
ಜೀವನದಲ್ಲಿ ಯಶಸ್ಸು (Success) ಎಂಬುದು ಸುಲಭವಾಗಿ ಒಲಿಯುವುದಿಲ್ಲ. ಆದರೆ ಕಠಿಣ ಪರಿಶ್ರಮ (Hard work) ಮತ್ತು ಅದೃಷ್ಟ ಜೊತೆಯಾದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಫರಿದಾಬಾದ್ ಮೂಲದ ಅಜಿತ್ ಕುಮಾರ್ (Ajit Kumar) ಅವರೇ ಬೆಸ್ಟ್ ಉದಾಹರಣೆ. ಕಾಲೇಜು ಓದು ಅರ್ಧಕ್ಕೆ ಬಿಟ್ಟು ಸ್ವಿಗ್ಗಿ ಡೆಲಿವರಿ ಬಾಯ್ (Swiggy Delivery boy) ಆಗಿ ಕೆಲಸ ಮಾಡುತ್ತಿದ್ದ ಯುವಕ, ಕೇವಲ ಒಂದು ಆ್ಯಪ್ ಮೂಲಕ ಇಂದು ಕೋಟ್ಯಾಧಿಪತಿಯಾಗಿದ್ದಾರೆ (Crorepati). ಇದು ಯಾವುದೋ ಸಿನಿಮಾದ ಕಥೆಯಲ್ಲ, ಅಪ್ಪಟ ರಿಯಲ್ ಸ್ಟೋರಿ!
ಪಾಕೆಟ್ ಎಫ್‌ಎಂ (Pocket FM) ಇತ್ತೀಚೆಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಯುವಕನ ಅಚ್ಚರಿಯ ಯಶೋಗಾಥೆ (Success Story) ರಿವೀಲ್ ಆಗಿದೆ. ಹೂಡಿಕೆದಾರ ರಾಹುಲ್ ಮಾಥುರ್ (Rahul Mathur) ಅವರು ಎಕ್ಸ್ (X) ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಬಳಿಕ ಈ ಸ್ಟೋರಿ ಸಖತ್ ವೈರಲ್ ಆಗುತ್ತಿದೆ.
ಫರಿದಾಬಾದ್‌ನ (Faridabad) ಅಜಿತ್ ಕುಮಾರ್ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಮಕ್ಕಳ ಭವಿಷ್ಯಕ್ಕಾಗಿ ಅವರ ತಂದೆ ದೆಹಲಿಗೆ ಬಂದಿದ್ದರು. ಆದರೆ ಮನೆಯ ಬಡತನ ಮತ್ತು ಕೋವಿಡ್ (Covid Lockdown) ಲಾಕ್‌ಡೌನ್‌ನಿಂದಾಗಿ ಅಜಿತ್ ಕಾಲೇಜು ಮೆಟ್ಟಿಲು ಇಳಿಯಬೇಕಾಯಿತು. "ಕೇವಲ ಕಷ್ಟಪಟ್ಟರೆ ಸಾಲದು, ಓದಲು ದುಡ್ಡು (Money) ಕೂಡ ಬೇಕು" ಎಂದು ಭಾವುಕರಾಗಿ ಹೇಳುವ ಅಜಿತ್, ಕುಟುಂಬ ನಿರ್ವಹಣೆಗಾಗಿ ವಧುವಿನ ಮೇಕಪ್ (Bridal makeup), ಮೆಹಂದಿ ಡಿಸೈನ್ ಸೇರಿದಂತೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿದ್ದರು.
ಕೊನೆಗೆ, ಸ್ನೇಹಿತನೊಬ್ಬನ ಸಲಹೆಯ ಮೇರೆಗೆ ಸ್ವಿಗ್ಗಿಯಲ್ಲಿ (Swiggy) ಫುಡ್ ಡೆಲಿವರಿ ಮಾಡಲು ಶುರು ಮಾಡಿದರು. ಅವರ ಬಳಿ ಬೈಕ್ ಕೂಡ ಇರಲಿಲ್ಲ. "ದಿನಕ್ಕೆ 20 ಆರ್ಡರ್ ಡೆಲಿವರಿ ಮಾಡಲು, ನಾನು ಪ್ರತಿದಿನ ಕನಿಷ್ಠ 100 ಕಿ.ಮೀ ಸೈಕಲ್ (Bicycle) ಓಡಿಸಬೇಕಿತ್ತು" ಎಂದು ಅಜಿತ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಒಂದು ದಿನ ಡೆಲಿವರಿಗೆ ಹೋಗುವಾಗ ಕಾರೊಂದು ಡಿಕ್ಕಿ ಹೊಡೆದು ಅಜಿತ್ ಹಾಸಿಗೆ ಹಿಡಿದರು (Bedridden). ಕಾಲು ಕತ್ತರಿಸುವ ಪರಿಸ್ಥಿತಿ ಬರಬಹುದು ಎಂಬ ಭಯ ಅವರಲ್ಲಿತ್ತು. 'ನನ್ನ ಲೈಫ್ ಮುಗಿದೇ ಹೋಯ್ತು ಅಂದುಕೊಂಡಿದ್ದೆ' ಎನ್ನುವ ಅಜಿತ್‌ಗೆ, ಆಸ್ಪತ್ರೆ ಖರ್ಚು ಮತ್ತು ಸಾಲಗಾರರ (Creditors) ಭಯ ಕಾಡತೊಡಗಿತು. ಹಾಸಿಗೆ ಮೇಲಿದ್ದಾಗಲೇ ಮೊಬೈಲ್ ನೋಡುತ್ತಿದ್ದಾಗ ಪಾಕೆಟ್ ಎಫ್‌ಎಂ (Pocket FM) ಜಾಹೀರಾತು ಕಣ್ಣಿಗೆ ಬಿತ್ತು. ಕಥೆ ಬರೆದು ಹಣ ಗಳಿಸಿ ಎಂಬ ಜಾಹೀರಾತು ನೋಡಿ, ತಮ್ಮ ಮೊಬೈಲ್‌ನಲ್ಲೇ ಕಥೆ ಗೀಚಲು ಶುರು ಮಾಡಿದರು. 'ಕೆಲವೊಮ್ಮೆ ದಿನಕ್ಕೆ 4-5 ಎಪಿಸೋಡ್ (Episodes) ಬರೆಯುತ್ತಿದ್ದೆ' ಎಂದು ಅವರು ಹೇಳಿದ್ದಾರೆ.
ಅಜಿತ್ ಅವರ ಕಥೆಯೊಂದು ಪಾಕೆಟ್ ಎಫ್‌ಎಂನಲ್ಲಿ ಸೆಲೆಕ್ಟ್ ಆಗಿ, ಮೊದಲ ಬಾರಿಗೆ 20,000 ರೂ. ಸಂಭಾವನೆ (Paycheck) ಸಿಕ್ಕಿತು. ಅದನ್ನು ನೇರವಾಗಿ ತಾಯಿಯ ಕೈಗಿಟ್ಟರು. ಈ ಗೆಲುವು ಅವರಿಗೆ ಇನ್ನಷ್ಟು ಸ್ಫೂರ್ತಿ ನೀಡಿತು. ನಿರಂತರವಾಗಿ ಕಥೆ ಬರೆಯುತ್ತಾ ಹೋದರು. ಬಳಿಕ 52,000 ರೂ. ಮತ್ತು ಆ ನಂತರ ಬರೋಬ್ಬರಿ 6.29 ಲಕ್ಷ ರೂ. ಒಟ್ಟಿಗೆ ಖಾತೆಗೆ ಬಂತು! "ದುನಿಯಾ ಬದಲಾಗುತ್ತೆ ಅಂತಾರಲ್ಲ, ನನ್ನ ದುನಿಯಾ ನಿಜಕ್ಕೂ ಬದಲಾಗುತ್ತಿತ್ತು" ಎಂದು ಅಜಿತ್ ಭಾವುಕರಾಗುತ್ತಾರೆ.
ಹೂಡಿಕೆದಾರ ರಾಹುಲ್ ಮಾಥುರ್ ಹೇಳುವಂತೆ, ಅಜಿತ್ ಕುಮಾರ್ ಇಂದು ಪಾಕೆಟ್ ಎಫ್‌ಎಂನ ಸ್ಟಾರ್ ರೈಟರ್. ಇವರು ಬರೆದ "ಬ್ರಹ್ಮಯೋಧ: ದಿ ಡಿಸ್ಟ್ರಾಯರ್" (Brahmyodha: The Destroyer) ಎಂಬ ಆಡಿಯೋ ಸಿರೀಸ್ ಬರೋಬ್ಬರಿ 16.8 ಕೋಟಿ ಬಾರಿ ಪ್ಲೇ (Plays) ಆಗಿದೆ. 2026ರ ಹೊತ್ತಿಗೆ ಈ ಸಿರೀಸ್ 1300 ಎಪಿಸೋಡ್‌ಗಳನ್ನು ದಾಟಿದ್ದು, ಸುಮಾರು 100 ಕೋಟಿ ರೂ.ಗೂ ಹೆಚ್ಚು ಗಳಿಕೆ (Grossing) ಮಾಡುವ ಹಾದಿಯಲ್ಲಿದೆ. ರಾಯಧನದ (Royalties) ಮೂಲಕವೇ ಅಜಿತ್ ಇಂದು ಕೋಟ್ಯಾಧಿಪತಿಯಾಗಿದ್ದಾರೆ. ಜೈಪುರ ಸಾಹಿತ್ಯ ಉತ್ಸವಕ್ಕೂ (Jaipur Literary Festival) ಇವರು ಅತಿಥಿಯಾಗಿ ಆಹ್ವಾನಿತರಾಗಿದ್ದಾರೆ.
ಯಾವುದೇ ಬಂಡವಾಳವಿಲ್ಲದೆ, ಕೇವಲ ಮೊಬೈಲ್ ಫೋನ್ ಮತ್ತು ಛಲದಿಂದ (Dedication) ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬರು ಇಂದು ಕೋಟ್ಯಾಧಿಪತಿಯಾಗಿ ಬೆಳೆದಿರುವುದು ಯುವಜನತೆಗೆ ನಿಜಕ್ಕೂ ದೊಡ್ಡ ಸ್ಫೂರ್ತಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ