ಏರ್‌ಸ್ಟ್ರೈಕ್ ವಿವರ ಪಡೆದ ಪಿಎಂ: ಮೋದಿ ಕೆಲಸವೇ ಇದೆಂದು ಟ್ರಾಲ್ ಆದ ಬಾಲಿವುಡ್ ನಟಿ

By Web DeskFirst Published Feb 27, 2019, 1:07 PM IST
Highlights

ಬಾಲಾಕೋಟ್ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿದ ದಿನ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಎಚ್ಚರವಾಗಿದ್ದು, ದಾಳಿಯ ಪಿನ್ ಟು ಪಿನ್ ಮಾಹಿತಿ ಪಡೆದಿದ್ದರು. ಇದಕ್ಕೆ ಬಾಲಿವುಡ್ ನಟಿ ಅವರ ಕೆಲಸವೇ ಅದು ಎನ್ನುವ ಮೂಲಕ ಟ್ರಾಲ್ ಆಗಿದ್ದಾರೆ. 

ನವದೆಹಲಿ :  ಬಾಲಾಕೋಟ್ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ಮಾಸ್ಟರ್ ಪ್ಲಾನ್ ಮೂಲಕ ದಾಳಿ ಮಾಡುವ ಹಿಂದಿನ ರಾತ್ರಿ ಪೂರ್ಣ ಎಚ್ಚರವಾಗಿದ್ದು ದಾಳಿಯ ಪಿನ್ ಟು ಪಿನ್ ಮಾಹಿತಿ ಪಡೆದಿದ್ದರು.  ಇದಕ್ಕೆ ಮೋದಿ ಕೆಲಸವೇ ಇದು ಎಂದು ಹೇಳಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಫುಲ್ ಟ್ರಾಲ್ ಆಗಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಮಧ್ಯರಾತ್ರಿ 3-30ರವರೆಗೂ ಪ್ರಧಾನಿ ಕಚೇರಿಯಲ್ಲೇ ಇದ್ದು, ದಾಳಿಯ ಸಂಪೂರ್ಣ ಮಾಹಿತಿ ಪಡೆದಿದ್ದರು. ದಾಳಿಯ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದ ಮೋದಿ, ದಾಳಿ ಯಶಸ್ವಿಯಾದ ನಂತರವಷ್ಟೇ ಪ್ರಧಾನಿ ಕಚೇರಿಯಿಂದ ತೆರಳಿದರು. 350 ಉಗ್ರರ ಸರ್ವನಾಶ ಮಾಡಿ ವಾಪಸಾದ ಬಳಿಕವೇ ಮೋದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. 

ಹೀಗಿತ್ತು ಜೋಷ್: ದಾಳಿಗೆ ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?

ಆದರೆ ಮೋದಿ ಕಾರ್ಯದ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ ಟ್ರಾಲ್ ಆಗಿದ್ದಾರೆ.  ನಿದ್ದೆ ಬಿಟ್ಟು ಕೆಲಸ ಮಾಡೋದು ಅವರ ಕರ್ತವ್ಯ ಎಂದು ಹೇಳಿದ್ದಾರೆ.  

 

Part of the job, no? या इसके अलग से points मिलने चाहिए??!??? https://t.co/oaeJVi3TSw

— Swara Bhasker (@ReallySwara)

ಇದಕ್ಕೆ ಅನೇಕರು ಸ್ವರಾ ಕಾಲೆಳೆದಿದ್ದು, ನೀನೂ 18 ಗಂಟೆ ಕಾಲ ಕೆಲಸ ಮಾಡುತ್ತೀಯಾ, ಮಾಡುವುದಿಲ್ಲ. ಯಾಕೆಂದರೆ ನಿನಗೆ ಕೆಲಸ ಇಲ್ಲ ಎಂದಿದ್ದಾರೆ.

ಕಾಶ್ಮೀರದಲ್ಲಿ ಮಿಗ್-21 ಫೈಟರ್ ಜೆಟ್ ಪತನ, ಇಬ್ಬರು ಪೈಲೆಟ್ ಸಾವು

ಅಲ್ಲದೇ ರಾತ್ರಿಪೂರಾ ಪಾರ್ಟಿ ಮಾಡಿ ಹ್ಯಾಂಗೋವರ್ ನಲ್ಲಿ ಇದ್ದೀಯಾ, ಬೇಗ ಎಚ್ಚರವಾಗು ಎಂದೂ ಕೆಲವರು ಹೇಳಿದ್ದಾರೆ. 

ಫೆ.26ರ ಮುಂಜಾನೆ 3.30ಕ್ಕೆ ಮಾಸ್ಟರ್ ಪ್ಲಾನ್ ಮೂಲಕ ಭಾರತೀಯ ವಾಯುಪಡೆ ಜೈಶ್ ಉಗ್ರರ ಕ್ಯಾಂಪ್ ಮೇಲೆ 1000 ಕೆಜಿ ಬಾಂಬ್ ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸ ಮಾಡಿ ವಾಪಸಾಗಿತ್ತು. ಫೆ.14ರಂದು ಭಾರತೀಯ ಸೇನೆಯ ಮೇಲೆ ಪುಲ್ವಾಮಾದಲ್ಲಿ ಉಗ್ರರು ನಡೆಸಿದ್ದ ದಾಳಿಗೆ ಪ್ರತ್ಯುತ್ತರ ನೀಡಿದ್ದರು. 

ಈ ಪ್ರತಿದಾಳಿಗೆ ದೇಶವೇ ಸಂಭ್ರಮಪಟ್ಟಿದ್ದರೆ, ಬಾಲಿವುಡ್ ನಟಿ ಟ್ವೀಟ್ ಮೂಲಕ ಪ್ರಧಾನಿ ಕೆಲಸವೇ ಇದು ಎನ್ನುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

 

We appreciate you when you're in a movie, no? No extra points, just nice to acknowledge someones work I guess :)

— Tamanna Wahi (@tamannaW)

She is still in deep sleep Tamanna ji😏
राजनैतिक प्रतिद्वंदिता में देश कहीं बहुत पीछे छूट चुका इनसे
ईश्वर सदबुद्धि दे।
🙏🙏

— DINESH CHAWLA (Namo Again) (@dinesh_chawla)

Do you work for 18 hrs ? No, because you don't have work ..😂😂

— Sudhakar Singh Negi (@sudhakarnegi)
click me!