ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್, ಅರೆಸ್ಟ್ ಆಗಿರೋ ಹೆಚ್ಆರ್ ನಿದಾ ಖಾನ್ ಯಾರು?

Published : Apr 14, 2026, 04:48 PM IST
nida khan

ಸಾರಾಂಶ

ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್, ಅರೆಸ್ಟ್ ಆಗಿರೋ ಹೆಚ್ಆರ್ ನಿಧಾ ಖಾನ್ ಯಾರು?, ಮಹಿಳಾ ಉದ್ಯೋಗಿಗಳಿಗೆ ಲೈ0ಗಿಕ ಕಿರುಕುಳ, ಪ್ರೀತಿ ನಾಟಕ, ಮತಾಂತರದ ಮೂಲಕ ಕಾರ್ಪೋರೇಟ್ ಜಿಹಾದ್ ಅಡ್ಡೆಯಾಗಿರುವ ಟಿಸಿಎಸ್ ಕಂಪನಿ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿದೆ.

ನಾಸಿಕ್ (ಏ.14) ಮಹಿಳಾ ಉದ್ಯೋಗಿಗಳನ್ನು ಕಾರ್ಪೋರೇಟ್ ಔಟಿಂಗ್ ಹೆಸರಿನಲ್ಲಿ ಕರೆದುಕೊಂಡು ಹೋಗಿ ಲೈ0ಗಿಕ ಕಿರುಕುಳ, ಪ್ರೀತಿಯ ನಾಟಕವಾಡಿ, ಬಳಿಕ ಗೋಮಾಂಸ ತಿನ್ನುವಂತೆ, ನಮಾಜ್ ಮಾಡುವಂತೆ, ಮತಾಂತರಗೊಳ್ಳುವಂತೆ ಬೆದರಿಸಿದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆಗುಕೊಂಡಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿರುವ ಅತೀ ದೊಡ್ಡ ಕಾರ್ಪೋರೇಟ್ ಜಿಹಾದ್ ಪ್ರಕರಣದಲ್ಲಿ ಈಗಾಗಲೇ 6 ಟೀಮ್ ಲೀಡರ್ಸ್ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ (HR) ನಿಧಾ ಖಾನ್ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ನಿಧಾ ಖಾನ್ ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ. ನಿಧಾ ಖಾನ್ ಅರೆಸ್ಟ್ ಬೆನ್ನಲ್ಲೇ ಸ್ಫೋಟಕ ಮಾಹಿತಿಗಳು ಹೊರಬಂದಿದೆ.

ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್ ಪ್ರಮುಖ ಆರೋಪಿ

ಲೈ0ಗಿಕ ಕಿರುಕುಳ, ಪ್ರೀತಿ ಹಾಗೂ ಮೋಸ, ಅತ್ಯಾ**ರ, ಮತಾಂತರ ಸೇರಿದಂತೆ 6ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದಿನ ಪ್ರಮುಖ ಆರೋಪಿಗಳ ಪೈಕಿ ಹೆಚ್ಆರ್ ನಿಧಾ ಖಾನ್ ಕೂಡ ಒಬ್ಬರು. ಟಿಸಿಎಸ್ ಕಂಪನಿಯಲ್ಲಿ ತಮ್ಮ ಸಮುದಾಯದವರಿಗೆ ಅರ್ಹತೆ ಇಲ್ಲದಿದ್ದರೂ ಅವಕಾಶ ನೀಡುತ್ತಿದ್ದ ನಿಧಾ ಖಾನ್ ಬಳಿಕ ಲವ್ ಜಿಹಾದ್‌ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.

ಮಹಿಳಾ ಉದ್ಯೋಗಿಗಳ ದೂರು ಕಡೆಗಣಿಸಿ ಆರೋಪಿಗಳಿಗೆ ಮಣೆ ಹಾಕಿದ ಹೆಚ್ಆರ್

ಟಿಸಿಎಸ್ ಬಿಪಿಒ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳು ತಮಗೆ ಆಗುತ್ತಿರುವ ಅನ್ಯಾಯ, ಟೀಮ್ ಲೀಡರ್ಸ್, ಪ್ರಮೋಶನ್, ಉದ್ಯೋಗ ಭದ್ರತೆ, ಉದ್ಯೋಗ ಕಡಿತ, ವೇತನ ಹೆಚ್ಚಳಗಳ ಆಮಿಷ, ಬೆದರಿಕೆ ಮೂಲಕ ಮತಾಂತರ, ಲವ್ ಜಿಹಾದ್ ನಡೆಸುತ್ತಿರುವ ಕುರಿತು ಮಹಿಳಾ ಉದ್ಯೋಗಿಗಳು ಹೆಚ್ಆರ್ ನಿಧಾ ಖಾನ್‌ಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ಆದರೆ ಈ ಮಹಿಳಾ ಉದ್ಯೋಗಿಗಳ ದೂರನ್ನು ನಿಧಾ ಖಾನ್ ಕಡೆಗಣಿಸಿದ್ದಾರೆ. ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ನಡುವೆ ತಮ್ಮ ಸಮುದಾಯದವರನ್ನೇ ಟೀಂ ಲೀಡರ್ಸ್ ಆಗಿ ಇದೇ ನಿಧಾ ಖಾನ್ ನೇಮಕ ಮಾಡಿದ್ದರು. ಈ ಮೂಲಕ ಈ ಟೀಂ ಲೀಡರ್ಸ್ ಯಾರ ಭಯವೂ ಇಲ್ಲದೆ ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್ ನಡೆಸಿದ್ದಾರೆ. ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಬದಲು ಅರೆಸ್ಟ್ ಆಗಿರುವ ಆರೋಪಿಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

2022ರಿಂದ ಮಹಿಳಾ ಉದ್ಯೋಗಿಗಳು ತಮಗೆ ಆಗುತ್ತಿರುವ ಅನ್ಯಾಯ ಕುರಿತು ದೂರು ನೀಡುತ್ತಿದ್ದಾರೆ. ಆದರೆ ಇದುವರೆಗೂ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಸಂತ್ರಸ್ತ ಮಹಿಳಾ ಉದ್ಯೋಗಿಗಳು ಬಹುತೇಕರು ಮಧ್ಯಮ ವರ್ಗದ ಕುಟುಂಬಸ್ಥರು. ಉದ್ಯೋಗದ ಅನಿವಾರ್ಯತೆ ಇರುವ ಮಹಿಳಾ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಈ ಕೃತ್ಯ ಎಸಗಲಾಗುತ್ತಿತ್ತು ಅನ್ನೋದು ತನಿಖೆಯಿಂದ ಬಯಲಾಗಿದೆ.

ಪುಣೆ ಮೂಲದ ನಿಧಾ ಖಾನ್ ಕುರಿತು ತನಿಖೆ ತೀವ್ರಗೊಂಡಿದೆ. ಪುಣೆ ಹಾಗೂ ನಾಸಿಕ್ ನಡುವೆ ಓಡಾಡುವ ನಿಧಾ ಖಾನ್ ಸಂಪರ್ಕಗಳು ಅನುಮಾನ ಹುಟ್ಟಿಸುವಂತಿದೆ. ಪುಣೆಯಲ್ಲಿ ಇದೇ ರೀತಿಯ ಕೆಲ ನೆಟ್‌ವರ್ಕ್ ಹೊಂದಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಪೊಲೀಸರು ಇದೀಗ ಪುಣೆ ಲಿಂಕ್ ಕುರಿತು ತನಿಖೆ ನಡಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Troll: ರಾಮ್ ಚರಣ್ ಎಡವಟ್ಟಿಗೆ 'ಯಶ್' ಎಳೆದುತಂದಿದ್ದು ಯಾಕೆ? 'RRR' ಸ್ಟಾರ್ ನಟನೀಗ ಫುಲ್ ರೋಸ್ಟ್!
Kantara - Ranveer Singh: 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?