ಚುನಾವಣೆ ಗೆಲ್ಲುತ್ತಿದ್ದಂತೆ 858 ಕೋಟಿಗೆ ಏರಿಕೆಯಾದ ಚಂದ್ರಬಾಬು ನಾಯ್ಡು ಆಸ್ತಿ: ಹೇಗೆ ಗೊತ್ತಾ? 

By Mahmad Rafik  |  First Published Jun 8, 2024, 1:00 PM IST

52 ವರ್ಷಗಳಲ್ಲಿ ಹೆರಿಟೇಜ್ ಫುಡ್ ಶೇರುಗಳ ಗರಿಷ್ಠ ಬೆಲೆ 661.75 ರೂಪಾಯಿ ಆಗಿತ್ತು. ಅಂತಿಮ ಮತದಾನದ ದಿನ ಅಂದ್ರೆ ಜೂನ್ 1ರಂದು ಸ್ಟಾಕ್ ಬೆಲೆ 402.80 ರೂ.ಗೆ ಮುಕ್ತಾಯಗೊಂಡಿತ್ತು. ಜೂನ್ 3ರಿಂದ ಜೂನ್ 7ರ ನಡುವಿನ ಅವಧಿಯಲ್ಲಿ ಶೇರುಗಳ ಬೆಲೆಗಳು ಸತತವಾಗಿ ಏರಿಕೆ ಕಾಣುತ್ತಾ ಬಂದಿದೆ. 


ಹೈದರಾಬಾದ್: ಆಂಧ್ರಪ್ರದೇಶ ಮೂಲದ ಹೆರಿಟೇಜ್ ಫುಡ್ (Heritage Foods) ಕಂಪನಿಯ ಶೇರುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಶೇರುಗಳ ಬೆಲೆಯಲ್ಲಿ ಶೇ.64ರಷ್ಟು ಅಂದ್ರೆ ಪ್ರತಿ ಶೇರುಗಳ ಬೆಲೆಯಲ್ಲಿ 259 ರೂ.ಗಳಷ್ಟು ಏರಿಕೆಯಾಗಿದೆ. ಷೇರುಗಳ ಬೆಲೆ ಏರಿಕೆಯಿಂದ ಚಂದ್ರಬಾಬು ನಾಯ್ಡು ಕುಟುಂಬದ (Chandrabau Naidu Family) ಆಸ್ತಿ 858 ಕೋಟಿ ರೂಪಾಯಿಗೆ ತಲುಪಿದೆ. ಶುಕ್ರವಾರ ಹೆರಿಟೇಜ್ ಫುಡ್ಸ್‌ನ ಷೇರುಗಳು ಶೇ.10ರಷ್ಟು ಅಪ್ಪರ್ ಸರ್ಕ್ಯೂಟ್‌ನಲ್ಲಿ ಕೊನೆಯಾಗಿವೆ. 52 ವರ್ಷಗಳಲ್ಲಿ ಹೆರಿಟೇಜ್ ಫುಡ್ ಶೇರುಗಳ ಗರಿಷ್ಠ ಬೆಲೆ 661.75 ರೂಪಾಯಿ ಆಗಿತ್ತು. ಅಂತಿಮ ಮತದಾನದ ದಿನ ಅಂದ್ರೆ ಜೂನ್ 1ರಂದು ಸ್ಟಾಕ್ ಬೆಲೆ 402.80 ರೂ.ಗೆ ಮುಕ್ತಾಯಗೊಂಡಿತ್ತು. ಜೂನ್ 3ರಿಂದ ಜೂನ್ 7ರ ನಡುವಿನ ಅವಧಿಯಲ್ಲಿ ಶೇರುಗಳ ಬೆಲೆಗಳು ಸತತವಾಗಿ ಏರಿಕೆ ಕಾಣುತ್ತಾ ಬಂದಿದೆ. 

ನಿಯೋಜಿತ ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಕುಟುಂಬ ಹೆರಿಟೇಜ್ ಫುಡ್ಸ್ ಕಂಪನಿಯ ಶೇ.35.71 ಶೇರುಗಳನ್ನು ಹೊಂದಿದೆ. ಈ ಶೇರುಗಳ ಬೆಲೆ 3,31,36,005 ರೂಪಾಯಿ ಆಗಿದೆ. ಹರಿಟೇಜ್ ಶೇರು ಮುಖಬೆಲೆ 259 ರೂ.ಗಳಷ್ಟು ಹೆಚ್ಚಾಗಿದ್ದು, ನಾಯ್ಡು ಕುಟುಂಬದ ಆಸ್ತಿಯಲ್ಲಿ 858 ಕೋಟಿ ರೂಪಾಯಿ ಹೆಚ್ಚಳವಾಗುತ್ತದೆ. ಈ ಮೂಲಕ ಚುನಾವಣೆ ಗೆಲ್ಲುತ್ತಿದ್ದಂತೆ ಚಂದ್ರಬಾಬು ನಾಯ್ಡು ಆಸ್ತಿ ಏರಿಕೆ ಕಾಣುತ್ತಿದೆ.

Tap to resize

Latest Videos

ವಾರ್ಷಿಕ 1 ಕೋಟಿಗೂ ಅಧಿಕ ಪ್ಯಾಕೇಜ್‌ ಪಡೆಯುವ ಇನ್ಫೋಸಿಸ್‌ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ!

ಯಾರ ಹೆಸರಿನಲ್ಲಿ ಎಷ್ಟಿವೆ ಶೇರುಗಳು?

ಮಾರ್ಚ್ 31, 2024ರ ಸ್ಟೇಕ್ ಪ್ರಕಾರ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಹೆರಿಟೇಜ್‌ ಫುಡ್ಸ್‌ನಲ್ಲಿ ಶೇ.10.82ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ ಹಾಗೂ ಸಂಸ್ಥೆಯ ಪ್ರವರ್ತಕರಾಗಿದ್ದಾರೆ. ಇದೇ ಕಂಪನಿಯಲ್ಲಿ ಚಂದ್ರಬಾಬು ನಾಯ್ಡು ಪತ್ನಿ ಭುವನೇಶ್ವರಿ ನಾರಾ ಮತ್ತು ಮೊಮ್ಮಗ ದೇವಾಂಶ್ ನಾರಾ ಕ್ರಮವಾಗಿ ಶೇ.24.37 ಮತ್ತು ಶೇ.0.06 ಶೇರು ಹೊಂದಿದ್ದಾರೆ. ಸೊಸೆ ನಾರಾ ಬ್ರಾಹ್ಮಿಣಿ ಸಹ ಹೆರಿಟೇಜ್ ಫುಡ್ಸ್‌ನಲ್ಲಿ ಶೇ.046 ಶೇರುಗಳನ್ನು ಹೊಂದಿದ್ದಾರೆ. 

3,201 ಕೋಟಿ ರೂ. ಆದಾಯ ಹೊಂದಿರುವ ಕಂಪನಿ

1992ರಲ್ಲಿ ಚಂದ್ರಬಾಬು ನಾಯ್ಡು ಹೆರಿಟೇಜ್ ಫುಡ್ಸ್ ಕಂಪನಿ ಆರಂಭಿಸಿದ್ದು, ಇದು ಡೈರಿ ಉತ್ಪನ್ನ ಮತ್ತು ಇಂಧನ ಮರುಬಳಕೆಯಡಿ ಕೆಲಸ ಮಾಡುತ್ತದೆ. 2022-23ರ ಸಾಲಿನಲ್ಲಿ ಹೆರಿಟೇಜ್ ಫುಡ್ ಕಂಪನಿ ಒಟ್ಟು ಆದಾಯ 3,201 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದೆ. ಹೆರಿಟೇಜ್ ಪುಡ್ ಕಂಪನಿಯ ಹಾಲಿನ ಉತ್ಪನ್ನಗಳು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಓಡಿಶಾ, ಎನ್‌ಸಿಆರ್ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿವೆ.

ಭಾರತಕ್ಕೆ ಸರಿಯಾದ ನಾಯಕನೆಂದರೆ ಮೋದಿ: ಚಂದ್ರಬಾಬು ನಾಯ್ಡು

ಜೂನ್ 12ರಂದು ಚಂದ್ರಬಾಬು ನಾಯ್ಡು ಪ್ರಮಾಣವಚನ

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 11:27 ಕ್ಕೆ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

 

click me!