್ಲೋ ಪಾಯ್ಸನ್ ಹಾಕ್ತಿದ್ದ ಗಂಡ!
ತನ್ನ ಪತಿಯನ್ನು ಸಂಧ್ಯಾ ಎಂಬ ಯುವತಿ ಪ್ರೀತಿಸುತ್ತಿರುವ ವಿಷಯ ಗೊತ್ತಾಗಿದೆ. ಸಂಧ್ಯಾ ಮಹಬೂಬಾಬಾದ್ ಜಿಲ್ಲೆಯ ನಿವಾಸಿಯಾಗಿದ್ದು, ಮಾನಸಿಕ ರೋಗದಿಂದ ಬಳಲುತ್ತಿರುವ ಮಹಿಳೆಯಾಗಿದ್ದರು. ಸಂಧ್ಯಾ ತನ್ನ ಗಂಡನನ್ನು ಪ್ರೀತಿ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೊಂಚವೂ ಯೋಚನೆ ಮಾಡದೇ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದರು. ಸುರೇಶ್-ಸಂಧ್ಯಾ ಮದುವೆ ವಿಷಯ ಸ್ಥಳೀಯಮಟ್ಟದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿತ್ತು. ಆದರೆ ಟೀಕೆಗಳಿಗೆ ಯಾವುದೇ ಬೆಲೆ ಕೊಡದೇ ಸರಿತಾ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಗಂಡನ ಜೊತೆ ಸಂಧ್ಯಾ ಮದುವೆ ಮಾಡಿಸಿದ್ದಾರೆ.
ಸಂಧ್ಯಾ ಮಾನಸಿಕವಾಗಿ ಚಿಕ್ಕ ಮಗುವನಂತೆ ವರ್ತನೆ ಮಾಡುತ್ತಾಳೆ. ಸಂಧ್ಯಾ ಎಲ್ಲದಕ್ಕೂ ಪೋಷಕರ ಮೇಲೆಯೇ ಅವಲಂಬಿತಳಾಗಿದ್ದಾಳೆ. ಈ ಎಲ್ಲಾ ವಿಷಯ ಗೊತ್ತಿದ್ದರೂ ಸಂಧ್ಯಾಳ ಭಾವನೆಗಳನ್ನು ಗೌರವಿಸಿದ ಸರಿತಾ ಗಂಡನನ್ನು ಒಪ್ಪಿಸಿ ಮದುವೆ ಮಾಡಿಸುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ಇದೀಗ ಸಂಧ್ಯಾ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಮದುವೆ ದಿನ ಬಾಸ್‌ನಿಂದ ಬಂದ ಮೆಸೇಜ್ ನೋಡಿ ಯುವತಿ ಶಾಕ್; ಆ ಕ್ಷಣ ಉಸಿರು ನಿಂತತಾಯ್ತು ಎಂದ ವಧು!