ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ!

Published : Oct 03, 2021, 07:42 AM IST
ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ!

ಸಾರಾಂಶ

* ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ 4 ದಿನದಿಂದ ಪರಿಶೀಲನೆ, 24 ಲಾಕರ್‌ ವಶ * 1 ಕೋಟಿ ನಗದು ಅಧಿಕಾರಿಗಳಿಂದ ಜಪ್ತಿ * ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ

ನವದೆಹಲಿ(ಅ.02): ಗುಜರಾತಿನ(Gujarat) ರಿಯಲ್‌ ಎಸ್ಟೇಟ್‌ ಕಂಪನಿಯೊಂದರ(Real Estate company) ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ(IT Raid) ನಡೆಸಿದ್ದು, ಈ ವೇಳೆ 500 ಕೋಟಿ ರು.ಗೂ ಅಧಿಕ ದಾಖಲೆರಹಿತ ವಹಿವಾಟು ಪತ್ತೆಯಾಗಿದೆ.

ಅಹಮದಾಬಾದ್‌ ಮೂಲದ ರಿಯಲ್‌ ಎಸ್ಟೇಟ್‌ ಕಂಪನಿ ಹಾಗೂ ಅದಕ್ಕೆ ಸಂಬಂಧಿಸಿದ ಬ್ರೋಕರ್‌ಗಳ ಮೇಲೆ ಸೆ.28ರಂದು ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಕಂಪನಿಯ 22 ಸ್ಥಳಗಳಲ್ಲಿ ಪರಿಶೀಲನೆ ಇನ್ನೂ ಮುಂದುವರಿದಿದೆ. ಈ ವೇಳೆ, ಕಂಪನಿಯ ಬಳಿ 200 ಕೋಟಿ ರು. ಅಧಿಕ ಅಕ್ರಮ ವಹಿವಾಟು ಬೆಳಕಿಗೆ ಬಂದಿದ್ದರೆ, ಬ್ರೋಕರ್‌ಗಳ ಬಳಿಯ ದಾಖಲೆಗಳ ಪರಿಶೀಲನೆ ವೇಳೆ 200 ಕೋಟಿ ರು. ದಾಖಲೆರಹಿತ ವಹಿವಾಟು ಪತ್ತೆಯಾಗಿದೆ ಎಂದು ತೆರಿಗೆ ಇಲಾಖೆ(IT Department) ಹೇಳಿಕೆಯಲ್ಲಿ ತಿಳಿಸಿದೆ.

ಇದೇ ವೇಳೆ 1 ಕೋಟಿ ರು. ನಗದು, 98 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 24 ಲಾಕರ್‌ಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಈ ಕಂಪನಿ ಆಸ್ತಿಯನ್ನು ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಖರೀದಿಸಿರುವುದು ಪತ್ತೆಯಾಗಿದೆ.

ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು, ಬಿಡಿ ಹಾಳೆಗಳು, ಡಿಜಿಟಲ್‌ ಸಾಕ್ಷ್ಯಗಳನ್ನು ರಿಯಲ್‌ ಎಸ್ಟೇಟ್‌ ಕಂಪನಿಯಿಂದ ವಶಪಡಿಸಿಕೊಳ್ಳಲಾಗಿದೆ. ಹಲವಾರು ಹಣಕಾಸು ವರ್ಷಗಳಲ್ಲಿ ಈ ಕಂಪನಿ ಅಕ್ರಮ ವಹಿವಾಟು ನಡೆಸಿರುವ ಮಾಹಿತಿಯನ್ನು ಈ ದಾಖಲೆಗಳು ಹೊಂದಿವೆ ಎಂದು ತೆರಿಗೆ ಇಲಾಖೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ