
ಚೆನ್ನೈ(ಡಿ.17): ತಮಿಳುನಾಡಿನ ಎಸ್.ಎನ್. ಲಕ್ಷ್ಮೇ ಸಾಯಿ ಶ್ರೀ ಎಂಬ ಬಾಲಕಿ ಕೇವಲ 58 ನಿಮಿಷದಲ್ಲಿ 46 ವಿಧದ ಅಡುಗೆ ತಯಾರಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾಳೆ. ಆಕೆಯ ಸಾಧನೆ ಯುನಿಕೋ ಬುಕ್ ಆಫ್ ವಲ್ಡ್‌ರ್ ರೆಕಾರ್ಡ್ (ಯುಎನ್‌ಐಸಿಒ)ಗೆ ಸೇರ್ಪಡೆಯಾಗಿದೆ.
ಮಂಗಳವಾರ ದಾಖಲೆ ನಿರ್ಮಿಸಿದ ಬಳಿಕ ಮಾತನಾಡಿದ ಲಕ್ಷ್ಮೇ ಸಾಯಿ, ‘ಅಡುಗೆ ಮಾಡುವ ಕಲೆಯನ್ನು ತಾಯಿಯಿಂದ ಕಲಿತೆ. ನಾನು ಈ ಮೈಲಿಗಲ್ಲು ಸಾಧಿಸಿರುವುದು ಖುಷಿಯ ವಿಚಾರ’ ಎಂದು ಹೇಳಿದ್ದಾರೆ.
ಮಗಳು ವಿಶ್ವದಾಖಲೆ ಸೃಷ್ಟಿಸಿದ ಖುಷಿ ಹಂಚಿಕೊಂಡ ಎನ್.ಕಲೈಮಗಳ್, ‘ನಾನು ತಮಿಳುನಾಡಿನ ವಿಶೇಷ ಖಾದ್ಯಗಳನ್ನು ಆಗಾಗ ಮಾಡುತ್ತಿರುತ್ತೇನೆ. ಆದರೆ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಮಗಳೂ ಅಡುಗೆ ಮನೆಯಲ್ಲಿ ನನ್ನೊಂದಿಗೆ ಸಮಯ ಕಳೆಯುತ್ತಿದ್ದಳು. ಅವಳ ಆಸಕ್ತಿಯನ್ನು ಗಮನಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಲಹೆ ನೀಡಿದೆವು’ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಕೇರಳದ ಸಾನ್ವಿ ಎಂಬ 10 ವರ್ಷದ ಹುಡುಗಿ 30 ವಿಧದ ಖಾದ್ಯ ತಯಾರಿಸಿ ವಿಶ್ವ ದಾಖಲೆ ಬರೆದಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ