
ಹೈದರಾಬಾದ್: ಪಂಚರಾಜ್ಯ ಚುನಾವಣೆಯ ಭಾಗವಾಗಿರುವ ತೆಲಂಗಾಣದಲ್ಲಿ ನ.30ರ ನಾಳೆ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ಅಬ್ಬರದ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬಿತ್ತು. ಹೀಗಾಗಿ ಬುಧವಾರ ಯಾವುದೇ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರ, ರ್‍ಯಾಲಿ, ಸಭೆ ಸಮಾರಂಭಗಳನ್ನು ಮಾಡಲು ಅನುಮತಿ ಇರುವುದಿಲ್ಲ. ಕೇವಲ ಮನೆ-ಮನೆ ಪ್ರಚಾರ ನಡೆಸಬಹುದು.
ಬಹಿರಂಗ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಬಿಆರ್‌ಎಸ್ ಸ್ಥಾಪಕ ಕೆ. ಚಂದ್ರಶೇಖರ ರಾವ್ ಮಿಂಚಿದರು. ಇಲ್ಲಿನ 119 ಕ್ಷೇತ್ರದಲ್ಲಿ ಗುರುವಾರ ಏಕಕಾಲಕ್ಕೆ ಮತದಾನ ನಡೆಯಲಿದ್ದು, ಒಟ್ಟು 2290 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 3.13 ಕೋಟಿ ಮತದಾರರಿದ್ದು, ಅದರಲ್ಲಿ 1.57 ಪುರುಷರು, 1.56 ಮಹಿಳೆಯರು 2,226 ತೃತೀಯ ಲಿಂಗಿಗಳು ಇದ್ದಾರೆ. ಇದರ ಫಲಿತಾಂಶ ಡಿ.3 ಭಾನುವಾರದಂದು ಹೊರ ಬೀಳಲಿದೆ.
ಮದ್ರಾಸ್, ಬಾಂಬೆ ಬಳಿಕ ಹೈದರಾಬಾದ್ ಮರುನಾಮಕರಣ ಖಚಿತ; ಬಿಜೆಪಿ ರಾಜ್ಯಾಧ್ಯಕ್ಷ!
ನನ್ನನ್ನು ಅಮ್ಮ ಎಂದು ಕರೆದಿದ್ದೀರಿ, ಕಾಂಗ್ರೆಸ್‌ಗೆ ಮತಹಾಕಿ: ಸೋನಿಯಾ
ಹೈದರಾಬಾದ್: ತೆಲಂಗಾಣದ ಜನರು ನನ್ನನ್ನು ಅಮ್ಮ ಎಂದು ಕರೆದಿದ್ದೀರಿ. ಇದರಿಂದಾಗಿ ನನಗೆ ತುಂಬಾ ಸಂತೋಷವಾಗಿದೆ, ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ನಿಮಿತ್ತ ಟ್ವೀಟರ್‌ನಲ್ಲಿ ವಿಡಿಯೋ ಸಂದೇಶ ನೀಡಿರುವ ಅವರು,ತೆಲಂಗಾಣ ರಾಜ್ಯ ರಚನೆ ಮಾಡಿದ್ದು ಕಾಂಗ್ರೆಸ್. ಹಾಗಾಗಿ ಈ ಬಾರಿಯ ಚುನಾವಣೆ ವೇಳೆ ನನ್ನ ಸೋದರಿ, ಅಣ್ಣತಮ್ಮಂದಿರು, ಮಕ್ಕಳು ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ನನಗೆ ಅನಾರೋಗ್ಯ ಕಾಡಿದ ಕಾರಣ ಈ ಬಾರಿ ಚುನಾವಣೆ ಪ್ರಚಾರದಲ್ಲಿ ತೊಡಹಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ. ಈ ವಿಡಿಯೋವನ್ನು ರಾಹುಲ್ ಗಾಂಧಿ ಕೂಡ ಹಂಚಿ ಕೊಂಡು ಮತ ಯಾಚನೆ ಮಾಡಿದ್ದಾರೆ.
ಸುಮ್ನೆ ಕೂತ್ಕೊಳ್ಳಿ, ಇಲ್ಲಾ ಎದ್ದೋಗಿ; ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಗರಂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ