Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ

Published : Sep 05, 2022, 12:04 PM IST
Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ

ಸಾರಾಂಶ

ಇನ್ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ವೈರಲ್‌ ಆಗಲು ಹೋಗಿ ಈಗ ದೇಶವ್ಯಾಪಿ ಸುದ್ದಿಯಾಗಿದ್ದಾನೆ ಈ ಯುವಕ. ರೈಲನ್ನು ಹಿನ್ನೆಲೆಯಾಗಿಟ್ಟುಕೊಂಡು ವಿಡಿಯೋ ತೆಗೆಸಿಕೊಳ್ಳಲು ಹೋಗಿ ಹಿಂದಿನಿಂದ ವೇಗವಾಗಿ ಬಂದ ರೈಲು ಆತನಿಗೆ ಡಿಕ್ಕಿ ಹೊಡೆದಿದೆ. 

ಈಗಿನ ಹಲವು ಯುವಕ - ಯುವತಿಯರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral) ಆಗೋ ಹುಚ್ಚು. ಈ ಹಿನ್ನೆಲೆ ಇನ್ಸ್ಟಾಗ್ರಾಮ್‌ (Instagram), ಯೂಟ್ಯೂಬ್‌ (Youtube), ಫೇಸ್‌ಬುಕ್‌ನಲ್ಲಿ (Facebook) ತಮ್ಮ ವಿಡಿಯೋ, ಫೋಟೋಗಳನ್ನು ವೈರಲ್‌ ಮಾಡಲು ನಾನಾ ರೀತಿ ಪ್ರಯತ್ನ ನಡೆಸುತ್ತಾರೆ. ಇದೇ ರೀತಿ, ರೈಲನ್ನು ಹಿನ್ನೆಲೆಯಾಗಿಟ್ಟುಕೊಂಡು ಇನ್ಸ್ಟಾಗ್ರಾಮ್‌ ರೀಲ್ಸ್ (Instagram Reels) ಮಾಡಲು ಹೋಗಿ ಈಗ ಯುವಕ ಸಾವು - ಬದುಕಿನ ನಡುವೆ ಹೋರಾಡುತ್ತಿದ್ದಾನೆ. ತೆಲಂಗಾಣದ (Telangana) ವಾರಂಗಲ್‌ (Warangal) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರೈಲ್ವೆ ಟ್ರ್ಯಾಕ್‌ನಲ್ಲಿ ಇನ್‌ಸ್ಟಾಗ್ರಾಮ್‌ ರೀಲ್ಸ್ ಮಾಡಲು ಪ್ರಯತ್ನಿಸುತ್ತಿದ್ದ ಹದಿಹರೆಯದ ಯುವಕನಿಗೆ ಟ್ರೈನ್‌ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದಾನೆ. ತೆಲಂಗಾಣದ ವಾರಂಗಲ್‌ ಜಿಲ್ಲೆಯ ವಡ್ಡೆಪಲ್ಲಿ (Vaddepalli) ರೈಲ್ವೆ ಟ್ರ್ಯಾಕ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಾಝಿಪೇಟ್‌ನಿಂದ ಮಂಚಿರ್ಯಾಲ ಪ್ರದೇಶಕ್ಕೆ ಈ ರೈಲು ಪ್ರಯಾಣಿಸುತ್ತಿತ್ತು ಎಂದೂ ತಿಳಿದುಬಂದಿದೆ. 

11 ನೇ ತರಗತಿಯ ವಿದ್ಯಾರ್ಥಿಯು ಟ್ರ್ಯಾಕ್ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದ ಹಾಗೂ ಚಲಿಸುತ್ತಿರುವ ರೈಲನ್ನು ತನ್ನ ಹಿನ್ನೆಲೆಯಾಗಿ ಹೊಂದಲು ಪ್ರಯತ್ನಿಸುತ್ತಿದ್ದನು. ಆದರೆ, ವೇಗವಾಗಿ ಬಂದ ರೈಲು ಯುವಕನಿಗೆ ಡಿಕ್ಕಿ ಹೊಡೆದಿದೆ. ವೈರಲ್‌ ವಿಡಿಯೋ ತೆಗೆಯಲು ಇಷ್ಟೆಲ್ಲ ಸಹಸ ಮಾಡುವ ಹುಚ್ಚಾಟ ಮಾಡಲು ಹೋದ ಆತನ ಸಾಹಸಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಭಾನುವಾರ ಕಾಲೇಜಿಗೆ ರಜೆ ಇದ್ದ ಕಾರಣ ಅಕ್ಷಯ್‌ ಹಾಗೂ ಆತನ ಮೂವರು ಗೆಳೆಯರು ರೀಲ್ಸ್‌ ಮಾಡಲು ಹೋಗಿದ್ದರು. ಈ ಪೈಕಿ ಅಕ್ಷಯ್‌ಗೆ ಮಾತ್ರ ಗಾಯಗಳಾಗಿದ್ದು, ಆತನ ಸ್ನೇಹಿತರು ಅಪಘಾತದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದ ಯುವಕ: ರಕ್ಷಣಾ ಪಡೆಯಿಂದ ಶೋಧ ಕಾರ್ಯಾಚರಣೆ

ಇನ್ನು, ವಾರಂಗಲ್ ಜಿಲ್ಲೆಯ ಸ್ಥಳೀಯ ಕಾಲೇಜಿನಲ್ಲಿ (Local College) ಮೊದಲನೇ ವರ್ಷದಲ್ಲಿ ಓದುತ್ತಿರುವ ಅಕ್ಷಯ್ ಎಂಬ ವಿದ್ಯಾರ್ಥಿಗೆ ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ. ಹಳಿಯಲ್ಲಿದ್ದ ಅಕ್ಷಯ್‌ನನ್ನು ಗಮನಿಸಿದ ರೈಲ್ವೆ ಸಿಬ್ಬಂದಿ 108 ಆಂಬ್ಯುಲೆನ್ಸ್‌ಗೆ (Ambulance) ಕರೆ ಮಾಡಿ ಆತನನ್ನು ಸಮೀಪದ ಆಸ್ಪತ್ರೆಗೆ (Hospital) ಸ್ಥಳಾಂತರ ಮಾಡಿದ್ದಾರೆ. ಸದ್ಯ, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಯ ತಲೆ (Head) , ಎಡ ಕಿವಿಗೆ (Left Ear) ಪೆಟ್ಟುಗಳು ಬಿದ್ದಿವೆ ಎಂದೂ ವರದಿಗಳಾಗಿವೆ. ದುರದೃಷ್ಟವಶಾತ್, ರೈಲ್ವೆ ಹಳಿಗಳಂತಹ ಅಪಾಯಕಾರಿ ಪ್ರದೇಶಗಳಲ್ಲಿ ಇನ್ಸ್ಟಾಗ್ರಾಮ್‌ ರೀಲ್ಸ್‌ ಮಾಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವ ಯುವಕರು ಮತ್ತು ಯುವತಿಯರನ್ನು ಒಳಗೊಂಡ ಅಪಘಾತಗಳು ದೇಶದಲ್ಲಿ ತುಂಬಾ ಸಾಮಾನ್ಯವಾಗಿದೆ. ಇದರಲ್ಲಿ ಹಲವರು ಬಲಿಯಾಗಿದ್ದಾರೆ. 

ಇದೇ ರೀತಿ, ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಯುವಕನೊಬ್ಬ ಫೊಟೋ, ವಿಡಿಯೋ ತೆಗೆಸಿಕೊಳ್ಳಲು ಹೋಗಿ ಜಲಪಾತದ ಬಳಿ ಅಪಾಯಕಾರಿ ಸ್ಥಳದಲ್ಲಿ ನಿಂತುಕೊಡಿದ್ದಾನೆ. ಬಳಿಕ, ಕಾಲು ಜಾರಿ ಜಲಪಾತಕ್ಕೆ ಬಿದ್ದಿರುವ ಘಟನೆ ಕಳೆದ ತಿಂಗಳು ನಡೆದಿತ್ತು. ತಮಿಳುನಾಡಿನ ಕೊಡೈಕೆನಾಲ್‌ನ ಬಳಿಯ ಪುಲ್ಲವೇಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಳಕ್ಕೆ ಬಿದ್ದ ಯುವಕನನ್ನು 26 ವರ್ಷದ ಅಜಯ್‌ ಪಾಂಡಿಯನ್‌ ಎಂದು ಗುರುತಿಸಲಾಗಿತ್ತು. ಇನ್ನು, ಆತನ ಸ್ನೇಹಿತ ಸಂಪೂರ್ಣ ದೃಶ್ಯಾವಳಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಆ ಅಪಾಯಕಾರಿ ಸ್ಥಳಕ್ಕೆ ಹೋಗುವಾಗ ಅಜಯ್‌ ಸ್ನೇಹಿತ ವಿಡಿಯೋ ತೆಗೆಯುತ್ತಿದ್ದ, ನಂತರ ಆ ಸ್ಥಳದಲ್ಲಿ ಫೋಟೋಗೆ ಪೋಸ್‌ ನೀಡಿದ ಬಳಿಕ ಜಲಪಾತದತ್ತ ತಿರುಗಿ ನೋಡಲು ಹೋದಾಗ ಕಾಲು ಜಾರಿ ಯುವಕ ಜಲಪಾತಕ್ಕೆ ಅಂದರೆ ಕೆಳಗೆ ಬಿದ್ದಿದ್ದಾನೆ. ಆಗಸ್ಟ್‌ 3, ಬುಧವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು. 

ವಿಶ್ವದ ಈ ಸ್ಥಳಗಳಲ್ಲಿ ಸೆಲ್ಫಿ ಬ್ಯಾನ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ