ಕೊರೋನಾ ನಿಯಂತ್ರಣಕ್ಕೆ  ತಮಿಳುನಾಡು ಹೊಸ ಸರ್ಕಾರದ ದಿಟ್ಟ ಹೆಜ್ಜೆ

By Suvarna NewsFirst Published May 7, 2021, 11:39 PM IST
Highlights

ತಮಿಳುನಾಡಿನಲ್ಲಿ ಹೊಸ ಸರ್ಕಾರದಿಂದ ಕೊರೋನಾ ವಿರುದ್ಧ  ಹೋರಾಟ/ ಲಭ್ಯವಿರುವ ಕಡೆಯಿಂದ ಆಮ್ಲಜನಕ ಆಮದಿಗೆ ನಿರ್ಮಾಣ/ ಕೇಂದ್ರಕ್ಕೂ ಮನವಿ ಮಾಡಿಕೊಂಡ ಸರ್ಕಾರ

ಚೆನ್ನೈ ( ಮೇ 07)  ಮಹಾರಾಷ್ಟ್ರ,  ಕೇರಳ ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ಅನುಷ್ಠಾನ ಮಾಡಿವೆ. ಕರ್ನಾಟದಲ್ಲಿ ಪ್ರತಿ ದಿನ ಐವತ್ತು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.   ಕರ್ನಾಟಕದಲ್ಲಿ ಲಾಕ್ ಡೌನ್  ಮೊರೆ ಹೋಗಲಾಗಿದೆ.

ತಮಿಳುನಾಡಿನ ಸಿಎಂ ಆಗಿ ಎಂಕೆ ಸ್ಟಾಲಿನ್ ಅಧಿಕಾರ ವಹಿಸಿಕೊಂಡ ತಕ್ಷಣ ಪರಿಹಾರ ಕ್ರಮ ತೆಗೆದುಕೊಂಡಿದ್ದಾರೆ. ಆಕ್ಸಿಜನ್ ಪೂರೈಕೆಗೆ ಕ್ರಮ ತೆಗೆದುಕೊಂಡಿದ್ದಾರೆ. ಎರಡು ಕಡೆ 1ಸಾವಿರ ಆಕ್ಸಿಜನ್ ವ್ಯವಸ್ಥೆ ಇರೋ ಬೆಡ್ ಗಳು ರೆಡಿ ಮಾಡಲಾಗಿದ್ದು ಐದು ನೂರು ವೈದ್ಯರಿಗೆ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಕೊರೋನಾ ಲಾಕ್ ಡೌನ್ ಹೇಗಿರಲಿದೆ?

ತಮಿಳುನಾಡು ಸರ್ಕಾರ ತೆಗೆದುಕೊಂಡ ಕ್ರಮಗಳು
* ಕೇರಳದ ಕೋಜಿಕೋಡ್ ಐಯೋನೆಕ್ಸ್ ನಿಂದ 40 ಮೆಟ್ರಿಕ್ ಟನ್ ಆಮ್ಲಜನಕ ಆಮದು

* 60 ಮೆಟ್ರಿಕ್ ಟನ್ ಆಮ್ಲಜನಕವನ್ನು  ಪ್ರಾಕ್ಸಿಯಾರ್ ನಿಂದ ತರಿಸಿಕೊಳ್ಳಲು ನಿರ್ಧಾರ

* ಲೂಧಿಯಾನದಿಂದ 120 ಮೆಟ್ರಿಕ್ ಟನ್ ಆಮ್ಲಜನಕ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮುಖೇನ ಸ್ಟಾಲಿನ್ ಎಲ್ಲ ವಿವರಗಳನ್ನು ತಿಳಿಸಿದ್ದಾರೆ.  ತುರ್ತು ಸಭೆ ನಡೆಸಿ ಮೇಲಿನ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ತಮಿಳುನಾಡಿನಲ್ಲಿಯೂ ಆಮ್ಮಜನಕ ಕೊರತೆ ಇದೆ.  ಇಪ್ಪತ್ತು ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

 

click me!