ಮಾಡರ್ನ್ ಸೀತಾ ಸ್ವಯಂವರ: ಧನಸ್ಸು ಮುರಿದು ಮದುವೆಯಾದ ಯುವಕ

Published : Jul 01, 2021, 01:52 PM ISTUpdated : Jul 01, 2021, 03:32 PM IST
ಮಾಡರ್ನ್ ಸೀತಾ ಸ್ವಯಂವರ: ಧನಸ್ಸು ಮುರಿದು ಮದುವೆಯಾದ ಯುವಕ

ಸಾರಾಂಶ

ಶ್ರೀರಾಮ ಧನಸ್ಸು ಮುರಿದು ಜಾನಕಿಯನ್ನು ವರಿಸಿದ್ದು ಎಲ್ಲರಿಗೂ ಗೊತ್ತು. ಆದರೆ ಈಗ ಬಿಹಾರದಲ್ಲಿ ಒಂದು ಮಾಡರ್ನ್ ಸ್ವಯಂವರ ನಡೆದಿದೆ. ವರ ಧನಸ್ಸು ಮುರಿದು ಯುವತಿಯನ್ನು ಮದುವೆಯಾಗಿದ್ದಾನೆ

ಭಾರತೀಯ ವಿವಾಹ ಸಮಾರಂಭದ ಭವ್ಯತೆ ಮತ್ತು ಸಮೃದ್ಧಿಗೆ ವಿಶ್ವದ ಕೆಲವೇ ಕೆಲವು ವಿಷಯಗಳು ಹೊಂದಿಕೆಯಾಗುತ್ತವೆ. ಕುದುರೆಗಳ ಮೇಲೆ ವರ ಬರುವುದು, ವಧುವಿಗೆ ಸೂಕ್ತವಾದ ಆಭರಣಗಳನ್ನು ಹಾಕಿ ಅಲಂಕರಿಸಿ ಸಾವಿರಾರು ಸಂಖ್ಯೆಯಲ್ಲಿ ಅತಿಥಿಗಳು ಭಾಗವಹಿಸುತ್ತಾರೆ.

ಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ ಸಾಕಷ್ಟು ಸಂಗತಿಗಳಿವೆ. ಈ ಅನೇಕ ಪದ್ಧತಿಗಳು ಭಾರತದ ಪ್ರಾಚೀನ ಸಾಂಪ್ರದಾಯಿಕ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಆಳವಾಗಿ ಬೇರೂರಿದೆ. ಬಿಹಾರದ ವರನೊಬ್ಬ ತನ್ನ ವಿವಾಹ ಸಮಾರಂಭಕ್ಕೆ ಮುಂಚಿತವಾಗಿ ಧನಸ್ಸು ಮುರಿದು ನಂತರ ಮದುವೆಯಾಗಿದ್ದಾನೆ.

ಕೆಲವು ಕಾರಣಗಳಿಂದ ಮದುವೆಯಾಗ್ತಿದ್ದೀರಾ ? ಈ ತಪ್ಪು ಮಾಡೋ ಮುನ್ನ ಯೋಚಿಸಿ

ಈ ಘಟನೆ ರಾಮಾಯಣದ ಸೀತಾ ಸ್ವಯಂವರದಿಂದ ಪ್ರೇರಿತ. ಅಲ್ಲಿ ರಾಮನನು ಸೀತೆಯ ಸ್ವಯಂವರದಲ್ಲಿ ಶಿವನ ಆಶಿರ್ವಾದವಿರುವ ಬಿಲ್ಲು ಎತ್ತಿ ಮುರಿಯುತ್ತಾನೆ. ಪ್ರಾಚೀನ ಭಾರತದಲ್ಲಿ ಸ್ವಯಂವರ ಒಂದು ವಿವಾಹ ಪದ್ಧತಿಯಾಗಿದ್ದು ವಧು ತನ್ನ ವರನಿಗೆ ಬಂದು ಹಾರ ಹಾಕುತ್ತಾಳೆ. ಬಿಹಾರದ ಮಾಡರ್ನ್ ಸ್ವಯಂವರ ಘಟನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸರನ್ ಜಿಲ್ಲೆಯ ಸೋನ್ಪುರ್ ಬ್ಲಾಕ್‌ನ ಸಬಲ್ಪುರ್ ಪೂರ್ವ ಪ್ರದೇಶದಲ್ಲಿ "ಧನುಷ್ ಸ್ವಯಂವರ್" ಆಯೋಜಿಸಲಾಗಿದೆ. ವೀಡಿಯೊದಲ್ಲಿ, ವರನು ವೇದಿಕೆಯಲ್ಲಿ ಬಿಲ್ಲು ಮುರಿಯುವ ಮೊದಲು ಶಿವನನ್ನು ಪ್ರಾರ್ಥಿಸುತ್ತಿರುವುದು ಕಂಡುಬರುತ್ತದೆ.

ವರನು ಬಿಲ್ಲು ಮುರಿದ ತಕ್ಷಣ, ಅತಿಥಿಗಳು ಅವನ ಮೇಲೆ ಹೂಮಳೆ ಮಾಡುತ್ತಾರೆ. ವಧು-ವರರು ವೇದಿಕೆಯಲ್ಲಿ ಹೂಮಾಲೆ ವಿನಿಮಯ ಮಾಡಿಕೊಳ್ಳುತ್ತಾರೆ. ಇದನ್ನು ಅನುಸರಿಸಿ, ರಾಮಾಯಣದಲ್ಲಿ ಉಲ್ಲೇಖಿಸಿರುವಂತೆ ಭಗವಾನ್ ರಾಮ ಮತ್ತು ಸೀತೆ ದೇವಿಯ ವಿವಾಹಕ್ಕೆ ಅನುಗುಣವಾಗಿ ವಿವಾಹದ ಎಲ್ಲಾ ಆಚರಣೆಗಳನ್ನು ನಡೆಸಲಾಯಿತು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?