ಹಳೆಯ ಬಾವಿಯಲ್ಲಿ ಮರಾಠ ಸಾಮ್ರಾಜ್ಯದ ಆಯುಧಗಳು ಪತ್ತೆ

Published : May 13, 2025, 09:11 AM IST
ಹಳೆಯ ಬಾವಿಯಲ್ಲಿ ಮರಾಠ ಸಾಮ್ರಾಜ್ಯದ ಆಯುಧಗಳು ಪತ್ತೆ

ಸಾರಾಂಶ

ಹಳೆಯ ಬಾವಿಯೊಂದರಲ್ಲಿ ಮರಾಠ ಸಾಮ್ರಾಜ್ಯದ ಕಾಲದ ಆಯುಧಗಳು ಪತ್ತೆಯಾಗಿವೆ. ಈ ಆಯುಧಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಬಳಸಲಾಗುತ್ತಿದ್ದ ಮರಾಠಾ ಧೋಪ್ ಮಾದರಿಯ ಕತ್ತಿಗಳು ಸೇರಿವೆ.

ಮುಂಬೈ: ಮಹಾರಾಷ್ಟ್ರದ ಮಹಾಬಲೇಶ್ವರದ ಹಳೆಯ ಬಾವಿಯೊಂದರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮರೆಮಾಡಲಾಗಿರುವ ಐತಿಹಾಸಿಕ ಆಯುಧಗಳು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಆಯುಧಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಬಳಸಲಾಗುತ್ತಿದ್ದ ಮರಾಠಾ ಧೋಪ್ ಮಾದರಿಯ ಕತ್ತಿಗಳು ಸೇರಿವೆ. ಈ ಕತ್ತಿಗಳನ್ನು ಅಪರೂಪವೆಂದು ಪರಿಗಣಿಸಲಾಗಿದೆ ಮತ್ತು ಐತಿಹಾಸಿಕವಾಗಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. 

ಇತಿಹಾಸಕಾರ ಮಯೂರೇಶ್ ಮೋರೆ ಮತ್ತು ಸ್ಥಳೀಯ ತಜ್ಞ ರಾಹುಲ್ ಕದಮ್ ಬಾವಿಯಲ್ಲಿರುವ ಆಯುಧಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಯೂರ್ ಮತ್ತುಜ ರಾಹುಲ್ ಕದಮ್ ಮೇ 3, 2025 ರಂದು ಬಾವಿಯಲ್ಲಿ ಕತ್ತಿಯ ಹಿಡಿ ಮತ್ತು ಇತರ ಪ್ರಾಚೀನ ವಸ್ತುಗಳಿರೋದನನ್ನು ಖಚಿತಪಡಿಸಿಕೊಂಡಿದ್ದರು. ನಂತರ ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಸೋಮವಾರ ತಹಶೀಲ್ದಾರ್ ತೇಜಸ್ವಿನಿ ಪಾಟೀಲ್ ಅವರ ನೇತೃತ್ವದಲ್ಲಿ ಬಾವವಿಯಿಂದ ವಸ್ತುಗಳನ್ನು ಹೊರಗೆ ತೆಗೆಯಲಾಯ್ತು. ನಂತರ ಈ ಆಯುಧಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಈ ಆಯಧಗಳ ವಿಶೇಷತೆ ಏನು?
ಈ ಕತ್ತಿಗಳ ವಿಶೇಷತೆಯೆಂದರೆ ಅವುಗಳ ಬ್ಲೇಡ್‌ಗಳು ಫ್ರೆಂಚ್ ಮತ್ತು ಪೋರ್ಚುಗೀಸ್ ಉತ್ಪಾದನೆಯಾಗಿದ್ದು, ಅವುಗಳನ್ನು 'ಫಿರಂಗಿ' ಎಂದೂ ಕರೆಯುತ್ತಾರೆ. ಈ ಕತ್ತಿಗಳನ್ನು ಮರಾಠಾ ಸೈನ್ಯವು ಯುದ್ಧದಲ್ಲಿ ಬಳಸುತ್ತಿತ್ತು. ಈ ಶಸ್ತ್ರಾಸ್ತ್ರಗಳ ಆವಿಷ್ಕಾರವು ಮರಾಠರ ಇತಿಹಾಸದ ಅಧ್ಯಯನಕ್ಕೆ ಹೊಸ ದಿಕ್ಕನ್ನು ಒದಗಿಸಬಹುದು. 

ಹೊಸ ಸಂಶೋಧನೆಗೆ ಮುನ್ನಡಿ
ಈ ಐತಿಹಾಸಿಕ ಆವಿಷ್ಕಾರವು ಮಹಾಬಲೇಶ್ವರದ ಸಾಂಸ್ಕೃತಿಕ ಪರಂಪರೆಗೆ ಹೊಸ ಮನ್ನಣೆ ನೀಡಿದೆ. ಈ ರೀತಿಯ ಘಟನೆಗಳು ಸ್ಥಳೀಯ ಇತಿಹಾಸದ ಅಧ್ಯಯನವನ್ನು ಉತ್ತೇಜಿಸುತ್ತವೆ ಮತ್ತು ಭವಿಷ್ಯದ ಸಂಶೋಧನೆಗೆ ಹೊಸ ಬಾಗಿಲುಗಳನ್ನು ತೆರೆಯುತ್ತವೆ. ಈ ಆವಿಷ್ಕಾರವು ಮಹಾಬಲೇಶ್ವರ ಮತ್ತು ಸತಾರಾ ಜಿಲ್ಲೆಗಳ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸಿದೆ. ಈ ಆಯುಧಗಳನ್ನು ಅಧ್ಯಯನ ಮಾಡುವ ಮೂಲಕ, ಮರಾಠಾ ಸಾಮ್ರಾಜ್ಯದ ಹೋರಾಟ ಸಂಪ್ರದಾಯಗಳ ಬಗ್ಗೆ ಹೆಚ್ಚು ಆಳವಾದ ಅಧ್ಯಯನವನ್ನು ನಡೆಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಚಲನ ಮೂಡಿಸಿದ್ದ ಛಾವಾ ಸಿನಿಮಾ 
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಮಹಾರಾಷ್ಟ್ರದಲ್ಲಿ ಸಂಚಲನವನ್ನು ಮೂಡಿಸಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಪುತ್ರ ಸಂಭಾಜಿಯ ಕಥೆಯನ್ನು ಛಾವಾ ಒಳಗೊಂಡಿತ್ತು. ಮೊಘಲ್ ರಾಜ ಔರಂಗಜೇಬ್ ಹೇಗೆ ಸಂಭಾಜಿಯನ್ನು ಕೊಲ್ಲುತ್ತಾನೆ ಎಂಬುದನ್ನು ತೋರಿಸಲಾಗಿತ್ತು. ಈ ಸಿನಿಮಾ ಬಳಿಕ ಮಹಾರಾಷ್ಟ್ರದ  ಔರಂಗಾಬಾದ್‌ನಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಇನ್ನು 'ಛಾವಾ' ಚಿತ್ರವು ಮೊಘಲ್ ಯುಗದ ಚಿನ್ನದ ನಾಣ್ಯಗಳನ್ನು ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿರುವ ಆಸಿರ್‌ಗಢ ಕೋಟೆಯಲ್ಲಿ ಅಡಗಿಸಿ ಇಡಲಾಗಿದೆ ಎಂಬುದನ್ನು ತೋರಿಸಲಾಗಿತ್ತು. ಇದನ್ನು ನಂಬಿದ ಜನರ ಗುಂಪು ಅದನ್ನು ಈಗಲೂ ಚಿನ್ನ ಸಿಗಬಹುದು ಎಂದು ಶಸ್ತ್ರಸಜ್ಜಿತರಾಗಿ ಹೋಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು