
ನವದೆಹಲಿ (ನ.22): ದುಬೈ ಏರ್‌ಶೋನಲ್ಲಿ ದುರಂತವಾಗಿ ಪತನ ಕಂಡ ತೇಜಸ್ ಯುದ್ಧವಿಮಾನದ ಅತ್ಯಂತ ಸ್ಪಷ್ಟ ವಿಡಿಯೋ ಈಗ ಹೊರಬಂದಿದೆ. ಪೈಲಟ್ ಕೊನೇ ಕ್ಷಣದಲ್ಲಿ ಏನು ಮಾಡಲು ಯತ್ನಿಸಿದ್ದರು ಅನ್ನೋದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಡಬ್ಲ್ಯುಎಲ್ ಟಾನ್ ಏವಿಯೇಷನ್ ವಿಡಿಯೋಸ್ ಈ ಕ್ಲಿಪ್‌ಅನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಪೈಲಟ್ ನಮಾಂಶ್ ಸಯ್ಯಾಲ್, ಅತ್ಯಂತ ಕೊನೇ ಕ್ಷಣದಿಂದ ಯುದ್ಧವಿಮಾನದಿಂದ ಪ್ಯಾರಾಚೂಟ್ ಮೂಲಕ ಹೊರಬರುವ ಪ್ರಯತ್ನ ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಆದರೆ, ಜೆಟ್ ನೆಲಕ್ಕೆ ಅಪ್ಪಳಿಸುವ ವೇಳೆ ಸವರ ಬಳಿ ಸಮಯವಾಗಲಿ, ನೆಲಕ್ಕೆ ಬಡಿಯುವ ಎತ್ತರ ಹೆಚ್ಚಿರುವುದಾಗಲಿ ಇದ್ದಿರಲಿಲ್ಲ.
ದುಬೈ ಏರ್‌ಶೋ ವೇಳೆ ಕೆಳ ಹಂತದ ವೈಮಾನಿಕ ಕುಶಲತೆ ಮಾಡುವ ವೇಳೆ ನೆಲಕ್ಕೆ ಅಪ್ಪಳಿಸಿ ಪತನವಾಗಿತ್ತು. ನೆಲಕ್ಕೆ ಅಪ್ಪಳಿಸಿದ ಬೆನ್ನಲ್ಲಿಯೇ ಭಾರೀ ಪ್ರಮಾಣದ ಬೆಂಕಿಯ ಚೆಂಡು ಉದ್ಭವವಾಗಿತ್ತು. ಸಾಕಷ್ಟು ವಿಡಿಯೋಗಳಲ್ಲಿ ಪತನಗೊಂಡ ಸ್ಥಳದಲ್ಲಿ ದೊಡ್ಡ ಪ್ರಮಾಣದ ಕಪ್ಪು ಹೊಗೆ ಹೊರಬರೋದನ್ನು ಸೂಚಿಸಿದ್ದವು. ಈ ಘಟನೆಯಲ್ಲಿ ಐಎಎಫ್ ಪೈಲಟ್ ಹಿಮಾಚಲ ಪ್ರದೇಶ ಮೂಲದ ವಿಂಗ್ ಕಮಾಂಡರ್ ನಮಾಂಶ್ ಸಯ್ಯಾಲ್ ಸಾವು ಕಂಡಿದ್ದರು.
ಹೊಸ ವಿಡಿಯೋದಲ್ಲಿ ಜೆಟ್ ಪತನವಾಗುವ ಕೊನೇ ಕ್ಷಣದ ವಿಚಾರಗಳು ದಾಖಲಾಗಿವೆ. ಈ ವಿಡಿಯೋ ಕ್ಲಿಪ್‌ನ 49-52 ಸೆಕಂಡ್‌ನ ಟೈಮ್‌ಸ್ಟಾಂಪ್‌ನಲ್ಲಿ ಅಂದರೆ, ಜೆಟ್ ನೆಲಕ್ಕೆ ಅಪ್ಪಳಿಸಿ ಬೆಂಕಿಯ ಚೆಂಡು ಹೊರಬೀಳುವ ಕೆಲ ಮಿಲಿ ಸೆಕಂಡ್‌ಗೂ ಮುನ್ನ ಪ್ಯಾರಚೂಟ್‌ನಂಥ ವಸ್ತು ಕಂಡುಬಂದಿದೆ. ಇದು ವಿಡಿಯೋದಲ್ಲೂ ದಾಖಲಾಗಿದೆ. ಇದರ ಪ್ರಕಾರ, ಪೈಲಟ್ ಯುದ್ದವಿಮಾನದಿಂದ ಹೊರಬರುವ ಪ್ರಯತ್ನ ನಡೆಸಿದ್ದ. ಆದರೆ, ಅದಾಗಲೇ ಬಹಳ ತಡವಾಗಿತ್ತು.ಬಹುತೇಕ ನಿಷ್ಕಳಂಕ ಸುರಕ್ಷತಾ ದಾಖಲೆಯನ್ನು ಹೊಂದಿರುವ ಯುದ್ಧವಿಮಾನವನ್ನು ಉಳಿಸಲು ಮತ್ತು ನಿಯಂತ್ರಣವನ್ನು ಮರಳಿ ಪಡೆಯಲು ಪೈಲಟ್ ಪ್ರಯತ್ನಿಸಿದ್ದರಿಂದ ಇದು ಸಂಭವಿಸಿರುವ ಸಾಧ್ಯತೆ ಇದೆ.
ಇದು ಭಾರತದ ಮೊದಲ ಸ್ವದೇಶಿ ನಿರ್ಮಿತ ಹಗುರ ಬಹುಪಯೋಗಿ ಯುದ್ಧ ವಿಮಾನವಾದ ತೇಜಸ್‌ಗೆ ಸಂಬಂಧಿಸಿದ ಮೊದಲ ಸಾವು, ಇದು ತನ್ನ 10 ವರ್ಷಗಳ ಸೇವೆಯಲ್ಲಿ 2ನೇ ಬಾರಿ ಅಪಘಾತವಾಗಿದೆ. ಆದರೆ, ಪೈಲಟ್ ಸಾವು ಕಂಡಿದ್ದು ಇದೇ ಮೊದಲು. ಕಳೆದ ವರ್ಷ ಮಾರ್ಚ್‌ನಲ್ಲಿ ಜೈಸಲ್ಮೇರ್ ಬಳಿ ತೇಜಸ್ ಅಪಘಾತಕ್ಕೀಡಾಯಿತು. ಆದಾಗ್ಯೂ, ಆಗ ಪೈಲಟ್ ಸುರಕ್ಷಿತವಾಗಿ ಹೊರಹೋಗುವಲ್ಲಿ ಯಶಸ್ವಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ