
ನವದೆಹಲಿ(ಡಿ.14): ಮಕ್ಕಳಿಗೆ ಡ್ರೆಸ್ ಕೋಡ್ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಇನ್ನು ಮುಂದೆ ಜನ ಜೀನ್ಸ್ ಮತ್ತು ಟೀ ಶರ್ಟ್ ಧರಿಸೋ ಹಾಗಿಲ್ಲ. ಇದೆಂಥಾ ಕಾನೂನು..? ಎಲ್ಲರಿಗೂ ಕಂಫರ್ಟೆಬಲ್ ಅನಿಸೋ ಬಟ್ಟೆಯನ್ನೇ ಬ್ಯಾನ್ ಮಾಡಿದೆ ಸರ್ಕಾರ.
ಸರ್ಕಾರಿ ಕಚೇರಿಗಳಿಗೆ ಡ್ರೆಸ್ ಕೋಡ್ ಜಾರಿ ಮಾಡಿದ ಮಹಾರಾಷ್ಟ್ರ ಸರ್ಕಾರ ಟೀ ಶರ್ಟ್ ಮತ್ತು ಜೀನ್ಸ್ ಬ್ಯಾನ್ ಮಾಡಿದೆ. ಸರ್ಕಾರ ಆದೇಶದ ಪ್ರಕಾರ, ಕಾರ್ಮಿಕರು ಗಾಢ ಬಣ್ಣಗಳು ಮತ್ತು ವಿಚಿತ್ರ ಕಸೂತಿ ಮಾದರಿಗಳ ಅಥವಾ ಚಿತ್ರಗಳಿರುವ ಬಟ್ಟೆಗಳನ್ನು ಧರಿಸುವುದನ್ನು ತಡೆಯಲಾಗಿದೆ.
'ಗೋಡ್ಸೆ..ಸಾವರ್ಕರ್ DNA ಇದ್ದವರು ದೇಶವಿರೋಧಿಗಳ ಬಗ್ಗೆ ಮಾತಾಡ್ತಾರೆ'
ಮಹಿಳೆಯರು ಸೀರೆ ಅಥವಾ ಸಲ್ವಾರ್, ಕುರ್ತಾ ಧರಿಸಬೇಕು. ಕುರ್ತಾ ಜೊತೆ ಅಗತ್ಯವಿದ್ದರೆ ದುಪಟ್ಟಾ ಧರಿಸಬೇಕು. ಪುರುಷರು ಪ್ಯಾಂಟ್ ಶರ್ಟ್ ಧರಿಸಬೇಕು. ಎಲ್ಲ ಸಿಬ್ಬಂದಿ ವಾರದಲ್ಲಿ ಒಂದು ಬಾರಿ ಖಾದಿ ಬಟ್ಟೆ ಧರಿಸಬೇಕೆಂದು ಆದೇಶಿಸಲಾಗಿದೆ. ಮಹಿಳೆಯರು ಸ್ಲಿಪರ್ ಬದಲು ಚಪ್ಪಲ್, ಶೂಸ್ ಧರಿಸಬೇಕು ಎನ್ನಲಾಗಿದೆ.
ಮಹಾರಾಷ್ಟ್ರ ಸರ್ಕಾರ ಡ್ರೆಸ್ ಕೋಡ್ ಹೇರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಮಧ್ಯಪ್ರದೇಶ ಸರ್ಕಾರವು ಸುತ್ತೋಲೆ ಹೊರಡಿಸಿತ್ತು, ಆ ಮೂಲಕ ರಾಜ್ಯದ ಗ್ವಾಲಿಯರ್ ವಿಭಾಗದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಕಚೇರಿಯಲ್ಲಿ ಧರಿಸುವುದನ್ನು ನಿಷೇಧಿಸಲಾಯಿತು ಮತ್ತು ಘನತೆ, ಸಭ್ಯ ಮತ್ತು ಔಪಚಾರಿಕ ಉಡುಪನ್ನು ಧರಿಸಲು ಕೇಳಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ