ಕ್ವಾರಂಟೈನ್‌ ಸ್ಥಳ​ದಲ್ಲಿ ಮಲ ವಿಸರ್ಜನೆ: ತಬ್ಲೀಘಿಗಳಿಂದ ಮತ್ತೆ ದುರ್ವರ್ತನೆ!

By Kannadaprabha NewsFirst Published Apr 8, 2020, 8:12 AM IST
Highlights

 ದಿಲ್ಲೀಲಿ ತಬ್ಲೀಘಿಗಳಿಂದ ಮತ್ತೆ ದುರ್ವರ್ತನೆ| ಕ್ವಾರಂಟೈನ್‌ ಸ್ಥಳ​ದಲ್ಲಿ ಮಲ ವಿಸರ್ಜಿಸಿ, ಉಗಿದರು| ಕೆಲ​ವೆಡೆ ಪರಾ​ರಿಗೆ ಯತ್ನ, ಪೊಲೀ​ಸ​ರಿಗೆ ದೂರು

ನವದೆಹಲಿ(ಏ.08): ದೇಶದ ಹಲವು ಭಾಗಗಳಿಗೆ ಕೊರೋನಾ ಸೋಂಕು ತಗುಲಿಸಿ, ಬಳಿಕ ಕ್ವಾರಂಟೈನ್‌ ಹೋಮ್‌ಗಳಲ್ಲಿ ದುರ್ವರ್ತನೆ ತೋರುತ್ತಿರುವ ತಬ್ಲೀಘಿ ಜಮಾತ್‌ಗಳ ಅಟಾಟೋಪ ಮತ್ತಷ್ಟುಮುಂದುವರೆದಿದೆ. ದೆಹಲಿಯ ನರೆಲಾದಲ್ಲಿರುವ ಕ್ವಾರಂಟೈನ್‌ ಹೋಮ್‌ನಲ್ಲಿರುವ ಕೆಲ ತಬ್ಲೀಘಿಗಳು ತಮ್ಮ ಕೊಠಡಿಯ ಹೊರಗೆ ಮಲ ವಿಸರ್ಜನೆ ಮಾಡಿದ ಅತ್ಯಂತ ಕೀಳು ಘಟನೆ ಭಾನುವಾರ ನಡೆದಿದೆ. ಅಲ್ಲದೆ ದೆಹಲಿಯ ಜೈಪ್ರಕಾಶ್‌ ನಾರಾಯಣ್‌ ಆಸ್ಪತ್ರೆಯಲ್ಲಿ ಕೆಲ ಜಮಾತ್‌ ಕಾರ್ಯಕರ್ತರು, ಪದೇ ಪದೇ ತಮ್ಮ ಕೊಠಡಿಯಿಂದ ಹೊರಗೆ ಉಗುಳುವ ಮೂಲಕ ಸುತ್ತಮುತ್ತ ಸಂಚಾರ ಮಾಡುವವರಿಗೆ ಸೋಂಕು ಹರಡುವ ಕೀಳು ಕೃತ್ಯವನ್ನೂ ಮುಂದುವರೆಸಿದ್ದಾರೆ. ಜತೆಗೆ ಕ್ವಾರಂಟೈನ್‌ ಗೃಹದಿಂದ ಪರಾರಿಯಾಗಲೂ ಯತ್ನಿಸಿದ್ದಾರೆ.

ಭಾನುವಾರ ದೆಹಲಿಯ ನರೇಲಾದಲ್ಲಿನ ಕ್ವಾರಂಟೈನ್‌ ಹೋಮ್‌ನ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 212ರ ಮುಂದೆ ಉತ್ತರಪ್ರದೇಶದ ಬಾರಾಬಂಕಿ ಮೂಲದ ತಬ್ಲೀಘಿ ಕಾರ್ಯಕರ್ತರು ಮಲವಿಸರ್ಜನೆ ಮಾಡಿದ್ದಾರೆ. ಬೆಳಗ್ಗೆ ಆರೋಗ್ಯ ಕಾರ್ಯಕರ್ತರು ತಪಾಸಣೆಗೆ ಬಂದ ವೇಳೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಅಂಕಿ-ಅಂಶ ತೆರೆದಿಟ್ಟ ಭಯಾನಕ ಸತ್ಯ! ಮುಸ್ಲಿಮರೇ ತಬ್ಲಿಘಿ ಜಮಾತ್ ವಿರೋಧಿಸಿದ್ದರು; RSS

ಕೂಡಲೇ ಈ ಕುರಿತು ಆರೋಗ್ಯ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ತಬ್ಲೀಘಿಗಳು ಕೊಠಡಿಯ ಹೊರಗೆ ಮಲ ವಿಸರ್ಜನೆ ಮಾಡಿದ, ವೈದ್ಯರು ನೀಡಿದ ಸಲಹೆ ಸೂಚನೆ ಪಾಲಿಸದೇ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು ಜೈಪ್ರಕಾಶ್‌ ನಾರಾಯಣ್‌ ಆಸ್ಪತ್ರೆಯ ಸಿಬ್ಬಂದಿ ಕೂಡಾ ಇದೇ ರೀತಿಯ ದೂರು ನೀಡಿದ್ದಾರೆ. ಈ ದೂರಿನ ಬೆನ್ನಲ್ಲೇ ಪೊಲೀಸರು, ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಾರಿಗೆ ಯತ್ನ: ದೆಹಲಿಯ ತಬ್ಲೀಘಿ ಜಮಾತ್‌ನಲ್ಲಿ ಭಾಗವಹಿಸಿ ಕೊರೋನಾ ಅಂಟಿಸಿಕೊಂಡು ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ನಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡ ಘಟನೆ ಸೋಮವಾರ ನೋಯ್ಡಾದಲ್ಲಿ ನಡೆದಿದೆ. ಇಲ್ಲಿನ ಖೇಕ್ರಾ ಭಗ್‌ಪತ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ 60 ವರ್ಷದ ನೇಪಾಳಿ ವ್ಯಕ್ತಿ, ತನ್ನ ಬಟ್ಟೆಹಾಗೂ ಬೆಡ್‌ಶೀಟ್‌ಗಳನ್ನು ಹಗ್ಗವನ್ನಾಗಿ ಮಾಡಿಕೊಂಡು ಕಿಟಕಿ ಒಡೆದು ಪಾರಾರಿಯಾಗಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಕಾರ್ಯಾಚರಣೆ ಕೈಗೊಂಡ ಪೊಲೀಸರು, ಮಂಗಳವಾರ ಆಸ್ಪತ್ರೆಯಿಂದ ಮೂರು ಕಿ.ಮಿ. ದೂರದಲ್ಲಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಮತ್ತೆ ಕ್ವಾರಂಟೈನ್‌ ಕೇಂದ್ರಕ್ಕೆ ತಂದು ಬಿಟ್ಟಿದ್ದಾರೆ. ವ್ಯಕ್ತಿಯ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಪತ್ರಕರ್ತರ ಕಳವಳ:

ಈ ನಡುವೆ ತಬ್ಲೀಘಿಗಳ ದುರ್ವರ್ತನೆ ಬಯಲಿಗೆಳೆದ ಟೀವಿ ಪತ್ರಕರ್ತರ ವಿರುದ್ಧ ಸಮುದಾಯವೊಂದರ ಕೆಲ ನಾಯಕರು ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಿರುವ ಬಗ್ಗೆ ಸುದ್ದಿ ಪ್ರಸಾರಕರ ಸಂಘಟನೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ದೆಹಲಿಯಿಂದ ಕೊರೋನಾ ನಂಜು: ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಯ್ತು ಮತ್ತಷ್ಟು

ತಿರುಪತಿ, ಕಾಳಹಸ್ತಿಯಲ್ಲಿ ತಬ್ಲೀಘಿಗಳ ಕ್ವಾರಂಟೈನ್‌

ತಿರುಪತಿ: ಆಂಧ್ರಪ್ರದೇಶದ ತಿರುಪತಿ ಮತ್ತು ಕಾಳಹಸ್ತಿ ದೇಗುಲಗಳು, ಕೊರೋನಾ ಸೋಂಕು ಶಂಕಿತರಿಗಾಗಿ ತಮ್ಮ$ದೇಗುಲದ ಸ್ಥಳಗಳನ್ನು ಕ್ವಾರಂಟೈನ್‌ ಹೋಮ್‌ ಮಾಡಲು ತೆರೆದಿವೆ. ಇದರಲ್ಲಿ ತಬ್ಲೀಘಿ ಜಮಾತ್‌ ಕಾರ್ಯಕರ್ತರು ಮತ್ತು ಅವರ ನಂಟಿನ ವ್ಯಕ್ತಿಗಳಿಗೂ ಅವಕಾಶ ನೀಡಿರುವುದು ವಿಶೇಷ. ತಿರುಪತಿ ದೇಗುಲವು ಪದ್ಮಾವತಿ ನಿಲಯ, ವಿಷ್ಣುವಾಸಂ ಸೇರಿದಂತೆ ಹಲವು ಕಟ್ಟಡಗಳನ್ನು ಕ್ವಾರಂಟೈನ್‌ ಹೋಮ್‌ಗೆ ನೀಡಿದೆ. ಇನ್ನು ಕಾಳಹಸ್ತಿ ದೇಗುಲದ ಆಡಳಿತ ಮಂಡಳಿ ಕೂಡಾ ತನ್ನ ಹಲವು ಕಟ್ಟಡಗಳನ್ನು ಬಿಟ್ಟುಕೊಟ್ಟಿದೆ.

"

click me!