ಸೋಲಿನ ಪರಿಣಾಮ.. ಕಮಲ್ ಪಕ್ಷದಿಂದ ದೊಡ್ಡವರೆಲ್ಲ ದೂರ!

By Suvarna NewsFirst Published May 7, 2021, 10:00 PM IST
Highlights

ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ/ ಕಮಲ್ ಹಾಸನ್ ಪಕ್ಷದ ಪ್ರಮುಖ  ನೇತಾರರ ರಾಜೀನಾಮೆ/ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು/ ಒಂದೇ ಒಂದು ಸ್ಥಾನ ಗೆಲ್ಲದ ಕಮಲ್

ಚೆನ್ನೈ( ಮೇ 07)  ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡಿದೆ. ಮಕ್ಕಳ್ ನಿಧಿ ಮೈಯ್ಯಂ  ಕಮಲ್ ಹಾಸನ್ ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲವಾಗಿದ್ದು ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.

ತಮಿಳುನಾಡಿನ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ನಟ ಕಮಲ್ ಹಾಸನ್ ಅವರು ಬಿಜೆಪಿಯ ಅಭ್ಯರ್ಥಿ ವನತಿ ಶ್ರೀನಿವಾಸನ್ ವಿರುದ್ಧ ಕೇವಲ 1500ಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲುಂಡಿದ್ದರು.

ಪಕ್ಷ ಸೋಲು ಕಂಡ ನಂತರ ಪಾರ್ಟಿಯ ಪ್ರಮುಖ ನಾಯಕರು ಒಬ್ಬೊಬ್ಬರಾಗಿ ರಾಜೀನಾಮೆ ನೀಡಿದ್ದಾರೆ. ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ  ನಡೆದ ಸಭೆಯಲ್ಲಿ ರಾಜೀನಾಮೆ ಸ್ಫೋಟವಾಗಿವೆ. 

ಗಾಂಧಿ-ನೆಹರು ಸ್ಟಾಲಿನ್‌ಗೆ ರಿಪೋರ್ಟ್ ಮಾಡಿಕೊಳ್ಳಬೇಕು.. ವಿಧಾನಸಭೆಯಲ್ಲೂ ಫಜೀತಿ!

ಇನ್ನೊಂದು ಮಾಹಿತಿ ಪ್ರಕಾರ ಸೋಲಿನ ನಂತರ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರೇ ಎಲ್ಲರಿಗೂ ರಾಜೀನಾಮೆ ಸಲ್ಲಿಸಲು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಪಕ್ಷವನ್ನು ಸಂಪೂರ್ಣವಾಗಿ ತಳಮಟ್ಟದಿಂದ ಸಂಘಟನೆ ಮಾಡಿಕೊಳ್ಳಲು ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನುವ ಮಾತು ಇದೆ.

ಪಕ್ಷದ ಪ್ರೆಮುಖ ಹುದ್ದೆಯಲ್ಲಿದ್ದ ಡಾ. ಆರ್ ಮಹೇಂದ್ರನ್, ಮುರುಗನಂದಮ್, ಮಯೂರಾ, ತಂಗವೇಲು, ಉಮಾದೇವಿ, ಸಿಕೆ ಕುಮಾರವೇಲು, ಸೇಕರ್, ಸುರೇಶ್ ಅಯ್ಯರ್ ರಾಜೀನಾಮೆ ಸಲ್ಲಿಸಿದ್ದಾರೆ.   ರಾಜೀನಾಮೆ ಪತ್ರಗಳು ಕಮಲ್ ಕೈಯಲ್ಲಿದ್ದು ಸ್ವೀಕಾರದ ಬಗ್ಗೆ ಅಧಿಕೃತ ಮಾಹಿತಿ ಹೊರಗೆ ಬಂದಿಲ್ಲ.

 ಡಾ. ಆರ್ ಮಹೇಂದ್ರನ್ ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.  ಮಹೇಂದ್ರನ್ ರಾಜೀನಾಮೆ ಕೊಟ್ಟಿರುವ ಮಾಹಿತಿಯನ್ನು ಕಮಲ್ ಅವರೇ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. 

click me!