
ಪಾಟ್ನಾ (ಸೆ.1): ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರ ಮಹಾಘಟಬಂಧನ್ ನಾಯಕರನ್ನು ಮಾತನಾಡಿಸಲು ಬುಧವಾರ ಪಾಟ್ನಾಗೆ ಭೇಟಿ ನೀಡಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು "ಬಿಜೆಪಿ ಮುಕ್ತ ಭಾರತ" (BJP Mukt Bharat ) ಎಂಬ ಘೋಷಣೆಯನ್ನು ಕೂಗಿದ್ದಾರೆ. “ದೇಶವು ಸಮಸ್ಯೆಗಳ ವಲಯವಾಗಿದೆ. ಆದ್ದರಿಂದ, ಬಿಜೆಪಿಯನ್ನು ವಿರೋಧಿಸಲು ಪ್ರತಿ ವಿರೋಧ ಪಕ್ಷವನ್ನು ಒಂದೇ ವೇದಿಕೆಗೆ ತರಲು ನಾವು ನಿರ್ಧರಿಸಿದ್ದೇವೆ. ನಮ್ಮ ಹಿರಿಯ ಸಹೋದರ ನಿತೀಶ್ ಕುಮಾರ್ ಅವರೊಂದಿಗೆ ನಾನು ಈ ಬಗ್ಗೆ ಸಭೆ ನಡೆಸಿದ್ದೇನೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಲು ನಾವು ಒಟ್ಟಿಗೆ ಕುಳಿತುಕೊಳ್ಳುತ್ತೇವೆ. ಬಿಜೆಪಿಯು ದೇಶದಲ್ಲಿ ಸರ್ವಾಧಿಕಾರವನ್ನು ಸ್ಥಾಪಿಸಲು ಪ್ರತಿಪಕ್ಷ ಮುಕ್ತ ಜಾಗವನ್ನು ಬಯಸುತ್ತದೆ. ಆದ್ದರಿಂದ ನಾವು ಬಿಜೆಪಿ ಮುಕ್ತ ಭಾರತಕ್ಕಾಗಿ ನಿರ್ಧರಿಸಿದ್ದೇವೆ ಎಂದು ಕೆಸಿಆರ್ ಹೇಳಿದರು. ಜನಪ್ರಿಯ ನಾಯಕರಾಗಿ, ನರೇಂದ್ರ ಮೋದಿ ಕಳೆದ 8 ವರ್ಷಗಳಿಂದ ಯಾವುದೇ ಸಾಧನೆ ಮಾಡಿಲ್ಲ ಮತ್ತು "ಅವರು ಕೇವಲ ಬೆಚೋ (ಮಾರಾಟ) ಭಾರತ ಅಭಿಯಾನದಲ್ಲಿ ಮಾತ್ರ ಕೆಲಸ ಮಾಡುತ್ತಿದ್ದಾರೆ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಆರೋಪಿಸಿದರು.
ಈ ದೇಶದಲ್ಲಿ ನರೇಂದ್ರ ಮೋದಿಯವರ ಸಾಧನೆ ಏನು? ಜನರು ಸುಲಭವಾಗಿ ಬದುಕಲು ಸಹಾಯ ಮಾಡುವ ಯೋಜನೆ ಯಾವುದನ್ನಾದರೂ ಅವರು ಮಾಡಿದ್ದಾರೆಯೇ? ಅವರ ಸರ್ಕಾರವು ರೈಲ್ವೆ, ವಿಮಾನ ನಿಲ್ದಾಣಗಳು, ಶಿಪ್‌ಯಾರ್ಡ್‌ಗಳು, ಎಲ್‌ಐಸಿ ಸೇರಿದಂತೆ ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ. ದೇಶದಲ್ಲಿ ಕೃಷಿ ಮಾತ್ರ ಅವರ ನಿಯಂತ್ರಣಕ್ಕೆ ಮೀರಿದ ಕ್ಷೇತ್ರವಾಗಿದೆ, ಆದರೆ ಅವರ ಸರ್ಕಾರವೂ ಅದರ ಮೇಲೆ ಕಣ್ಣಿಟ್ಟಿದೆ ಎಂದು ಕಿಡಿಕಾರಿದರು.
14 ತಿಂಗಳ ಕಾಲ ದೇಶದ ರೈತರು ಯಾಕೆ ಧರಣಿ ನಡೆಸಿದರು? ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಏಕೆ ಕ್ಷಮೆಯಾಚಿಸಿದರು ಮತ್ತು ಸಮಸ್ಯೆಯನ್ನು ಸರಿಪಡಿಸುವ ಭರವಸೆ ನೀಡಿದರೂ ಇನ್ನೂ ಏಕೆ ಈಡೇರಿಲ್ಲ? ಕಾರಣವೇನು? ಯಾಕೆಂದರೆ ಅವರ ಮಾತಿಗೆ ಬೆಲೆ ಇಲ್ಲ. ರೈತರ ಮೇಲೆ ಬಾಯಿಗೆ ಬಂದಂತೆ ದಂಡ ವಿಧಿಸುವ ಮತ್ತು ಜಮೀನು ಮಾರಲು ಸಿದ್ಧರಾಗುವಷ್ಟು ದೊಡ್ಡ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಮೋದಿ ಅವರ ಸ್ನೇಹಿತರು ಅದನ್ನು ಖರೀದಿಸಲು ಸಿದ್ಧರಾಗಿದ್ದಾರೆ, ”ಎಂದು ಅವರು ಹೇಳಿದರು.
2014ರಲ್ಲಿ ನಿರ್ಮಾಣವಾದ ದೇಶದಲ್ಲೇ ಅತ್ಯಂತ ಕಿರಿಯ ರಾಜ್ಯ ತೆಲಂಗಾಣ. ಆರಂಭದಲ್ಲಿ ನಮಗೆ ವಿದ್ಯುತ್ ಪೂರೈಕೆ, ರೈತರಿಗೆ ಎಂಎಸ್‌ಪಿ ಹೀಗೆ ಹಲವು ಸವಾಲುಗಳು ಎದುರಾದವು. ಇನ್ವರ್ಟರ್, ಬ್ಯಾಟರಿ, ಸ್ಟೆಬಿಲೈಸರ್, ಮೋಟಾರ್ ವಿಂಡಿಂಗ್‌ಗಳ ವ್ಯಾಪಾರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾವು ವಿಷಯಗಳನ್ನು ಸರಿಪಡಿಸಲು ನಿರ್ಧರಿಸಿದ್ದೇವೆ ಮತ್ತು 2 ವರ್ಷಗಳಲ್ಲಿ, ನಾವು ಪ್ರತಿ ವಲಯದಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ಅನ್ನು ಒದಗಿಸಿದ್ದೇವೆ. ತೆಲಂಗಾಣ ಸರ್ಕಾರವು 7,000 ಖರೀದಿ ಕೇಂದ್ರಗಳನ್ನು ತೆರೆದಿದೆ, ಅಲ್ಲಿ ರಾಜ್ಯ ಸರ್ಕಾರವು ರೈತರ ಕೊನೆಯ ಧಾನ್ಯವನ್ನು MSP ಮೇಲೆ ಖರೀದಿಸುತ್ತಿದೆ. ನಾವು ಅದನ್ನು ಮಾಡಿದರೆ, ನಮಗಿಂತ ಹೆಚ್ಚು ಸಂಪನ್ಮೂಲ ಹೊಂದಿರುವ ಕೇಂದ್ರ ಸರ್ಕಾರಕ್ಕೆ ಇದು ಏಕೆ ಸಾಧ್ಯವಿಲ್ಲ, ”ಎಂದು ಪ್ರಶ್ನಿಸಿದರು.
ಕೆಸಿಆರ್ ಪತನ ಆರಂಭವಾಗಿದೆ: ತೆಲಂಗಾಣ ರ‍್ಯಾಲಿಯಲ್ಲಿ ಅಮಿತ್ ಶಾ ಗುಡುಗು
ದೇಶದಲ್ಲಿ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಯಾವುದೇ ರಾಜ್ಯ ತಾವಾಗಿಯೇ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತಿದ್ದರೆ ಕೇಂದ್ರ ಅದಕ್ಕೆ ಅಡ್ಡಿ ಮಾಡುತ್ತಿದೆ. ತೆಲಂಗಾಣದಲ್ಲಿ (telangana), ನಾವು ಕಲ್ಲಿದ್ದಲು ಗಣಿ ಹೊಂದಿದ್ದೇವೆ, ಅಲ್ಲಿ ನಾವು ಪ್ರತಿ ಟನ್‌ಗೆ 3,600 ರೂ.ಗೆ ಕಲ್ಲಿದ್ದಲನ್ನು ಖರೀದಿಸಬಹುದು ಆದರೆ ಕೇಂದ್ರವು ನಮ್ಮದೇ ಕಲ್ಲಿದ್ದಲು ಗಣಿಯಿಂದ ಪ್ರತಿ ಟನ್‌ಗೆ 25,000 ರೂ.ಗೆ ಕಲ್ಲಿದ್ದಲನ್ನು ಖರೀದಿಸಲು ಆದೇಶವನ್ನು ರವಾನಿಸಿದೆ. ಅದರ ಉತ್ಪಾದನೆ ನಮ್ಮ ರಾಜ್ಯದಲ್ಲಿಯೇ ನಡೆಯುತ್ತಿರುವುದರಿಂದ ಕೇಂದ್ರದ ದರದಲ್ಲಿ ಏಕೆ ಖರೀದಿಸಬೇಕು. ಹಾಗಾಗಿ ನಾವು ಅದನ್ನು ನಿರಾಕರಿಸಿದ್ದೇವೆ ಎಂದು ಅವರು ಹೇಳಿದರು.
ನರೇಂದ್ರ ಮೋದಿಯನ್ನು ಗೋಲ್‌ಮಾಲ್ ಪ್ರಧಾನಿ ಎಂದ ತೆಲಂಗಾಣ ಸಿಎಂ
ಡೊನಾಲ್ಡ್ ಟ್ರಂಪ್ (Donald Tump) ಅವರು ಯುಎಸ್ ಅಧ್ಯಕ್ಷರಾಗಿದ್ದಾಗ ಯುಎಸ್ಎಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರ (Narendra modi) "ಅಬ್ಕಿ ಬಾರ್ ಟ್ರಂಪ್ ಸರ್ಕಾರ್" ಎಂಬ ಘೋಷಣೆಯನ್ನು ಕೂಗಿದರು. "ಮೋದಿ ಜಿ ಅವರು ಅಂತಹ ಘೋಷಣೆಯನ್ನು ಏಕೆ ನೀಡಿದರು ಎಂದು ನಾನು ಕೇಳ ಬಯಸುತ್ತೇನೆ? ಇದು ಅಹಮದಾಬಾದ್ ಕಾರ್ಪೊರೇಷನ್ ಚುನಾವಣೆಯೇ? ಟ್ರಂಪ್ ಚುನಾವಣೆಯಲ್ಲಿ ಸೋತರು ಮತ್ತು ಜೋ ಬಿಡೆನ್ ಗೆದ್ದರು. ಈಗ, ಭಾರತದ ಕಡೆಗೆ ಯುಎಸ್ ತಂತ್ರ ಏನೆಂದು ನೀವು ಊಹಿಸಬಹುದು ಎಂದು ಚಂದ್ರಶೇಖರ್ ರಾವ್ (K Chandrashekar Rao ) ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ