
ದುಬೈ (ನ.22) ಭಾರತೀಯ ಯುದ್ಧ ವಿಮಾನ ತೇಜಸ್ ದುಬೈ ಏರ್ ಶೋನಲ್ಲಿ ಪತನಗೊಂಡ ಘಟನೆ ಭಾರತೀಯರಿಗೆ ತೀವ್ರ ನೋವುಂಟು ಮಾಡಿದೆ. ತೇಜಸ್ ಯುದ್ಧ ವಿಮಾನ ಪತನದಲ್ಲಿ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ದುರ್ಮರಣಕ್ಕೀಡಾಗಿದ್ದಾರೆ. ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಸಾಹಸ ಪ್ರದರ್ಶನ ನೀಡುತ್ತಿದ್ದಂತೆ ಪತನಗೊಂಡಿದೆ. ಏರ್ ಶೋ ವೀಕ್ಷಣೆಗೆ ಆಗಮಿಸಿದ್ದ ಹಲವರು ತೇಜಸ್ ಯುದ್ಧ ವಿಮಾನ ಪತನದ ವಿಡಿಯೋ ಸೆರೆ ಹಿಡಿದಿದ್ದರು. ಆದರೆ ಆಗಸ ಹಾಗೂ ಪತನದ ದೃಶ್ಯಗಳು ಸ್ಪಷ್ಟವಾಗಿರಲಿಲ್ಲ. ಇದೀಗ ಅತೀವ ಹತ್ತರದಿಂದ ಚಿತ್ರೀಕರಿಸಿದ ತೇಜಸ್ ಯುದ್ಧ ವಿಮಾನದ ಅಂತಿಮ ಕ್ಷಣಗಳ ವಿಡಿಯೋ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ವಿಂಗ್ ಕಮಾಂಡರ್ ನಿಮಾಂಶ್ ತಾಳ್ಮೆಯಿಂದ ಮೈಜುಮ್ಮೆನಿಸುವ ಸಾಹಸ ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
WLಟನ್ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ತನ್ನ ತೇಜಸ್ ಯುದ್ದ ವಿಮಾನದ ಮೂಲಕ ಆಗಸದಲ್ಲಿ ಚಿತ್ತಾರ ಬರೆದೆದಿದ್ದಾರೆ. ಏರೋಬ್ಯಾಟಿಕ್ ಮ್ಯಾನ್ಯೋವರ್ ಸಾಹಸದ ವೇಳೆ ಈ ಅಪಘಾತ ಸಂಭವಿಸಿದೆ.ಲೋ ಅಲ್ಟಿಟ್ಯೂಡ್‌ನಲ್ಲಿ ಈ ಸಾಹಸ ಮಾಡಲಾಗಿದೆ. ಈ ವಿಡಿಯೋದಲ್ಲಿ ವಿಂಗ್ ಕಮಾಂಡರ್ ತೇಜಸ್ ಯುದ್ಧ ವಿಮಾನವನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಹಸ ಪ್ರದರ್ಶಿಸುತ್ತಿರುವುದು ಗೋಚರಿಸುತ್ತದೆ. ಬ್ಯಾರೆಲ್ ರೋಲ್ ಸಾಹಸ ಪ್ರದರ್ಶನ ಎಲ್ಲವನ್ನೂ ನಮಾಂಶ್ ಸ್ಯಾಲ್ ಮಾಡಿದ್ದಾರೆ. ಇವೆಲ್ಲವೂ ಅತೀ ಕಡಿಮೆ ಅ್ಯಲ್ಟಿಟ್ಯೂಡ್‌ನಲ್ಲಿ ಮಾಡಲಾಗಿದೆ. ಯಾವಾಗ ಬ್ಯಾರೆಲ್ ರೋಲ್ ಪೂರ್ಣಗೊಳಿಸಿ ನೆಗೆಟೀವ್ ಜಿ ಟರ್ನ್ ಮಾಡುತ್ತಿದ್ದಂತೆ ವಿಮಾನದ ವೇಗ ಮತ್ತಷ್ಟು ಹೆಚ್ಚಾಗುತ್ತದೆ. ಕಾರಣ ಕೆಳಮುಖವಾಗಿ ವಿಮಾನ ಹಾರುವ ಕಾರಣ ವೇಗ ಮತ್ತಷ್ಟು ಹೆಚ್ಚಾಗಲಿದೆ. ಹೀಗೆ ವೇಗವೂ ಹೆಚ್ಚಾಗಿತ್ತು. ಲೋ ಆ್ಯಲ್ಟಿಟ್ಯೂಡ್ ಜೊತೆಗೆ ವಿಮಾನ ಏಕಾಏಕಿ ನೆಲಕ್ಕೆ ಅಪ್ಪಳಿಸಿದೆ. ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿಯ ಉಂಡೆಯಾಗಿ ಧಗಧಹಿಸಿದೆ. ಕೆಲವೇ ಸೆಕೆಂಡ್‌ಗಳಲ್ಲಿ ತೇಜಸ್ ಯುದ್ಧ ವಿಮಾನ, ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಸುಟ್ಟು ಭಸ್ಮವಾಗಿದ್ದಾರೆ.
ಈ ವಿಡಿಯೋದಲ್ಲಿ ತೇಜಸ್ ಯುದ್ಧ ವಿಮಾನ ಆಗಸದಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಸಾಹಸ ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಇದೇ ವೇಳೆ ಅಂತಿಮ ಕ್ಷಣದಲ್ಲಿ ತೇಜಸ್ ಯುದ್ದ ವಿಮಾನ ಭೂಮಿಗೆ ಅಪ್ಪಳಿಸುವ ದೃಶ್ಯ ಹಾಗೂ ಅಗ್ನಿ ಜ್ವಾಲೆಯಾಗಿ ಹೊತ್ತಿ ಉರಿದ ದೃಶ್ಯಗಳು ಸೆರೆಯಾಗಿದೆ.
34 ವರ್ಷದ ನಮಾಂಶ್ ಸ್ಯಾಲ್ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯವರು. ಭಾರತೀಯ ವಾಯು ಸೇನೆಯ ಭರವಸೆಯ ಹಾಗೂ ಅತ್ಯಂತ ತಾಳ್ಮೆಯ ಪೈಲೆಟ್ ಎಂದೇ ಗುರುತಿಸಿಕೊಂಡಿದ್ದಾರೆ. ಯಾವುದೇ ಸಂದರ್ಭ, ಸವಾಲುಗಳನ್ನು ತಾಳ್ಮೆಯಿಂದಲೇ ಯಶಸ್ವಿಯಾಗಿ ಎದುರಿಸುವ ವಿಶೇಷ ಕಲೆ ನಮಾಂಶ್ ಸ್ಯಾಲ್ ಬಳಿ ಇತ್ತು. ನಮಾಂಶ್ ಸ್ಯಾಲ್ ಪತ್ನಿ ಕೂಡ ಭಾರತೀಯ ವಾಯುಸೇನೆ ಅಧಿಕಾರಿಯಾಗಿದ್ದಾರೆ. 6 ವರ್ಷದ ಮಗಳು, ಪೋಷಕರು, ಕುಟುಂಬಸ್ಥರನ್ನು ನಮಾಂಶ್ ಅಗಲಿದ್ದಾರೆ.ನಮಾಂಶ್ ಸ್ಯಾಲ್ ತಂದೆ ಜಾಗರನಾಥ್ ಸ್ಯಾಲ್ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ