
ಬಾಲ್ಯವೆಂದರೆ ಊಟ ಆಟ ಪಾಠದ ಜೊತೆಗೆ ಭವಿಷ್ಯದ ಕನಸು ಕಾಣಬೇಕಾದ ವಯಸ್ಸು. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಗರ್ಭಿಣಿಯಾದರೆ ಆ ಮಕ್ಕಳ ಮಾನಸಿಕ, ದೈಹಿಕ ಸ್ಥಿತಿ ಏನಾಗಿರಬೇಡ? ಊಹಿಸಲು ಕಷ್ಟ. ಆದರೆ ವಾಸ್ತವ. ಕೆಲವು ಹದಿಹರೆಯದ ಹೆಣ್ಣುಮಕ್ಕಳು ಕುಟುಂಬ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಕಟ್ಟುಪಾಡು, ಅನಕ್ಷರತೆಯಿಂದಾಗಿ ಇಂಥ ಅನಿವಾರ್ಯತೆಗೆ ಸಿಕ್ಕು ಚಿಕ್ಕ ವಯಸ್ಸಿಗೆ ಗರ್ಭಿಣಿಯಾಗುತ್ತಿದ್ದಾರೆ. ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಬೇಕಾದ ಪುಟ್ಟ ಮಕ್ಕಳ ಬದುಕಿನಲ್ಲಿ ಚಿಕ್ಕವಯಸ್ಸಿಗೆ ಗರ್ಭಿಣಿಯಾಗಿ ಪ್ರಸವವೇದನೆ ಅನುಭವಿಸುವುದೆಂದರೆ? ಕಲ್ಪಿಸಿಕೊಂಡರೂ ಆಘಾತವಾಗುತ್ತದೆ. ಆದ್ರೂ ನಿಜ; ಭಾರತದ ಈ ರಾಜ್ಯದಲ್ಲಿ ಬಾಲ್ಯದಲ್ಲಿಯೇ ಗರ್ಭಿಣೀಯಾಗುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಕಾರಣವೇನು? ಯಾವ ರಾಜ್ಯವದು? ತಿಳಿಯೋಣ.
ಜಾರ್ಖಂಡ್‌ನಲ್ಲಿ ಹದಿಹರೆಯದ ವಯಸಿನಲ್ಲಿ ಗರ್ಭಿಣಿಯಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಈ ರಾಜ್ಯದಲ್ಲಿ ಅದೆಷ್ಟು ಸಾಮಾನ್ಯವಾಗಿದೆಯೆಂದರೆ ಇಲ್ಲಿ ಬಾಲ್ಯ ವಿವಾಹ, ಮದುವೆಗೆ ಮುನ್ನ ಗರ್ಭಧಾರಣೆ, ಮಕ್ಕಳಲ್ಲಿ ಅಪೌಷ್ಠಿಕತೆಯಂತಹ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -6 (NFHS-6) ರ ಮಾಹಿತಿಯ ಪ್ರಕಾರ, ಜಾರ್ಖಂಡ್‌ನಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಮಾಣ ಶೇಕಡಾ 9.8 ರಿಂದ ಶೇಕಡಾ 11.7 ಕ್ಕೆ ಏರಿದೆ! ಇನ್ನು ಬೆಚ್ಚಿಬೀಳಿಸುವ ಸಂಗತಿಯೆಂದರೆ ಇಲ್ಲಿನ ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶದಲ್ಲೇ ಅತಿ ಹೆಚ್ಚಾಗಿದೆ.
ನಗರಗಳಿಗಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲೇ ಹದಿಹರೆಯದ ಗರ್ಭಧಾರಣೆಯು ಸುಮಾರು ಮೂರು ಪಟ್ಟು ಹೆಚ್ಚು ಎಂದು ವರದಿ ಹೇಳುತ್ತದೆ. ಯುನಿಸೆಫ್‌ನ ಜಾರ್ಖಂಡ್ ರಾಜ್ಯ ಮುಖ್ಯಸ್ಥೆ ಡಾ. ಕನಿನಿಕಾ ಮಿತ್ರಾ ಅವರು ಹೇಳುವಂತೆ, ನಗರಗಳಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಮಾಣ ಶೇ. 4.7 ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ. 13.3 ಕ್ಕೆ ಏರಿದೆ. ಇದು ಶೇ. 8.6 ರಷ್ಟು!ಈ ಅಸಮಾನತೆಯು ಕೇವಲ ಆರೋಗ್ಯ ವ್ಯವಸ್ಥೆಯ ಕೊರತೆಯಿಂದಲ್ಲ, ಬದಲಾಗಿ ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಣ, ಸಾಮಾಜಿಕ ಕಟ್ಟುಪಾಡುಗಳು, ನಂಬಿಕೆಗಳು, ಬಾಲ್ಯವಿವಾಹ, ಹದಿಹರೆಯದ ಹುಡುಗಿಯರು ಗರ್ಭಧಾರಣೆ ಪ್ರಮಾಣ ಹೆಚ್ಚಲು ಕಾರಣ.
NFHS-5 ರ ಸಮಯದಲ್ಲಿ ಜಾರ್ಖಂಡ್‌ನಲ್ಲಿ ಶೇ. 32 ರಷ್ಟಿದ್ದ ಬಾಲ್ಯ ವಿವಾಹ ಪ್ರಮಾಣವು NFHS-6 ರಲ್ಲಿ ಶೇ. 28 ಕ್ಕೆ ಇಳಿದಿದೆ. ಆದರೂ ಈ ಇಳಿಕೆ ನಿರೀಕ್ಷಿಸಿದಷ್ಟು ಇಲ್ಲ ಎಂದು ತಜ್ಞರು ಹೇಳುತ್ತಾರೆ. UNICEF ಪ್ರಕಾರ, ರಾಜ್ಯದಲ್ಲಿ ಶೇ. 28 ರಷ್ಟು ಬಾಲ್ಯ ವಿವಾಹಗಳು, ಅಪ್ರಾಪ್ತರ ಗರ್ಭಧಾರಣೆಗೆ ಕಾರಣವಾಗುತ್ತವೆ. ರಾಷ್ಟ್ರೀಯ ಬಾಲ್ಯ ವಿವಾಹ ರೇಟಿಂಗ್ ಶೇ. 20 ರಷ್ಟಿದ್ದರೆ, ಬಾಲ್ಯ ವಿವಾಹದ ಅತಿ ಹೆಚ್ಚು ಹೊಂದಿರುವ 5 ರಾಜ್ಯಗಳಲ್ಲಿ ಜಾರ್ಖಂಡ್ ನಾಲ್ಕನೇ ಸ್ಥಾನದಲ್ಲಿದೆ.
ಬಾಲ್ಯ ವಿವಾಹ ಮತ್ತು ಹರಿಹರೆಯದವರ ಗರ್ಭಧಾರಣೆಯ ಒಂದಕ್ಕೊಂದು ನೇರ ಸಂಬಂಧವಿದೆ. ಬಾಲ್ಯ ವಿವಾಹವು ಹದಿಹರೆಯದ ಹುಡುಗಿಯರ ಮೇಲೆ ಬೇಗನೆ ತಾಯಂದಿರಾಗುವ ಒತ್ತಡ ಹೆಚ್ಚಿಸುತ್ತದೆ. ಆದರೆ ಇದೊಂದೇ ಕಾರಣವೆಂದು ಹೇಳಿದರೆ ತಪ್ಪಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಮುಖ್ಯವಾಗಿ ಇನ್ನು ಕೆಲವು ಕಾರಣಗಳಿವೆ; ಶಾಲೆ ಬಿಡುವುದು, ಸುರಕ್ಷತಾ ಕಾಳಜಿ ಕೊರತೆ, ಉದ್ಯೋಗಾವಕಾಶಗಳ ಕೊರತೆ, ಸಾಮಾಜಿಕ ಪದ್ಧತಿ, ನಂಬಿಕೆಗಳು ಕೂಡ ಕಾರಣಗಳಾಗಿವೆ. ಅದರಲ್ಲೂ ಪ್ರೈಮರಿ ಸ್ಕೂಲ್ ಸರ್ಕಾರಿ ಶಾಲೆಯಲ್ಲಿ ಓದಿದ ಬಳಿಕ ಮುಂದಿನ ಮಾಧ್ಯಮ, ಪ್ರೌಢ ಶಿಕ್ಷಣಕ್ಕೆ, ಉಚಿತ ಪ್ರವೇಶದ ವ್ಯವಸ್ಥೆಯಿಲ್ಲದಿರುವುದು ಒಂದು ಸಮಸ್ಯೆಯಾಗಿದೆ ಎಂದು ಡಾ. ಕನಿನಿಕಾ ವಿವರಿಸುತ್ತಾರೆ. ಇಲ್ಲಿನ ಅನೇಕ ಕುಟುಂಬಗಳು ಪ್ರೈಮರಿ ಸ್ಕೂಲ್ ಊರಲ್ಲೇ ಓದಿಸಿದರೂ ಪ್ರೌಢ ಶಿಕ್ಷಣಕ್ಕೆ ದೂರದ ಶಾಲೆಗಳಿಗೆ ಕಳಿಸಲು ಕಷ್ಟವೆಂದು ಶಾಲೆಯನ್ನ ಬಿಡಿಸುತ್ತಾರೆ. ಬೆಳೆದ ಹೆಣ್ಣು ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು ಸುರಕ್ಷಿತೆ ಬಗ್ಗೆ ಚಿಂತೆ. ಹೀಗಾಗಿ ಬಾಲ್ಯದಲ್ಲೇ ಮದುವೆ, ಗರ್ಭಧಾರಣೆಯಾಗಲು ಪ್ರಮುಖ ಕಾರಣವಾಗಿದೆ.
ಕೆಲವು ಬುಡಕಟ್ಟು ಸಮುದಾಯಗಳಲ್ಲಿ, ಹುಡುಗಿ ಅಥವಾ ಹುಡುಗನ ಆಯ್ಕೆಯ ಆಧಾರದ ಮೇಲೆ ಮದುವೆ ಮಾಡಿಕೊಳ್ಳುವ ಮಾಡುವ ಸಂಪ್ರದಾಯವಿದೆ ಇದನ್ನ. "ಧುಕು" ಎಂದು ಕರೆಯುತ್ತಾರೆ. ಈ ಸಾಂಪ್ರದಾಯಿಕ ಲಿವ್-ಇನ್ ಟುಗೆದರ್ ಆಚರಣೆಗಳು ಕೂಡ ಕಾರಣ. ತಜ್ಞರ ಪ್ರಕಾರ, ಕೆಲವು ಬುಡಕಟ್ಟು ಪ್ರದೇಶಗಳಲ್ಲಿನ ಈ ಸಾಂಪ್ರದಾಯಿಕ ಪದ್ಧತಿಗಳು ಹದಿಹರೆಯದ ಹುಡುಗಿಯರು ಗರ್ಭಧಾರಣೆ, ತಾಯ್ತನಕ್ಕೆ ಸಂಬಂಧಿಸಿದ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯುವುದು ಕಷ್ಟಕ. ತಾವು ಗರ್ಣಿಣಿಯಾಗಿರುವುದೇ ಬೇಗ ತಿಳಿಯುವುದಿಲ್ಲ. ಹೀಗಾಗಿ ಪ್ರಮುಖ ಪ್ರಸವಪೂರ್ವ ತಪಾಸಣೆಗಳು ಅಥವಾ ಅಂತಹ ವೈದ್ಯಕೀಯ ಸೇವೆಗಳು ಇಲ್ಲದಿರುವುದರಿಂದ, ಸರಿಯಾದ ಪೋಷಣೆ, ಕಬ್ಬಿಣ-ಫೋಲಿಕ್ ಆಮ್ಲ ಮತ್ತು ಇತರ ಅಗತ್ಯ ಔಷಧಿಗಳು ಕೂಡ ಸಿಗುವುದಿಲ್ಲ, ಹದಿಹರೆಯದ ಮಕ್ಕಳು ಗರ್ಭಧಾರಣೆಯ ಹಿಂದಿನ ಕಾರಣಗಳು ಹೀಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ