ಶಾಲಾ ಶುಲ್ಕ ಇಳಿ​ಕೆ ಕೋರಿದ ಪೋಷ​ಕ​ರಿ​ಗೆ ‘ಸಾಯಿರಿ’ ಎಂದ ಸಚಿ​ವ!

Published : Jul 01, 2021, 11:48 AM IST
ಶಾಲಾ ಶುಲ್ಕ ಇಳಿ​ಕೆ ಕೋರಿದ ಪೋಷ​ಕ​ರಿ​ಗೆ ‘ಸಾಯಿರಿ’ ಎಂದ ಸಚಿ​ವ!

ಸಾರಾಂಶ

* ಕೊರೋನಾ ಹಾವಳಿ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು * ಖಾಸಗಿ ಶಾಲೆ​ಗಳು ಹೆಚ್ಚು​ವರಿ ಶುಲ್ಕ ಸಂಗ್ರ​ಹಿ​ಸು​ತ್ತಿವೆ ಎಂದು ಅಳಲು ತೋಡಿ​ಕೊಂಡ ಪೋಷ​ಕರು * ಶಾಲಾ ಶುಲ್ಕ ಇಳಿ​ಕೆ ಕೋರಿದ ಪೋಷ​ಕ​ರಿ​ಗೆ ‘ಸಾಯಿರಿ’ ಎಂದ ಸಚಿ​ವ

ಭೋಪಾ​ಲ್‌(ಜು.01): ಕೊರೋನಾ ಹಾವಳಿ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು ಮಧ್ಯೆಯೇ ಖಾಸಗಿ ಶಾಲೆ​ಗಳು ಹೆಚ್ಚು​ವರಿ ಶುಲ್ಕ ಸಂಗ್ರ​ಹಿ​ಸು​ತ್ತಿವೆ ಎಂದು ಅಳಲು ತೋಡಿ​ಕೊಂಡ ಪೋಷ​ಕ​ರಿಗೆ ಮಧ್ಯ​ಪ್ರ​ದೇಶ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮಾರ್‌ ಅವರು ‘ಹೋಗಿ ಸಾಯಿ​ರಿ’ ಎಂದು ಹೇಳಿ​ ವಿವಾದ ಸೃಷ್ಟಿಸಿದ್ದಾರೆ.

ಇತ್ತೀ​ಚೆ​ಗಷ್ಟೇ ಸುಮಾರು 90-100 ವಿದ್ಯಾ​ರ್ಥಿ​ಗಳ ಪೋಷ​ಕರು ಸಚಿ​ವರ ನಿವಾ​ಸಕ್ಕೆ ಭೇಟಿ ನೀಡಿ, ‘ಹೆಚ್ಚು​ವರಿ ಶುಲ್ಕ ವಿಧಿ​ಸ​ಬಾ​ರ​ದೆಂಬ ಹೈಕೋ​ರ್ಟ್‌ ಆದೇ​ಶ​ಗ​ಳನ್ನು ಗಾಳಿಗೆ ತೂರಿ ಖಾಸಗಿ ಶಾಲೆ​ಗಳು ಹೆಚ್ಚು​ವರಿ ಶುಲ್ಕ ವಸೂಲಿ ಮಾಡು​ತ್ತಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಅಧಿ​ಕಾ​ರಿ​ಗ​ಳಿಗೆ ದೂರು ನೀಡಿ​ದರೂ ಏನೂ ಪ್ರಯೋ​ಜ​ನ​ವಾ​ಗಿಲ್ಲ. ನಾವೇನು ಮಾಡಬೇಕು?’ ಎಂದು ಪ್ರಶ್ನಿಸಿದರು. ಆಗ ಸಚಿವರು ‘ಹೋಗಿ ಸಾಯಿರಿ, ನಿಮ​ಗೇಗೆ ಇಷ್ಟಬರುತ್ತೋ ಹಾಗೆ ಮಾಡಿ’ ಎಂದು ಉಡಾ​ಫೆ​ಯಾಗಿ ಹೇಳಿ​ದ್ದಾರೆ.

ಇದರ ಬೆನ್ನಲ್ಲೇ ಪರ್ಮಾರ್‌ ಅವ​ರನ್ನು ಸಂಪು​ಟ​ದಿಂದ ವಜಾ ಮಾಡ​ಬೇಕು ಎಂದು ಕಾಂಗ್ರೆಸ್‌ ಮತ್ತು ಪೋಷ​ಕರ ಸಂಘ​ಟನೆ ಮುಖ್ಯ​ಮಂತ್ರಿ ಶಿವ​ರಾಜ್‌ ಸಿಂಗ್‌ ಚೌಹಾ​ಣ್‌ ಅವ​ರಿಗೆ ಆಗ್ರ​ಹಿ​ಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬರ್ತ್‌ಡೇ ಪಾರ್ಟಿಯ ಥ್ರಿಲ್ ರೈಡ್ ಆಯ್ತು ಲಾಸ್ಟ್ ರೈಡ್: ನಾಲ್ವರು ಸ್ನೇಹಿತರು ಜೊತೆಗೆ ಸಾವು
Viral Video: ಗುಜರಾತ್‌ ಕರಾವಳಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕುದಿಯಲು ಆರಂಭಿಸಿದ ಸಮುದ್ರ ನೀರು, ಅಧಿಕಾರಿಗಳು ಅಲರ್ಟ್‌!