
ನವದೆಹಲಿ: ಗಂಗಾ ನದಿಯಲ್ಲಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬರು 15 ದಿನ ಅದೇ ನದಿಯ ನೀರು ಕುಡಿದುಕೊಂಡು, ಮುಳುಗಡೆಯಾಗಿರುವ ಹುಲ್ಲಿನ ಗುಡಿಸಲಿನಲ್ಲಿ ಜೀವ ಉಳಿಸಿಕೊಂಡಿದ್ದ ಅಚ್ಚರಿಯ ಘಟನೆ ನಡೆದಿದೆ.
ಬಿಹಾರದ ಬಕ್ಸಾರ್ ಜಿಲ್ಲೆಯ ಸುನೈನಾ ದೇವಿ (55) ಆ.30ರಂದು ಸ್ನಾನಕ್ಕೆಂದು ಗಂಗೆಯ ತಟಕ್ಕೆ ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು. ನಾಪತ್ತೆಯಾಗುತ್ತಿದ್ದಂತೆ ಪುತ್ರ ಆ ಬಗ್ಗೆ ದೂರು ನೀಡಿದ್ದರು. ಆದರೆ ದಿನಗಳುರುಳಿದಂತೆ ಸುನೈನಾರನ್ನು ಮತ್ತೆ ನೋಡುವ ಆಸೆಯನ್ನು ಅವರ ಪರಿವಾರ ಬಿಟ್ಟಿತ್ತು.
ಇತ್ತ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ ಸುನೈನಾರನ್ನು ನದಿಯ ಪ್ರವಾಹವು 50 ಕಿ.ಮೀ ದೂರದಲ್ಲಿನ ಉತ್ತರಪ್ರದೇಶದ ಚೈನ್ ಛಪ್ರಾ ಎಂಬಲ್ಲಿಗೆ ಹೊತ್ತುಬಂದಿತ್ತು. ಆಕೆಯ ಅದೃಷ್ಟಕ್ಕೆ ಅಲ್ಲಿ ಗದ್ದೆಯೊಂದರ ನಡುವೆ ನಿರ್ಮಿಸಲಾಗಿದ್ದ, ಆದರೆ ಪ್ರವಾಹದಿಂದಾಗಿ ಮುಳುಗಡೆಯಾಗಿದ್ದ ಹುಲ್ಲಿನ ಗುಡಿಸಲು ಕಾಣುತ್ತಿದ್ದಂತೆ ಅದನ್ನು ಹಿಡಿದುಕೊಂಡು ನದಿಯಿಂದ ಮೇಲೆದ್ದರು. ಸುತ್ತಲೂ ನೀರು ತುಂಬಿದ್ದುದರಿಂದ ಬೇರೆ ದಾರಿ ಕಾಣದೆ ಅದನ್ನೇ ಕುಡಿದುಕೊಂಡು ಇರುತ್ತಿದ್ದರು. ಸೋಮವಾರ ಮತ್ತೊಮ್ಮೆ ಕಾಲುಜಾರಿ ಮತ್ತೆ ನದಿಗೆ ಬಿದ್ದ ಈಕೆ, ಕೊಚ್ಚಿಕೊಂಡು ಹೋಗುತ್ತಿದ್ದಾಗ ‘ಶಿವಗುರು ಶಿವಗುರು’ ಎಂದು ಜಪಿಸುತ್ತಿದ್ದರು. ಅದನ್ನು ಕೇಳಿದ ಕೆಲ ಮೀನುಗಾರರು ಸುನೈನಾರನ್ನು ರಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ