ದೇಶದಲ್ಲಿ 5000 ಮಂದಿಗೆ ವೈರಸ್‌, ಸಾವು 162ಕ್ಕೇರಿಕೆ!

By Kannadaprabha NewsFirst Published Apr 8, 2020, 7:46 AM IST
Highlights

ದೇಶದಲ್ಲಿ 5000 ಮಂದಿಗೆ ವೈರಸ್‌| ಮಹಾರಾಷ್ಟ್ರವೊಂದರಲ್ಲೇ 1000 ಜನಕ್ಕೆ ಸೋಂಕು | ಎರಡೇ ದಿನ​ದಲ್ಲಿ ಒಂದು ಸಾವಿರ ಮಂದಿಗೆ ಕೊರೋನಾ|  ನಿನ್ನೆ ಒಂದೇ ದಿನ 25 ಬಲಿ: ಸಾವು 162ಕ್ಕೇರಿಕೆ

ನವದೆಹಲಿ(ಏ.08): ಲಾಕ್‌ಡೌನ್‌ ಘೋಷಣೆಯ ಹೊರತಾಗಿಯೂ ದೇಶದಲ್ಲಿ ಕೊರೋನಾ ಸೋಂಕು ಏರುತ್ತಲೇ ಇದ್ದು, ಸೋಂಕಿತರ ಸಂಖ್ಯೆ 5000ದ ಗಡಿ ದಾಟಿದೆ. ಸೋಂಕಿತರ ಸಂಖ್ಯೆ 4 ಸಾವಿರದಿಂದ 5 ಸಾವಿರಕ್ಕೆ ಎರಡೇ ದಿನದಲ್ಲಿ ಹೆಚ್ಚಳವಾಗಿದೆ. ಇದು ಕಳವಳಕ್ಕೆ ಕಾರಣವಾಗಿದ್ದು, ಲಾಕ್‌ಡೌನ್‌ ವಿಸ್ತರಿಸಬೇಕು ಎಂಬ ಬೇಡಿಕೆಗೆ ಮತ್ತಷ್ಟುಬಲ ಬಂದಂತಾಗಿದೆ.

ಸೋಮವಾರ 4678 ಇದ್ದ ಸೊಂಕಿತರ ಸಂಖ್ಯೆ ಮಂಗಳವಾರ 5192ಕ್ಕೆ ಏರಿಕೆ ಆಗಿದೆ. ಹೊಸದಾಗಿ 514 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದೇ ವೇಳೆ, ಮಂಗಳವಾರ 25 ಮಂದಿ ಬಲಿ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಮಾರಕ ವೈರಸ್‌ಗೆ ಪ್ರಾಣ ತೆತ್ತವರ ಸಂಖ್ಯೆ 162ಕ್ಕೆ ಹೆಚ್ಚಳವಾಗಿದೆ.

ಒಬ್ಬನಿಂದ 406 ಜನರಿಗೆ ಹರಡುತ್ತೆ ಕೊರೋನಾ: ಸಾಮಾಜಿಕ ಅಂತರವೊಂದೇ ಸೇಫ್!

ಕೊರೋನಾ ವೈರಸ್‌ನ ಹಾಟ್‌ಸ್ಪಾಟ್‌ ಎನಿಸಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿದೆ. ಮಂಗಳವಾರ ಹೊಸದಾಗಿ 150 ಪ್ರಕರಣಗಳು ಪತ್ತೆ ಆಗಿದ್ದು, ಸೋಂಕಿತರ ಸಂಖ್ಯೆ 1018ಕ್ಕೆ ಏರಿಕೆ ಆಗಿದೆ. ಕೊರೋನಾ ಸೋಂಕು ಸಾವಿರ ಗಡಿ ದಾಟಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 12 ಮಂದಿ ಸೋಕಿಗೆ ಬಲಿ ಆಗಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 64ಕ್ಕೆ ಏರಿಕೆ ಆಗಿದೆ. ಇದೇ ವೇಳೆ ಒಡಿಶಾದಲ್ಲಿ ಕೊರೋನಾಕ್ಕೆ ಮೊದಲ ಸಾವು ಸಂಭವಿಸಿದೆ.

ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಬಳಿಕ ತಮಿಳುನಾಡು, ದೆಹಲಿ ಹಾಗೂ ಕೇರಳ ಸ್ಥಾನ ಪಡೆದಿವೆ.

ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಲಾಕ್‌ಡೌನ್‌ ವಿಸ್ತ​ರಿಸಿ: ಕೇಂದ್ರಕ್ಕೆ ಒತ್ತಡ

ತಬ್ಲೀಘಿಗಳಿಂದ 23 ದಿನದ ಮಗುವಿಗೂ ಸೋಂಕು!

ತೆಲಂಗಾಣದ ಮಹಬೂಬ್‌ ನಗರ ಜಿಲ್ಲೆಯಲ್ಲಿ 23 ದಿನದ ಮಗುವಿನಲ್ಲೂ ಕೊರೋನಾ ವೈರಸ್‌ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮಹಬೂಬ್‌ ನಗರದಲ್ಲಿ ಮೂವರಲ್ಲಿ ಮಂಗಳವಾರ ಕೊರೋನಾ ದೃಢಪಟ್ಟಿದೆ. ಅದರಲ್ಲಿ 23 ದಿನದ ಮಗುವೂ ಸೇರಿದೆ. ತಬ್ಲೀಘಿ ಜಮಾತ್‌ ಸಮಾವೇಶದಲ್ಲಿ ಭಾಗಿಯಾಗಿ ಮರಳಿದವರಿಂದ ಇವರಿಗೆಲ್ಲಾ ಸೋಂಕು ಹಬ್ಬಿದೆ ಎಂದು ಸರ್ಕಾರ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ 10 ದಿನದ ಮಗುವಿಗೆ ಸೋಂಕು ಕಾಣಿಸಿಕೊಂಡಿತ್ತು.

"

click me!