ತಮಿಳುನಾಡು ಬಾಲಕಿ ನಿಗೂಢ ಸಾವು: ನ್ಯಾಯಕ್ಕಾಗಿ ಆಗ್ರಹಿಸಿ ಹಿಂಸಾಚಾರ

By Govindaraj S  |  First Published Jul 18, 2022, 5:00 AM IST

ತಮಿಳುನಾಡಿನ ವಿದ್ಯಾರ್ಥಿನಿಯೊಬ್ಬಳ ನಿಗೂಢ ಸಾವಿನ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಜನರು ತೀವ್ರ ಹಿಂಸಾಚಾರ ನಡೆಸಿದ ಘಟನೆ ಭಾನುವಾರ ವರದಿಯಾಗಿದೆ. ಉದ್ರಿಕ್ತ ಜನರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸ್‌ ಸಿಬ್ಬಂದಿಯನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದಾರೆ. 


ಕಲ್ಲಾಕುರಿಚಿ (ತಮಿಳುನಾಡು) (ಜು.18): ತಮಿಳುನಾಡಿನ ವಿದ್ಯಾರ್ಥಿನಿಯೊಬ್ಬಳ ನಿಗೂಢ ಸಾವಿನ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಜನರು ತೀವ್ರ ಹಿಂಸಾಚಾರ ನಡೆಸಿದ ಘಟನೆ ಭಾನುವಾರ ವರದಿಯಾಗಿದೆ. ಉದ್ರಿಕ್ತ ಜನರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸ್‌ ಸಿಬ್ಬಂದಿಯನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಪ್ರತಿಭಟನಾಕಾರರು ಪೊಲೀಸ್‌ ಬ್ಯಾರಿಕೇಡ್‌ ತಳ್ಳಿ ಸಾವಿಗೀಡಾದ ಬಾಲಕಿಯ ಶಾಲೆಯ ಆವರಣದಲ್ಲಿ ನುಗ್ಗಿ, ಶಾಲೆಯ ಬಸ್‌ಗಳಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ವಾಹನಗಳಿಗೂ ಕೆಲವರು ಬೆಂಕಿ ಹಚ್ಚಿದ್ದಾರೆ. ಬಾಲಕಿಗೆ ನ್ಯಾಯ ಸಿಗಬೇಕೆಂಬ ಪೋಸ್ಟರ್‌ಗಳನ್ನು ಅಂಟಿಸಿ, ಶಾಲೆಯ ನಾಮಫಲಕವನ್ನು ಧ್ವಂಸಗೊಳಿಸಿದ್ದಾರೆ. ಶಾಲೆಯ ಪೀಠೋಪಕರಣಗಳನ್ನೆಲ್ಲ ರಸ್ತೆಗೆ ಒಯ್ದು ಬೆಂಕಿ ಹಚ್ಚಿದ್ದಾರೆ. 

Tap to resize

Latest Videos

ಕಾವೇರಿಗೆ ನಿರ್ಮಿಸಿದ Mettur Dam ಭರ್ತಿ, ತಮಿಳುನಾಡಿನ 11 ಜಿಲ್ಲೆಗೆ ಪ್ರವಾಹ ಎಚ್ಚರಿಕೆ

ಚೆನ್ನೈ-ಸೇಲಂ ರಸ್ತೆಯ ಸಂಚಾರವನ್ನು ತಡೆಗಟ್ಟಿಭಾರೀ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಅವರ ಮೇಲೆ ಜನರು ಕಲ್ಲು ತೂರಿದ್ದು, ಕೊನೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಶಾಂತಿ ಕಾಪಾಡಬೇಕೆಂದು ಕೋರಿದ್ದಾರೆ. ಬಾಲಕಿಯ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆ ನೀಡಲಾಗುವುದು ಎಂದು ಟ್ವೀಟ್‌ನಲ್ಲಿ ಭರವಸೆ ನೀಡಿದ್ದಾರೆ.

ಆಗಿದ್ದೇನು?: ಜು. 13 ರಂದು ಚಿನ್ನಾಸಲೆಂನ ಖಾಸಗಿ ವಸತಿ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಓದುತ್ತಿರುವ 17 ವರ್ಷದ ಬಾಲಕಿಯ ಮೃತ ದೇಹವು ಹಾಸ್ಟೆಲ್‌ ಆವರಣದಲ್ಲಿ ಪತ್ತೆಯಾಗಿತ್ತು. ಹಾಸ್ಟೆಲ್‌ನ ಮೇಲಿನ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವೇಳೆಯಲ್ಲಿ ಬಾಲಕಿ ಸಾಯುವ ಮುನ್ನವೇ ಆಕೆಯ ದೇಹದ ಮೇಲೆ ಸಾಕಷ್ಟು ಗಾಯಗಳಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.

ರಸ್ತೆ ಕಾಮಗಾರಿಗೆ ಅರ್ಚಕರಿಂದ ಪೂಜೆ, ಡಿಎಂಕೆ ಸಂಸದನ ವಿರೋಧ!

ಬಳಿಕ ಕಡ್ಲೂರು ಜಿಲ್ಲೆಯ ಆಕೆಯ ಪಾಲಕರು ಖಾಸಗಿ ಶಾಲೆಯ ಅಧಿಕಾರಿಗಳನ್ನು ವಿರೋಧಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪ್ರತಿಭಟನೆ ಆರಂಭಿಸಿದ್ದಾರೆ. ಬಾಲಕಿಯ ಸಾವಿನ ಪ್ರಕರಣವನ್ನು ಸಿಬಿ-ಸಿಐಡಿಗೆ ತನಿಖೆಗಾಗಿ ಒಪ್ಪಿಸಬೇಕು. ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

click me!