ತಮಿಳುನಾಡು ಭಾರಿ ನಿರಂತರ ಮಳೆ: ಬೆಂಗಳೂರು - ಚೆನ್ನೈ - ಮೈಸೂರು 10 ರೈಲುಗಳ ಸಂಚಾರ ರದ್ದು

Published : Oct 16, 2024, 12:18 PM IST
ತಮಿಳುನಾಡು ಭಾರಿ ನಿರಂತರ ಮಳೆ: ಬೆಂಗಳೂರು - ಚೆನ್ನೈ - ಮೈಸೂರು 10 ರೈಲುಗಳ ಸಂಚಾರ ರದ್ದು

ಸಾರಾಂಶ

ತಮಿಳುನಾಡಿನಲ್ಲಿ ನಿರಂತರ ಮಳೆಯಿಂದಾಗಿ ಬೆಂಗಳೂರು ಮತ್ತು ಚೆನ್ನೈ ನಡುವಿನ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹುಬ್ಬಳ್ಳಿಯ ಸೌತ್ ವೆಸ್ಟರ್ನ್‌ ರೈಲ್ವೆ ವಿಭಾಗದಿಂದ ಈ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.

ಬೆಂಗಳೂರು (ಅ.16): ತಮಿಳುನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದ್ದು, ಬಸ್, ರೈಲು ಹಾಗೂ ವಿಮಾನ ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೆ ಸೂಕ್ತ ವಾತಾವರಣ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಚೆನ್ನೈಗೆ ಸಾಗುವ ಈ ರೈಲುಗಳ ಸಂಚಾರವನ್ನು ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಚೆನ್ನೈ ನಡುವೆ ಸಂಚಾರ ಮಾಡುತ್ತಿದ್ದ 10 ರೈಲುಗಳ  ಕಾರ್ಯಚರಣೆ ನಿಲ್ಲಿಸಲಾಗಿದೆ. ಇಂದು ಬೆಂಗಳೂರಿಂದ ಚೆನ್ನೈಗೆ ಹೊರಡಬೇಕಿದ್ದ ಹಾಗೂ ಚೆನ್ನೈನಿಂದ ಬೆಂಗಳೂರಿಗೆ ಬರಬೇಕಿದ್ದ ರೈಲು ಸಂಚಾರ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಹುಬ್ಬಳ್ಳಿಯ ಸೌತ್ ವೆಸ್ಟರ್ನ್‌ ರೈಲ್ವೆ ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.

ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ವಿಶೇಷ ರೈಲು, ಅ.17 ರಿಂದ ನ.7ವರೆಗೆ ಸೇವೆ!

ಬೆಂಗಳೂರು-ಚೆನ್ನೈ ನಡುವೆ ರದ್ದಾದ ರೈಲುಗಳ ವಿವರ:
1. ರೈಲು ಸಂಖ್ಯೆ. 12657 
ಡಾ.MGR ಚೆನ್ನೈ ಸೆಂಟ್ರಲ್- KSR ಬೆಂಗಳೂರು

2.ರೈಲು ಸಂಖ್ಯೆ 12607 
ಡಾ. MGR ಚೆನ್ನೈ ಸೆಂಟ್ರಲ್-KSR ಬೆಂಗಳೂರು

3.ರೈಲು ಸಂಖ್ಯೆ 12608 
KSR ಬೆಂಗಳೂರು- ಡಾ. MGR ಚೆನ್ನೈ ಸೆಂಟ್ರಲ್

4. ರೈಲು ಸಂಖ್ಯೆ 12609 
ಡಾ.MGR ಚೆನ್ನೈ ಸೆಂಟ್ರಲ್- ಮೈಸೂರು.

5. ರೈಲು ಸಂಖ್ಯೆ 12610 
ಮೈಸೂರು- ಡಾ. MGR ಚೆನ್ನೈ ಸೆಂಟ್ರಲ್

6. ರೈಲು ಸಂಖ್ಯೆ 12027 
ಡಾ.MGR ಚೆನ್ನೈ ಸೆಂಟ್ರಲ್- KSR ಬೆಂಗಳೂರು

7. ರೈಲು ಸಂಖ್ಯೆ 12028 
KSR ಬೆಂಗಳೂರು - ಡಾ MGR ಚೆನ್ನೈ ಸೆಂಟ್ರಲ್

8. ರೈಲು ಸಂಖ್ಯೆ 12007 
ಡಾ. MGR ಚೆನ್ನೈ ಸೆಂಟ್ರಲ್- ಮೈಸೂರು

9. ರೈಲು ಸಂಖ್ಯೆ 12008 
ಮೈಸೂರು-  ಡಾ. MGR ಚೆನ್ನೈ ಸೆಂಟ್ರಲ್

10. ರೈಲು ಸಂಖ್ಯೆ 06275 
ಚಾಮರಾಜನಗರ- ಮೈಸೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅನಾರೋಗ್ಯ ಏನಿದ್ದರೂ ವೀಕ್ ಆಫ್‌ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ
ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್