
ನವದೆಹಲಿ (ನ.21): ನವದೆಹಲಿ (ನ.21): ದುಬೈ ಏರ್ ಶೋನಲ್ಲಿ ಶುಕ್ರವಾರ ಮಧ್ಯಾಹ್ನ ಹಾರಾಟ ಪ್ರದರ್ಶನದ ವೇಳೆ ತೇಜಸ್ ಯುದ್ಧ ವಿಮಾನವೊಂದು ಪತನಗೊಂಡಿದೆ. ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದನ್ನು ಜನಸಂದಣಿ ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊಗಳ ಪ್ರಕಾರ, ಭಾರತದ ಎಚ್‌ಎಎಲ್ ನಿರ್ಮಿತ ತೇಜಸ್ ಸ್ಥಳೀಯ ಸಮಯ ಮಧ್ಯಾಹ್ನ 2:10 ರ ಸುಮಾರಿಗೆ ಅಪಘಾತಕ್ಕೆ ಈಡಾಗಿದೆ ಅನ್ನೋದನ್ನ ತೋರಿಸಿದೆ. ಬಳಿಕ ಅಪಘಾತಕ್ಕೆ ಒಳಗಾದ ಸ್ಥಳದಿಂದ ದಟ್ಟವಾದ ಹೊಗೆ ಸ್ಥಳವನ್ನು ಆವರಿಸಿದೆ. ಘಟನೆಯಲ್ಲಿ ಪೈಲಟ್ ಸಾವು ಕಂಡಿದ್ದಾನೆ. ಭಾರತೀಯ ವಾಯುಪಡೆಯಿಂದ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.
ಸಿಂಗಲ್ ಸೀಟರ್ ಲೈಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ಯುದ್ಧವಿಮಾನವನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿರ್ಮಾಣ ಮಾಡಿದೆ. ಮಧ್ಯಾಹ್ನದ ವೇಳೆಗೆ ಇದು ನೋಡನೋಡುತ್ತಿದ್ದಂತೆ ಆಗಸದಿಂದ ಕೆಳಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಮಾನ ಕೆಳಗೆ ಬೀಳುವ ಯಾವುದೇ ಹಂತದಲ್ಲಿ ಪೈಲಟ್, ಕಾಕ್‌ಪಿಟ್‌ನಿಂದ ಹೊರಬರುವ ದೃಶ್ಯ ಕಂಡಿಲ್ಲ. ಪೈಲ್ ಬದುಕುಳಿದಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಭಾರತೀಯ ವಾಯುಸೇನೆಯಿಂದ ಅಧಿಕೃತ ಪ್ರಕಟಣೆಗಾಗಿ ಕಾಯಲಾಗುತ್ತಿದೆ.
ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ದ್ವೈವಾರ್ಷಿಕ ದುಬೈ ಏರ್ ಶೋ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಈ ವಾರ ಈ ಕಾರ್ಯಕ್ರಮದಲ್ಲಿ ಪ್ರಮುಖ ಘೋಷಣೆಗಳು ನಡೆದಿವೆ, ಇದರಲ್ಲಿ ಎಮಿರೇಟ್ಸ್ ಮತ್ತು ಫ್ಲೈ ದುಬೈನಿಂದ ಬಹು-ಶತಕೋಟಿ ಡಾಲರ್ ವಿಮಾನ ಆರ್ಡರ್‌ಗಳು ಸೇರಿವೆ.
ಎರಡು ವರ್ಷಗಳ ಅವಧಿಯಲ್ಲಿ ತೇಜಸ್ ಯುದ್ಧವಿಮಾನ ಒಳಗೊಂಡ 2ನೇ ಅಪಘಾತ ಇದಾಗಿದೆ. ಮಾರ್ಚ್ 2024 ರಲ್ಲಿ, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧವಿಮಾನವು ಪತನಗೊಂಡಿತ್ತು. 2001 ರಲ್ಲಿ ಅದರ ಮೊದಲ ಪರೀಕ್ಷಾ ಹಾರಾಟದ ನಂತರ ವಿಮಾನದ 23 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಅಪಘಾತವಾಗಿತ್ತು. ಆ ಸಂದರ್ಭದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಜಿಗಿದಿದ್ದ.
ತೇಜಸ್ 4.5-ಪೀಳಿಗೆಯ ಬಹು-ಪಾತ್ರದ ಯುದ್ಧ ವಿಮಾನವಾಗಿದ್ದು, ವಾಯು-ರಕ್ಷಣಾ ಕಾರ್ಯಾಚರಣೆಗಳು, ಆಕ್ರಮಣಕಾರಿ ವಾಯು ಬೆಂಬಲ ಮತ್ತು ನಿಕಟ-ಯುದ್ಧ ಕಾರ್ಯಾಚರಣೆಗಳನ್ನು ನಿರ್ವಹಿಸಲು ನಿರ್ಮಿಸಲಾಗಿದೆ. ಇದು ತನ್ನ ವರ್ಗದಲ್ಲಿ ಅತ್ಯಂತ ಹಗುರವಾದ ಮತ್ತು ಚಿಕ್ಕದಾದ ಫೈಟರ್ ಏರ್‌ಕ್ರಾಫ್ಟ್‌ಗಳಲ್ಲಿ ಒಂದಾಗಿದೆ.
ಜೆಟ್ ನ ಪ್ರಮುಖ ಲಕ್ಷಣವೆಂದರೆ ಅದರ ಮಾರ್ಟಿನ್-ಬೇಕರ್ ಜೀರೋ ಟು ಜೀರೋಎಜೆಕ್ಷನ್ ಸೀಟ್, ಪೈಲಟ್‌ಗಳು ಟೇಕ್-ಆಫ್, ಲ್ಯಾಂಡಿಂಗ್ ಅಥವಾ ಕಡಿಮೆ-ಮಟ್ಟದ ಕುಶಲತೆಯಂತಹ ಜೀರೋ ಸ್ಪೀಟ್ ಮತ್ತು ಜೀರೋ ಸ್ಪೀಡ್‌ನಲ್ಲಿಯೂ ಸುರಕ್ಷಿತವಾಗಿ ಹೊರಹೋಗಲು ಅನುವು ಮಾಡಿಕೊಡಲು ವಿನ್ಯಾಸಗೊಳಿಸಲಾಗಿದೆ. ಈ ವ್ಯವಸ್ಥೆಯು ಮೇಲಾವರಣವನ್ನು ಸ್ಫೋಟಿಸಲು, ಪೈಲಟ್ ಅನ್ನು ವಿಮಾನದಿಂದ ದೂರ ತಳ್ಳಲು ಮತ್ತು ಇಳಿಯುವಿಕೆಯನ್ನು ಸ್ಥಿರಗೊಳಿಸಲು ಪ್ಯಾರಾಚೂಟ್‌ಗಳನ್ನು ನಿಯೋಜಿಸಲು ಸ್ಫೋಟಕ ಚಾರ್ಜ್ ಅನ್ನು ಬಳಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ