
ಹೈದರಾಬಾದ್ (ಮೇ.9): ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣದಲ್ಲಿ, ತನ್ನ ಗಾಯಕ್ಕೆ ಚಿಕಿತ್ಸೆ ಪಡೆಯಲು ಬಂದ ಅಪ್ರಾಪ್ತ ಬಾಲಕನಿಗೆ ಔಷಧಿ ಹಾಕೋದು ಬಿಟ್ಟು 'ಫೆವಿಕ್ವಿಕ್' ಅಂಟು ಹಾಕಿ ಕಳಿಸಿದ ಆರೋಪವನ್ನು ತೆಲಂಗಾಣದ ಆಸ್ಪತ್ರೆಯ ವೈದ್ಯರು ಎದುರಿಸಿದ್ದಾರೆ. ಇದರ ಬೆನ್ನಲ್ಲಿಯೇ ವೈದ್ಯರ ವಿರುದ್ಧ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಇದು ಬಾಲಕನ ಸ್ಥಿತಿಯನ್ನು ಇನ್ನಷ್ಟು ಹದಗೆಟ್ಟಿದ್ದು ಮಾತ್ರವಲ್ಲದೆ, ವೈದ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾದೆ. ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಲೀಜಾ ಪುರಸಭೆಯ ರೇನ್‌ಬೋ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಏಳು ವರ್ಷದ ಬಾಲಕ ಪ್ರವೀಣ್ ಚೌಧರಿ ಇತ್ತೀಚೆಗೆ ಅದೇ ಜಿಲ್ಲೆಯಲ್ಲಿ ತನ್ನ ಹೆತ್ತವರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ. ಆಟವಾಡುವಾಗ ಬಿದ್ದಿದ್ದರಿಂದ ಎಡಗಣ್ಣಿನ ಮೇಲೆ ಕುಯ್ದುಕೊಂಡ ರೀತಿಯಲ್ಲಿ ಗಾಯವಾಗಿತ್ತು.ತಕ್ಷಣವೇ ಬಾಲಕನ್ನು ಪಕ್ಕದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಡಾ.ನಾಗಾರ್ಜುನ ಹಾಗೂ ಅವರ ತಂಡವು ಚಿಕಿತ್ಸೆ ನೀಡಿತ್ತು. ಆದರೆ, ಅವರು ಈ ಹಂತದಲ್ಲಿ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅನ್ನು ಬಳಸಿದ್ದರು.
ಫೆವಿಕ್ವಿಕ್ ಬಳಸಿದ ಬೆನ್ನಲ್ಲಿಯೇ ನೋವು ಇನ್ನಷ್ಟು ತೀವ್ರವಾಗಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡಿಸಿತು. ಇದರ ಬೆನ್ನಲ್ಲಿಯೇ ಬಾಲಕನ ಪಾಲಕರಿಗೆ ಬೇರೆ ವೈದ್ಯರಿಗೆ ಸಂಪರ್ಕ ಮಾಡುವಂತೆ ಹೇಳಲಾಯಿತು. ಈ ವೇಳೆ ವೈದ್ಯರ ಜೊತೆಯಲ್ಲಿ ಚರ್ಚೆ ಮಾಡಿದಾಗ ಹೊಲಿಗೆ ಹಾಕುವ ಬದಲು ವೈದ್ಯ ಫೆವಿಕ್ವಿಕ್ ಬಳಸಿದ್ದ ಎನ್ನುವುದು ಗೊತ್ತಾಗಿದೆ.
ಇದರಿಂದ ಆಕ್ರೋಶಗೊಂಡ ಬಾಲಕನ ಪೋಷಕರು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಪೋಷಕರು ತಮ್ಮ ನಿರ್ಲಕ್ಷ್ಯದ ಬಗ್ಗೆ ವೈದ್ಯರು ಮತ್ತು ಅವರ ಸಹಾಯಕರನ್ನು ವಿರುದ್ಧ ಕೂಗಾಡುತ್ತಿರುವುದು ಕಂಡಿದೆ. ಈ ವಿಡಿಯೋದಲ್ಲಿ ವೈದ್ಯ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿದ್ಯುತ್ ಸಮಸ್ಯೆ ಆಗಿದ್ದ ಕಾರಣಕ್ಕೆ ಈ ಅವಗಢ ಸಂಭವಿಸಿದೆ ಎಂದು ಹೇಳಿದ್ದಾರೆ.
ಗರ್ಭಿಣಿ ಸಾಯಿಸಿದ ಸರ್ಕಾರಿ ವೈದ್ಯರು: ತಾಯಿ ಸತ್ತರೂ ಮಗು ಬದುಕಿಸಿದ ಖಾಸಗಿ ವೈದ್ಯರು.!
'ಇಲ್ಲ ಇಲ್ಲ..ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ, ಇಂಥ ಅವಗಢವಾಗಿದೆ. ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಇದಲ್ಲ' ಎಂದು ವೈದ್ಯ ಹೇಳುತ್ತಿರುವುದು ಕೂಡ ವಿಡಿಯೋದಲ್ಲಿ ದಾಲಾಗಿದೆ. ಅವರು ಪೋಷಕರನ್ನು ಶಾಂತಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾಗ ಆತನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ವೈದ್ಯನ ವೈದ್ಯಕೀಯ ಅರ್ಹತೆಯನ್ನು ಪ್ರಶ್ನೆ ಮಾಡಿದಾಗ ವೈದ್ಯ ಕೂಡ ಕೋಪಗೊಂಡ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ವಿಡಿಯೋ ವೈರಲ್ ಆಗಿದ್ದು, ಆರೋಗ್ಯ ಇಲಾಖೆಯು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದೆ.
Bengaluru: ವೈದ್ಯರ ನಿರ್ಲಕ್ಷ್ಯ ಜ್ಯೂನಿಯರ್ ಆರ್ಟಿಸ್ಟ್ ಸಾವು: ಪೋಷಕರ ಆರೋಪ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ