ಬೆಂಗಳೂರಿನ ಸಮೀಪದ ಹೊಸೂರಿನಲ್ಲಿ 400 ಕೋಟಿ ರು. ವೆಚ್ಚದಲ್ಲಿ ಐಟಿ ಪಾರ್ಕ್ ನಿರ್ಮಿಸುವುದಾಗಿ ತಮಿಳುನಾಡು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಮೂಲಕ ಐಟಿ ಸಿಟಿ ಬೆಂಗಳೂರಿಗೆ ಇನ್ನೊಂದು ಸಡ್ಡು ಹೊಡೆಯುವ ಯತ್ನವನ್ನು ತಮಿಳುನಾಡು ಮಾಡಿದೆ.
ಚೆನ್ನೈ (ಮಾ.15): ಬೆಂಗಳೂರಿನ ಸಮೀಪದ ಹೊಸೂರಿನಲ್ಲಿ 400 ಕೋಟಿ ರು. ವೆಚ್ಚದಲ್ಲಿ ಐಟಿ ಪಾರ್ಕ್ ನಿರ್ಮಿಸುವುದಾಗಿ ತಮಿಳುನಾಡು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಮೂಲಕ ಐಟಿ ಸಿಟಿ ಬೆಂಗಳೂರಿಗೆ ಇನ್ನೊಂದು ಸಡ್ಡು ಹೊಡೆಯುವ ಯತ್ನವನ್ನು ತಮಿಳುನಾಡು ಮಾಡಿದೆ. ಹೊಸೂರಿನಲ್ಲಿ 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಉನ್ನತ ದರ್ಜೆಯ ಕಚೇರಿ ಸೌಲಭ್ಯಗಳನ್ನು ಹೊಂದಿರುವ ಟೈಡೆಲ್ ಪಾರ್ಕ್ (ಐಟಿ ಪಾರ್ಕ್) ಅಭಿವೃದ್ಧಿ ಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಜೊತೆಗೆ ಮುಂಬರುವ ವರ್ಷದಲ್ಲಿ ವಿರುಧನಗರದಲ್ಲಿ ಮಿನಿ ಟೈಡೆಲ್ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತದೆ.
ಇದರಿಂದ 6600 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಮಿಳುನಾಡು ಹಣಕಾಸು ಸಚಿವ ತಂಗಂ ತೇನಾರಸು ಶುಕ್ರವಾರ ಬಜೆಟ್‌ನಲ್ಲಿ ಹೇಳಿದ್ದಾರೆ. ಇದಲ್ಲದೆ, ರಾಜ್ಯದ ಇನ್ನೂ ಅನೇಕ ಕಡೆ ಸಣ್ಣ ಪ್ರಮಾಣದ ಐಟಿ ಪಾರ್ಕ್ ಸ್ಥಾಪಿಸುವ ಪ್ರಸ್ತಾಪವನ್ನು ಅವರು ಮಾಡಿದ್ದಾರೆ. ಕಳೆದ ವರ್ಷ ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಿಸುವುದಾಗಿ ಘೋಷಿಸಿ ಎಂ.ಕೆ. ಸ್ಟಾಲಿನ್ ಸರ್ಕಾರ ಬೆಂಗಳೂರಿಗೆ ಸಡ್ಡು ಹೊಡೆದಿತ್ತು ಎಂಬುದು ಇಲ್ಲಿ ಗಮನಾರ್ಹ.
ನದಿ ಹರಿವಾಗ ಕಸ, ಕಡ್ಡಿ ಅಡ್ಡ ಬರುತ್ತದೆ: ಬಿ.ವೈ.ವಿಜಯೇಂದ್ರ ಮಾರ್ಮಿಕ ಹೇಳಿಕೆ
ಕರ್ನಾಟಕಕ್ಕೂ ವಿಸ್ತರಿಸಿತ್ತು ತಮಿಳು ಪರಂಪರೆ: ಪ್ರಾಚೀನ ತಮಿಳು ಸಂಸ್ಕೃತಿಯು ತಮಿಳುನಾಡು ಮಾತ್ರವಲ್ಲ, ನೆರೆಯ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಒಡಿಶಾಗೂ ವ್ಯಾಪಿಸಿತ್ತು ಎಂದಿರುವ ತಮಿಳುನಾಡು ಸರ್ಕಾರ, ತನ್ನ ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ಈ ರಾಜ್ಯಗಳಲ್ಲೂ ತನ್ನ ಸಂಸ್ಕೃತಿಯನ್ನು ಅನ್ವೇಷಿಸುವ ಪ್ರಯತ್ನ ನಡೆಸಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಿದೆ. ಶುಕ್ರವಾರ ಬಜೆಟ್ ಮಂಡಿಸಿದ ಹಣಕಾಸು ಸಚಿವ ತಂಗಂ ತೇನಾರಸು, ‘ಪ್ರಾಚೀನ ತಮಿಳರ ಸಾಂಸ್ಕೃತಿಕ ಗುರುತುಗಳನ್ನು ಹುಡುಕುವ ಪ್ರಯಾಣವು ನೆರೆಯ ರಾಜ್ಯಗಳಾದ ಪಾಲೂರು (ಒಡಿಶಾ), ವೆಂಗಿ (ಆಂಧ್ರಪ್ರದೇಶ) ಮತ್ತು ಮಸ್ಕಿ (ಕರ್ನಾಟಕದ ರಾಯಚೂರು ಜಿಲ್ಲೆಯ ಪಟ್ಟಣ) ಪ್ರದೇಶಗಳಿಗೂ ವಿಸ್ತರಿಸಲಿದೆ’ ಎಂದರು.
‘ತಮಿಳುನಾಡಿನ ಪ್ರಾಚೀನ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಮತ್ತು ದಾಖಲಿಸಲು ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ, 2025-26ರ ಹಣಕಾಸು ವರ್ಷದಲ್ಲಿ ಹಲವಾರು ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಪುರಾತತ್ವ ಉತ್ಖನನಗಳನ್ನು ನಡೆಸಲಾಗುವುದು. ಉತ್ಖನನವನ್ನು ಕೀಜಾಡಿ (ಶಿವಗಂಗಾ ಜಿಲ್ಲೆ), ಪಟ್ಟಣಮರುದೂರು (ತೂತ್ತುಕುಡಿ ಜಿಲ್ಲೆ), ಕರಿವಾಲಂವಂತನಲ್ಲೂರು (ತೆಂಕಶಿ ಜಿಲ್ಲೆ), ನಾಗಪಟ್ಟಿಣಂ (ನಾಗಪಟ್ಟಿಣಂ ಜಿಲ್ಲೆ), ಮಣಿಕ್ಕೊಲ್ಲೈ (ಕಡಲೂರು ಜಿಲ್ಲೆ), ಆದಿಚನೂರು (ಕಲ್ಲಕುರಿಚಿ ಜಿಲ್ಲೆ), ವೆಳ್ಳಾಲೂರು (ಕೊಯಮತ್ತೂರು ಜಿಲ್ಲೆ) ಹಾಗೂ ತೆಲಂಗಾನೂರು (ಸೇಲಂ ಜಿಲ್ಲೆ) ಗ್ರಾಮಗಳಲ್ಲಿ ನಡೆಸಲಾಗುವುದು’ ಎಂದರು.
ನಿಮ್ಮದು ನಾಲಿಗೆನೋ ಎಕ್ಕಡನೋ: ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನೆ
ಪಾಲೂರು (ಒಡಿಶಾ), ವೆಂಗಿ (ಆಂಧ್ರಪ್ರದೇಶ) ಮತ್ತು ಮಸ್ಕಿ (ಕರ್ನಾಟಕ) ಗಳಿಗೆ ವಿಸ್ತರಿಸಲಾಗುವುದು. ರಾಜ್ಯ ಗಡಿಗಳನ್ನು ಮೀರಿ ತಮಿಳು ಪರಂಪರೆ ಇರುವುದು ತಮಿಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತದೆ’ ಎಂದರು.