ಅಮೆರಿಕದಿಂದ 33000 ಕೋಟಿ ರು.ವೆಚ್ಚದ 31 ಪ್ರಿಡೇಟರ್‌ ಡ್ರೋನ್‌ ಖರೀದಿಗೆ ಭಾರತ ಸಹಿ

By Kannadaprabha News  |  First Published Oct 16, 2024, 9:13 AM IST

ದೇಶದ ರಕ್ಷಣಾ ಸಾಮರ್ಥ್ಯವನ್ನು, ವಿಶೇಷವಾಗಿ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸುವ ಭಾಗವಾಗಿ ಅಮೆರಿಕದಿಂದ 31 ಎಂಕ್ಯು -9ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು 33,600 ಕೋಟಿ ರು. ವೆಚ್ಚದಲ್ಲಿ ಖರೀದಿ ಮಾಡುವ ಒಪ್ಪಂದಕ್ಕೆ ಭಾರತ ಮಂಗಳವಾರ ಸಹಿ ಹಾಕಿದೆ.


ನವದೆಹಲಿ: ದೇಶದ ರಕ್ಷಣಾ ಸಾಮರ್ಥ್ಯವನ್ನು, ವಿಶೇಷವಾಗಿ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸುವ ಭಾಗವಾಗಿ ಅಮೆರಿಕದಿಂದ 31 ಎಂಕ್ಯು -9ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು 33,600 ಕೋಟಿ ರು. ವೆಚ್ಚದಲ್ಲಿ ಖರೀದಿ ಮಾಡುವ ಒಪ್ಪಂದಕ್ಕೆ ಭಾರತ ಮಂಗಳವಾರ ಸಹಿ ಹಾಕಿದೆ. ಕಳೆದ ತಿಂಗಳ ಮೋದಿ ಅಮೆರಿಕ ಭೇಟಿ ವೇಳೆ ಈ ಖರೀದಿ ಕುರಿತು ಅಂತಿಮ ಮಾತುಕತೆ ನಡೆದಿತ್ತು. ಅದರ ಬೆನ್ನಲ್ಲೇ ಕಳೆದ ವಾರ ಮೋದಿ ನೇತೃತ್ವದ ಸಂಪುಟ ಸಮಿತಿ ಅನುಮೋದನೆ ನೀಡಿತ್ತು. 31 ಡ್ರೋನ್‌ಗಳಲ್ಲಿ 15 ನೌಕಾಪಡೆಗೆ, 8 ವಾಯುಪಡೆಗೆ ಹಾಗೂ ಉಳಿದ 8 ಭೂಸೇನೆ ಬಳಸಲಿದೆ.

ಎಂಕ್ಯು-9ಬಿ ಡ್ರೋನ್‌ ವೈಶಿಷ್ಟ್ಯ

Tap to resize

Latest Videos

undefined

ಅಮೆರಿಕದ ಜನರಲ್‌ ಅಟೋಮಿಕ್ಸ್‌ ಕಂಪನಿ ತಯಾರಿಸುವ ಡ್ರೋನ್‌ ಇದು. ದೂರದಿಂದಲೇ ಇದನ್ನು ನಿಯಂತ್ರಿಸಬಹುದು. ಕ್ಷಿಪಣಿ ಹೊತ್ತೊಯ್ದು ದಾಳಿ ನಡೆಸಬಲ್ಲದು. ಅಲ್ಲದೆ, ಇದನ್ನು ಗಡಿಯಲ್ಲಿ ಕಣ್ಗಾವಲು, ಮಾನವೀಯ ನೆರವು, ಪರಿಹಾರ ಕಾರ್ಯ, ಶೋಧ ಕಾರ್ಯ, ಭೂ, ನೌಕಾ, ವಾಯುಪಡೆ ಯುದ್ಧಗಳ ವೇಳೆ, ಆಗಸದಿಂದ ಎದುರಾಗಬಹುದಾದ ಅಪಾಯಗಳ ಮುನ್ಸೂಚನೆ ಪಡೆಯಲು ಹೀಗೆ ನಾನಾ ರೀತಿಯ ಕೆಲಸಗಳಿಗೆ ಬಳಸಬಹುದು. ಇದು ಸತತವಾಗಿ 35 ಗಂಟೆಗಳ ಕಾಲ ಆಗಸದಲ್ಲೇ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. 5670 ಕೆಜಿ ತೂಕ ಹೊರಬಲ್ಲದು. 40 ಸಾವಿರ ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು. ನೆಲದಿಂದ ಕೇವಲ 250 ಅಡಿ ಎತ್ತರದಲ್ಲೂ ಶತ್ರುಗಳ ಕಣ್ತಪ್ಪಿಸಿ ಚಲಿಸಬಲ್ಲದು. ಚಲಿಸುವ ಸಾಮರ್ಥ್ಯ ಗಂಟೆಗೆ 442 ಕಿ.ಮೀ. ಇದೆ.

ಸಂಯಮ ಅಥವಾ ನಾಶ: ಇರಾನ್ ದಾಳಿಯ ಬಳಿಕ ಇಸ್ರೇಲ್ ಮುಂದಿರುವ 4 ಆಯ್ಕೆಗಳು

ಜವಾಹಿರಿ ಹತ್ಯೆಗೆ ಬಳಕೆ:
ಇದು 2022ರ ಜುಲೈನಲ್ಲಿ ಆಫ್ಘಾನಿಸ್ತಾನದ ಕಾಬುಲ್‌ನಲ್ಲಿ ಅಲ್‌ಖೈದಾ ಉಗ್ರ ಐಮನ್‌ ಅಲ್‌-ಜವಾಹಿರಿ ಹತ್ಯೆಗೆ ಬಳಸಲಾಗಿದ್ದ ಎಂಕ್ಯು -9 ಡ್ರೋನ್‌ನ ರೂಪಾಂತರವಾಗಿದೆ.

ಅಮೆರಿಕ ಜೊತೆ ಸಾವಿರಾರು ಕೋಟಿಯ ಒಪ್ಪಂದ; ಭಾರತ ಖರೀದಿಸುತ್ತಿರುವ ಎಂಕ್ಯು-9ಬಿ ಡ್ರೋನ್‌ ವಿಶೇಷತೆ ಏನು?

click me!