ಬುದ್ಗಾಮ್ನಲ್ಲಿ ಪತವಾಗಿದ್ದು ಮಿಗ್-21 ವಿಮಾನ ಅಲ್ಲ, Mi-17 ಹೆಲಿಕಾಪ್ಟರ್

By Web DeskFirst Published Feb 27, 2019, 1:03 PM IST
Highlights

ಬುದ್ಗಾಮ್ನಲ್ಲಿ ಪತವಾಗಿದ್ದು ಮಿಗ್-21 ವಿಮಾನ ಅಲ್ಲ| Mi-17 ಹೆಲಿಕಾಪ್ಟರ್ ಪತನ ವಾಯುಪಡೆ ಸ್ಪಷ್ಟನೆ

ಶ್ರೀನಗರ[ಫೆ.27]: ಇಂದು ಫೆ. 27ರಂದು ಬೆಳಗ್ಗೆ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ವಾಯುಪಡೆಯ ವಿಮಾನವೊಂದು ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ಇದು ವಾಯುಸೇನೆಗೆ ಸೇರಿದ್ದ ಮಿಗ್-21 ಯುದ್ಧವಿಮಾನ ಎನ್ನಲಾಗಿತ್ತು. ಆದರೀಗ ಬುದ್ಗಾಮ್ನಲ್ಲಿ ಪತವಾಗಿದ್ದು ಮಿಗ್-21 ವಿಮಾನ ಅಲ್ಲ, Mi-17 ಸರಕು ಸಾಗಣೆ ಹೆಲಿಕಾಪ್ಟರ್ ಎಂದು ವಾಯುಪಡೆ ಖಚಿತಪಡಿಸಿದೆ. ಈ ದುರಂತದಲ್ಲಿ ಇಬ್ಬರು ಫೈಟರ್ ಜೆಟ್ ಪೈಲೆಟ್‍ಗಳು ಮೃತಪಟ್ಟಿದ್ದಾರೆ.

The aircraft that crashed in Jammu & Kashmir's Budgam was IAF's Mi-17 transport chopper. https://t.co/mnyLB3G7gd

— ANI (@ANI)

SSP Budgam on military aircraft crash in J&Ks Budgam: Some aircraft has fallen. As of now we aren't in a position to ascertain anything. Technical team is here, they'll ascertain facts. We have found 2 bodies so far and have evacuated them. Search is going on here. pic.twitter.com/9YgEIwxFRw

— ANI (@ANI)

ಕಾಶ್ಮೀರದಲ್ಲಿ ಮಿಗ್-21 ಫೈಟರ್ ಜೆಟ್ ಪತನ, ಇಬ್ಬರು ಪೈಲೆಟ್ ಸಾವು

ಮಿಗ್-21 ಪತನವಾಗಿದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಪಾಕಿಸ್ತಾನವು ನಾವೇ ಮಿಗ್-21 ಹೊಡೆದಿದ್ದು ಎಂದು ಹೇಳಿಕೊಂಡಿತ್ತು. ಆದರೆ ಪಾಕಿಸ್ತಾನದ ಈ ಹೇಳಿಕೆ ಬೆನ್ನಲ್ಲೇ ವಾಯುಪಡೆಸ ಸ್ಪಷ್ಟನೆ ನೀಡಿದ್ದು, ಪತನಗೊಂಡಿದ್ದು Mi-17 ಸರಕು ಸಾಗಣೆ ಹೆಲಿಕಾಪ್ಟರ್ ಎಂದಿದೆ. ಅಲ್ಲದೇ ಇದು ತಾಂತ್ರಿಕ ದೋಷದಿಂದಷ್ಟೇ ಪತನಗೊಂಡಿದೆ ಎಂದು ತಿಳಿಸಿದೆ. 

click me!