
ಜೈಪುರ: ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರಪ್ರಸಾರಕ್ಕೆ ಹಾಕಲಾಗಿದ್ದ ಬೃಹತ್ ಟೀವಿ ಪರದೆಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದಕ್ಕೆ ಮಹಿಳಾ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್‌ರನ್ನು ಯಾವುದೇ ಹುದ್ದೆ ನೀಡದೇ ಎತ್ತಂಗಡಿ ಮಾಡಲಾಗಿದೆ. ಮೋದಿ ರಾಜಸ್ಥಾನದ ನಾಪ್ಲಾ ಗ್ರಾಮದಲ್ಲಿ 3 ದಿನ ಹಿಂದೆ ಸಭೆ ನಡೆಸಿದ್ದರು. ಈ ವೇಳೆ ನೇರಪ್ರಸಾರಕ್ಕೆ ದೊಡ್ಡ ಪರದೆ ಹಾಕಲಾಗಿತ್ತು. ಆಗ ಪದೇ ಪದೇ ಆಡಿಯೋ, ವಿಡಿಯೋ ತೊಂದರೆ ಆಗಿ ಖಾಲಿ ಪರದೆ ಕಾಣಿಸಿತ್ತು. ಪರಿಣಾಮ ಜನರಿಗೆ ಪ್ರಧಾನಿ ಮಾತು ಆಲಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಕಾರ್ಯಕ್ರಮದ ತಾಂತ್ರಿಕ ಕೆಲಸದ ಮುಂದಾಳತ್ವ ವಹಿಸಿದ್ದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಕಾರ್ಯದರ್ಶಿ ಅರ್ಚನಾ ಸಿಂಗ್‌ರನ್ನು ರಾಜ್ಯ ಸರ್ಕಾರ ಯಾವುದೇ ಹುದ್ದೆ ನೀಡದೆ ಎತ್ತಂಗಡಿ ಮಾಡಿದೆ.
ಮೋದಿಯಿಂದ ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಕಾಪಿ: ಕಾಂಗ್ರೆಸ್ ವ್ಯಂಗ್ಯ
ನವದೆಹಲಿ: ‘ಕರ್ನಾಟಕದ ಗೃಹಲಕ್ಷ್ಮೀ ಯೋಜನೆಯನ್ನು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಬಿಹಾರದಲ್ಲಿ ಅಂಥದ್ದೇ ಯೋಜನೆಯನ್ನು ತಂದಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.ಬಿಜೆಪಿ-ಜೆಡಿಯು ಬಿಹಾರದಲ್ಲಿ 75 ಲಕ್ಷ ಮಹಿಳೆಯರಿಗೆ 10 ಸಾವಿರ ರು. ನೀಡುವ ಯೋಜನೆ ಜಾರಿಗೆ ತಂದಿವೆ. ಈ ಬಗ್ಗೆ ಮಾತನಾಡಿರುವ ಜೈರಾಂ,‘ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಳೆದ 2 ವರ್ಷಗಳಿಂದಲೂ 1.3 ಕೋಟಿ ಮಹಿಳೆಯರಿಗೆ ಮಾಸಿಕ 2500 ರು. ಕೊಡುತ್ತಿದೆ. ಇದನ್ನು ಅಂದಿನಿಂದಲೂ ಮೋದಿ ಟೀಕಿಸುತ್ತಿದ್ದರು. ಈಗ ಅವರೇ ನಮ್ಮ ಯೋಜನೆಯನ್ನು ಅನುಸರಿಸಿದ್ದಾರೆ. ಚುನಾವಣೆ ನಂತರ ಸಿಎಂ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ಮಾಜಿಯಾಗುತ್ತಾರೆ’ ಎಂದರು.
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ, ಬರೋಬ್ಬರಿ 97 ಸಾವಿರ ಟವರ್ ಮೂಲಕ ಜನರಿಗೆ ಮೂಲೆ ಮೂಲೆಗೆ 4ಜಿ ನೆಟ್‌ವರ್ಕ್ ಸರ್ವೀಸ್ ನೀಡಲಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ್ದಾರೆ. ಭಾರದ ಮೂಲೆ ಮೂಲೆಯಲ್ಲಿ ಈ 4ಜಿ ನೆಟ್‌ವರ್ಕ ಲಭ್ಯವಾಗುತ್ತಿದೆ. ಬಿಎಸ್ಎನ್ಎಲ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕಳೆದ 25 ವರ್ಷಗಳಿಂದ ಭಾರತದಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ ಬಿಎಸ್ಎನ್‌ಎಲ್, 25ನೇ ವರ್ಷಕ್ಕೆ ಸ್ವದೇಶಿ 4ಜಿ ನೆಟವರ್ಕ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ 4ಜ ನೆಟ್‌ವರ್ಕ್ ಸರ್ವೀಸ್ ಲಾಂಚ್ ಮಾಡಿದೆ. 25 ಅಥವಾ ಅದಕ್ಕಿಂತ ಹೆಚ್ಚು ವರ್ಷ ಸ್ವದೇಶಿ ಟೆಲಿಕಾಂ ಕಂಪನಿಯೊಂಂದು ಕಾರ್ಯಾನಿರ್ವಹಿಸುತ್ತಿರುವುದು ಇದೇ ಮೊದಲು, ಇಷ್ಟೇ ಅಲ್ಲ ಡೆನ್ಮಾರ್ಕ್, ಸ್ವೀಡನ್, ಸೌತ್ ಕೊರಿಯ ಹಾಗೂ ಚೀನಾದಂತ ದಿಗ್ಗಜ ದೇಶಗಳ ಸಾಲಿಗೆ ಸೇರಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜಿಎಸ್‌ಟಿ 2.0 ಜಾರಿ ಕುರಿತು ದೇಶವನ್ನುದ್ದೇಶಿ ಮಾತನಾಡಿದ್ದರು. ಸೆಪ್ಟೆಂಬರ್ 22ರಿಂದ ದೇಶದಲ್ಲಿ ಹೊಸ ಜಿಎಸ್‌ಟಿ ದರ ಜಾರಿಯಾಗಿದೆ. ಇದಕ್ಕೂ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ಜಿಎಸ್‌ಟಿ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ್ದರು. ಇದೇ ವೇಳೆ ಸ್ವದೇಶಿ, ಸ್ವಾಲಂಬನೆ ಹಾಗೂ ಆತ್ಮನಿರ್ಭರತೆ ಭಾರತ ಕುರಿತು ಮತ್ತೆ ಮಹತ್ವದ ವಿಚಾರ ಪ್ರಸ್ತಾಪಿಸಿದ್ದರು. ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಲು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಮೋದಿ ಸ್ವದೇಶಿ 4ಜಿ ಸರ್ವೀಸ್ ಲಾಂಚ್ ಮಾಡುವ ಮೂಲಕ ಬಿಎಸ್ಎನ್ಎಲ್ ವ್ಯಾಪ್ತಿ ವಿಸ್ತರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ