ಸಿಎಂ ವಿಜಯ್‌ಗೆ ಡೋಂಟ್ ಕೇರ್ ಎಂದ ವಿದ್ಯಾರ್ಥಿ, ಪುಟ್ಟ ಹುಡುಗನ ರಿಯಾಕ್ಷನ್ ಹೇಗಿದೆ ನೋಡಿ

Published : Sep 22, 2026, 08:30 PM IST
cm vijay class room incident

ಸಾರಾಂಶ

ತಮಿಳುನಾಡು ಸಿಎಂ ವಿಜಯ್ ಅವರು ಶಾಲೆಯೊಂದರಲ್ಲಿ ಉಪಹಾರ ಯೋಜನೆ ಉದ್ಘಾಟಿಸುವಾಗ ತರಗತಿಗೆ ಭೇಟಿ ನೀಡಿದ್ದರು. ಈ ವೇಳೆ ಎಲ್ಲಾ ಮಕ್ಕಳು ಎದ್ದು ನಿಂತರೆ, ಒಬ್ಬ ವಿದ್ಯಾರ್ಥಿ ಮಾತ್ರ ಊಟ ಮಾಡುತ್ತಾ ಕುಳಿತಿದ್ದ ವಿಡಿಯೋ ವೈರಲ್ ಆಗಿದೆ. ಈ ಘಟನೆಯನ್ನು ನೆಟ್ಟಿಗರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಜೊಸೆಫ್ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚೆಲ್ ಎಬ್ಬಿಸಿದೆ. ಮುಖ್ಯಮಂತ್ರಿಗಳು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ ಗತ್ತು ಇಂಟರ್‍‌ನೆಟ್‌ನಲ್ಲಿ ಚರ್ಚೆಕೆ ಕಾರಣ ಹಾಡಿದೆ.

ಅಷ್ಟಕ್ಕೂ ಆಗಿದ್ದೇನು?

ಸಿಎಂ ವಿಜಯ್ ತಮಿಳುನಾಡಿನ ಶಾಲಾ ವಿದ್ಯಾರ್ಥಿಗಳ ಉಪಹಾರ ಯೋಜನೆಯ ವಿಸ್ತರಣೆಯನ್ನ ಇವತ್ತು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮವು ತಿರುವನ್ಮಿಯೂರಿನ ಗಾಂಧಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿತ್ತು. ಯೋಜನೆಯ ಉದ್ಘಾಟನೆಯ ಭಾಗವಾಗಿ ವಿಜಯ್ ಅವರು, ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಉಪಹಾರ ಬಡಿಸಿದ್ದಾರೆ. ನಂತರ ಕ್ಲಾಸ್‌ರೂಮ್‌ಗೆ ಹೋಗಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಮುಂದಾಗಿದ್ದಾರೆ.

ಈ ವೇಳೆ ಒಂದು ಕ್ಲಾಸ್‌ ರೂಮ್‌ಗೆ ಭೇಟಿ ಕೊಟ್ಟಾಗ ತರಗತಿಯಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಂತು ಮುಖ್ಯಮಂತ್ರಿಗೆ ಗೌರವ ಸೂಚಿಸಿದ್ದಾರೆ. ಬಹುತೇಕ ಮಕ್ಕಳು ಊಟ ಮಾಡುತ್ತಿದ್ದರು. ಹೀಗಿದ್ದೂ ಕೆಲವರು ಸೆಲ್ಯೂಟ್ ಹೊಡೆದಿದ್ದಾರೆ. ಇನ್ನು ಕೆಲವರು ಎದ್ದುನಿಂತ ನಮಸ್ಕಾರ ಮಾಡಿದ್ದಾರೆ. ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ಬೆಂಜ್ ಮೇಲೆಯೇ ಕೂತಿದ್ದ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದ್ದು, ಜನರು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ತಿದ್ದಾರೆ.

ಈ ವಿಡಿಯೋವನ್ನು ದ್ರಾವಿಡಿಯನ್ ಇನ್‌ಸೈಟ್ಸ್ ಹ್ಯಾಂಡಲ್ ಹಂಚಿಕೊಂಡಿದೆ. ವಿಐಪಿ ಭೇಟಿ ವೇಳೆ ವಿದ್ಯಾರ್ಥಿ ಯಾವುದೇ ಗಾಬರಿಯಾಗದೇ ತನ್ನ ಪಾಡಿಗೆ ಕೂತಿರೋದನ್ನು ಕಾಣಬಹುದಾಗಿದೆ. ಡಾ.ಪ್ರಾಣೇಶ್ ಬಾಲಾಜಿ ಅನ್ನೊರು ಪ್ರತಿಕ್ರಿಯಿಸಿ.. ನಾನಂತೂ ಹುಡುಗನ ಅಭಿಮಾನಿಯಾಗಿದ್ದೇನೆ. ಅವನ ಹೆಸರು ಯಾರಿಗಾದರೂ ತಿಳಿದಿದಿಯೇ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ, ಊಟ ಮಾಡುವಾಗ ಎದ್ದು ನಿಲ್ಲಬೇಡಿ. ಆಹಾರಕ್ಕೆ ಗೌರವ ಕೊಡಿ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಕೆಲವರು ಅದನ್ನು ರಾಜಕೀಯಕ್ಕೆ ತಿರುಗಿಸಿದ್ದಾರೆ. ಆ ಹುಡುಗ ಡಿಎಂಕೆ ಬೆಂಬಲಿಗನಾಗಿರಬಹುದು ಎಂದರೆ, ಮತ್ತೊಬ್ಬರು ಆತನ ಕುಟುಂಬಸ್ಥರು ವಿಜಯ್ ಪಕ್ಷಕ್ಕೆ ವೋಟ್ ಹಾಕಿಲ್ಲವೇನೋ, ಬಹುಶಃ ಅದಕ್ಕೆ ಹಾಗೆ ಕೂತಿರಬೇಕು ಎಂದು ತಮಾಷೆ ಮಾಡಿದ್ದಾರೆ.

ವಿಸ್ತೃತ ಪೆರುಂತಲೈವರ್ ಕಾಮರಾಜನ್ ಉಪಹಾರ ಯೋಜನೆಯು 15454 ಸರ್ಕಾರಿ ರಾಜ್ಯ ಅನುದಾನಿತ ಶಾಲೆಗಳಲ್ಲಿ 6 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ 16ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ಕಾಮರಾಜನ್ ಹೆಸರಿನ ಈ ಯೋಜನೆಯು ಪೋಷ್ಠಿಕಾಂಶವನ್ನು ಸುಧಾರಿಸುವ ಗುರಿ ಹೊಂದಿದೆ. ಈ ವರ್ಷದ ವಿಸ್ತರಣೆ ಯೋಜನೆಯ ಹೆಚ್ಚುವರಿಯಾಗಿ ಒಟ್ಟು 217 ಕೋಟಿ ಹಣವನ್ನು ಮೀಸಲಿಡಲಾಗಿದೆ. ಇಲ್ಲಿಯವರೆಗೆ ಒಟ್ಟು 724 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ.

ಇನ್ನು ಬೆಳಗಿನ ಉಪಹಾರದಲ್ಲಿ ಉಪ್ಮಾ, ಕಿಚಡಿ ಮತ್ತು ಪೋಂಗಲ್ ಸೇರಿವೆ. ವಾರಕ್ಕೆ ಎರಡು ಬಾರಿ ರಾಗಿ ಆಧಾರಿತ ಪದಾರ್ಥಗಳನ್ನ ನೀಡಲಾಗುತ್ತದೆ. ಚೆನ್ನೈನಲ್ಲಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಆಧಾರಿತ 447 ಸರ್ಕಾರಿ ಅನುದಾನಿತ ಶಾಲೆಗಳನ್ನು ಒಳಗೊಂಡ ಅಡುಗೆ ಮನೆಗಳ ಮೂಲಕ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತಿದೆ.ಸರ್ಕಾರದ ಪ್ರಕಾರ, ಸ್ವಸಹಾಯ ಗುಂಪುಗಳ ಸದಸ್ಯರು ಆಯಾ ಶಾಲೆಗಳಲ್ಲಿ ಉಪಾಹಾರವನ್ನು ತಯಾರಿಸಿ ಬಡಿಸುತ್ತಾರೆ. ಪೌಷ್ಠಿಕಾಂಶ, ಶಾಲಾ ಹಾಜರಾತಿ ಮತ್ತು ವಿದ್ಯಾರ್ಥಿಗಳ ಕಲಿಕೆಯ ನಡುವಿನ ಸಂಬಂಧವನ್ನು ಬಲಪಡಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂದು ಪ್ರೊಟೋಕಾಲ್​​ ಮೀರಿ ಭಾರತದ ಬಾಲೆಯ ಎತ್ತಿ ಮೂಗು ಒರೆಸಿದ್ದ ಡಯಾನಾ: 34 ವರ್ಷಗಳ ಬಳಿಕ ಇಂದು
ನಾವು ಗೆದ್ದರೆ 90 ಅಡಿ ಹನುಮಂತನ ಮೂರ್ತಿ ನಾಶ: ಚುನಾವಣೆ ಸಮೀಪದಲ್ಲಿ ಅಮೆರಿಕದಲ್ಲಿ ಭುಗಿಲೆದ್ದ ವಿವಾದ