ಅಪಘಾತದಲ್ಲಿ ತೀರಿಕೊಂಡ ಮಗನ ನೆನಪಿಗೆ ಪ್ರತಿಮೆ ಪ್ರತಿಷ್ಠಾಪನೆ

By Suvarna News  |  First Published Mar 17, 2022, 10:47 AM IST
  • ಅಪಘಾತದಲ್ಲಿ ತೀರಿಕೊಂಡ ಮಗನ ಸ್ಮರಣೆ
  • ಮಗನ ನೆನಪಿಗಾಗಿ ಪ್ರತಿಮೆ ನಿರ್ಮಿಸಿದ ಕುಟುಂಬ
  • ಮನೆಯಲ್ಲಿ ಮಗನ ಪ್ರತಿಮೆ ಪ್ರತಿಷ್ಠಾಪಿಸಿದ ತಮಿಳುನಾಡಿನ ಕುಟುಂಬ

ದಿಂಡುಗಲ್: ವಯಸ್ಸಿಗೆ ಬಂದ ಮಕ್ಕಳು ಕಣ್ಣ ಮುಂದೆಯೇ ತೀರಿ ಹೋಗುವುದನ್ನು ಯಾವ ತಂದೆ ತಾಯಿಗೂ ಸಹಿಸಲಾಗದು. ಪುತ್ರ ಶೋಕಂ ನಿರಂತರಂ ಎನ್ನುವಂತೆ ಅಪ್ಪ ಅಮ್ಮ ಬದುಕಿರುವವರೆಗೂ ತಮಗಿಂತಲೂ ಮೊದಲು ತೀರಿ ಹೋದ ಮಕ್ಕಳ ನೆನಪು ಕೊನೆ ಉಸಿರಿರುವವರೆಗೂ ಕಾಡುವುದು. ತಮಿಳುನಾಡಿನ ಕುಟುಂಬವೊಮದಕ್ಕೂ ಹೀಗೆ ಆಗಿದೆ. ಪ್ರಾಯಕ್ಕೆ ಬಂದ 24 ರ ಹರೆಯದ ಪುತ್ರನೋರ್ವ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದಾನೆ. ಇದನ್ನು ಸಹಿಸಿಕೊಳ್ಳಲಾಗದ ಮನೆಯವರು ಅವನ ಗಾತ್ರದ ಸಿಲಿಕಾನ್ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸಿದ್ದಾರೆ. 

ಜೂನ್ 28, 2020 ರಂದು, ತಮಿಳುನಾಡಿನ (TamilNadu) ದಿಂಡಿಗಲ್ (Dindigul) ಜಿಲ್ಲೆಯ ಒಡ್ಡಂಛತ್ರಂನಲ್ಲಿ (Oddamchathram) ನಡೆದ ರಸ್ತೆ ಅಪಘಾತದಲ್ಲಿ ಯುವಕ ಎಸ್.ಪಾಂಡಿದುರೈ ಪ್ರಾಣ ಕಳೆದುಕೊಂಡಿದ್ದರು 24 ವರ್ಷದ ಯುವಕನ ಈ ಸಾವು ಅವರ ಕುಟುಂಬಕ್ಕೆ, ವಿಶೇಷವಾಗಿ 44 ವರ್ಷದ ಅವರ ತಾಯಿ ಪಸುಮುಕಿಜಿಗೆ ಭಾರಿ ಆಘಾತವನ್ನುಂಟು ಮಾಡಿತ್ತು. ಪಾಂಡಿದುರೈ ತಮ್ಮೊಂದಿಗೆ ಇಲ್ಲ ಎಂಬ ಅಂಶವನ್ನು ಕುಟುಂಬ ಸದಸ್ಯರು ಮನಗಂಡ ನಂತರ, ಅವರು ತಮ್ಮ ಪುತ್ರನ ಗಾತ್ರದ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿದರು ಮತ್ತು ಅದನ್ನು ಒಡ್ಡಂಛತ್ರಂನಲ್ಲಿರುವ ತಮ್ಮ ಮನೆಯ ಕೋಣೆಯಲ್ಲಿ ಇರಿಸಲು ನಿರ್ಧರಿಸಿದ್ದಾರೆ. 

Tap to resize

Latest Videos

Statue of Equality : ಸಮಾನತೆಯ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ

ಸುದ್ದಿಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಪಸುಮುಕಿಝಿ, 'ಪಾಂಡಿದುರೈ ನನ್ನ ಪ್ರೀತಿಯ ಮಗ, ಆತ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ. ಆತ ನಮ್ಮನ್ನು ತೊರೆದ ಕೆಲವು ತಿಂಗಳ ನಂತರ, ನಾವು ನನ್ನ ಮಗನ ಗಾತ್ರದ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿದ್ದೇವೆ. ನಮ್ಮ ಮನೆಯ ಲಿವಿಂಗ್ ರೂಮಿನಲ್ಲಿ ನಾವು ಆತನ ಪ್ರತಿಮೆಯನ್ನು ಇರಿಸಿದ್ದರಿಂದ ಈ ಕಲ್ಪನೆಯು ಈಗ ನಿಜವಾಗಿದೆ. ಸಿಲಿಕಾನ್ ಪ್ರತಿಮೆಯ ಮೂಲಕವಾದರೂ ನನ್ನ ಮಗನನ್ನು ನೋಡಬಹುದು ಎಂದು ನನಗೆ ಈಗ ಸಂತೋಷವಾಗಿದೆ ಎಂದು ಹೇಳಿದರು.

ಪಾಂಡಿದುರೈ (Pandidurai) ಅವರು ತಮ್ಮ ಸೊಸೆ ತಾರಿಕಾ ಶ್ರೀ (Tharika Shri) ಮತ್ತು ಸೋದರಳಿಯ ಮೋನೇಶ್ ಕುಮಾರನ್ (Monesh Kumaran) ಅವರನ್ನು ತುಂಬಾ ಇಷ್ಟಪಡುತ್ತಿದ್ದರು ಮತ್ತು ಅವರ ಕಿವಿ ಚುಚ್ಚುವ ಸಮಾರಂಭದಲ್ಲಿ ಭಾಗವಹಿಸಲು ಬಯಸಿದ್ದರು ಎಂದು ಅವರು ಹೇಳಿದರು. ಆದರೆ ದುರದೃಷ್ಟವಶಾತ್, ಅವರು ನಿಧನರಾದರು ಮತ್ತು ಸಮಾರಂಭ ನಡೆಯಲಿಲ್ಲ. ಆದರೆ ಈಗ ಪ್ರತಿಮೆಯ ಮೂಲಕವಾದರೂ ತನ್ನ ಮಗ ಕಿವಿ ಚುಚ್ಚುವ ಸಮಾರಂಭದ ಭಾಗವಾಗಿರಲು ನನಗೆ ಸಂತೋಷವಾಗಿದೆ ಎಂದು ಪಸುಮುಕಿಜಿ (Pasumukizhi) ಹೇಳಿದರು. ಪಾಂಡಿದುರೈ ಅವರು 'ವೇಷ್ಟಿ'(Veshti) ಹಾಗೂ ಅಂಗಿ ತೊಟ್ಟಿದ್ದ ಪ್ರತಿಮೆಯನ್ನು ರಥದಲ್ಲಿ ಮನೆಗೆ ಕರೆತಂದ ಬಳಿಕ ಮನೆಯವರು ಮಕ್ಕಳನ್ನು ಪ್ರತಿಮೆಯ ಮಡಿಲಲ್ಲಿ ಕೂರಿಸಿ ಕಿವಿ ಚುಚ್ಚುವ ಕಾರ್ಯಕ್ರಮ ನಡೆಸಿದರು.

Dr Rajkumar Statue ರಾಜ್‌ ಕುಮಾರ್‌ ಕಂಚಿನ ಪುತ್ಥಳಿ ಕದ್ದ ಅಪ್ರಾಪ್ತರು! 

2020ರಲ್ಲಿ ತಮಿಳುನಾಡಿನ ಮಧುರೈನ ಉದ್ಯಮಿ ಆಗಿರುವ ಸೇತುರಾಮನ್ ಎಂಬುವವರು ತಮ್ಮ ಪತ್ನಿ  ಪಿಚೈಮಾನಿಯಮ್ಮಲ್ ಅವರು ತೀರಿ ಹೋದ ನಂತರ ಅವರ ಪ್ರತಿಮೆಯನ್ನು ತಮ್ಮ ನಿವಾಸದೊಳಗೆ ಅನಾವರಣಗೊಳಿಸಿದ್ದರು. ಸೇತುರಾಮನ್ ತನ್ನ ದಿವಂಗತ ಹೆಂಡತಿ ರೂಪದ ಆರು ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದರು. ಆಕೆಯ ನಿಧನದ 30 ದಿನಗಳ ನಂತರ ಅವಳಷ್ಟೇ ಗಾತ್ರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಇದು ಅವಳ ಮೇಲಿನ ಪ್ರೀತಿಯ ಅಭಿವ್ಯಕ್ತಿಯಾಗಿದೆ ಎಂದು ಅವರು ಹೇಳಿಕೊಂಡಿದ್ದರು.

ಈ ಪ್ರತಿಮೆ ಬಗ್ಗೆ ಮಾತನಾಡಿದ ಸೇತುರಾಮನ್, ನನ್ನ ಹೆಂಡತಿ ನನಗೆ ತುಂಬಾ ಪ್ರಿಯಳಾಗಿದ್ದಳು, ಅವಳು 30 ದಿನಗಳ ಹಿಂದೆ ತೀರಿಕೊಂಡ ನಂತರ ನಾನು ಅವಳನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತಿದ್ದೆ. ಅವಳೊಂದಿಗೆ ಯಾವಾಗಲೂ ಇರಲು ನಾನು ಈ ಪ್ರತಿಮೆಯನ್ನು ನಮ್ಮ ನಿವಾಸದಲ್ಲಿ ಇರಿಸಿದೆ. ಈ ಪ್ರತಿಮೆಯು ಫೈಬರ್‌ನಿಂದ ಮಾಡಲ್ಪಟ್ಟಿದೆ. ರಬ್ಬರ್ ಮತ್ತು ಇತರ ವಸ್ತುಗಳನ್ನು ಬೆರೆಸಲ್ಪಟ್ಟಿದೆ. ಇದು ಬಲವಾದ ಮತ್ತು ಹೆಚ್ಚು ಕಾಲ ಉಳಿಯುವಂತೆ ಮಾಡಲಾಗಿದೆ. ಈ ಪ್ರತಿಮೆಯ ಮೇಲೆ ಬಳಸುವ ಬಣ್ಣಗಳು ಕನಿಷ್ಠ 50 ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

click me!