ಬಡವರಿಗಾಗಿ ಕಚೇರಿಯನ್ನೇ ಕೋವಿಡ್‌ ಕೇಂದ್ರವಾಗಿಸಿದ!

By Kannadaprabha NewsFirst Published Jul 30, 2020, 10:12 AM IST
Highlights

ಬಡವರಿಗಾಗಿ ಕಚೇರಿಯನ್ನೇ ಕೋವಿಡ್‌ ಕೇಂದ್ರವಾಗಿಸಿದ!| 84 ಹಾಸಿಗೆ ಅಳವಡಿಸಿದ ಸೂರತ್‌ ವ್ಯಕ್ತಿ

ಸೂರತ್‌(ಜಜು.30): ಕೊರೋನಾ ಸೋಂಕಿನಿಂದ ಗುಣಮುಖರಾದ ನಂತರ ತಮ್ಮ ಪ್ಲಾಸ್ಮಾವನ್ನು ದಾನ ನೀಡುವ ಮೂಲಕ ಕೆಲವರು ಜೀವ ಉಳಿಸುತ್ತಿದ್ದರೆ, ಸೂರತ್‌ನ ಇಬ್ಬರು ಉದ್ಯಮಿಗಳು ತಮ್ಮ ಫಾಮ್‌ರ್‍ ಹೌಸನ್ನೇ ಐಸೋಲೇಷನ್‌ ವಾರ್ಡ್‌ಗಳನ್ನಾಗಿ ಪರಿವರ್ತಿಸಿ ಬಡ ಕೊರೋನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಸ್ವತಃ ಕೊರೋನಾ ಸೋಂಕು ತಗುಲಿ ಗುಣಮುಖರಾದ ಪ್ರವೀಣ ಭಲಾಲ (43) ಮತ್ತು ಕದಾರ್‌ ಶೇಖ್‌ ಎಂಬವರೇ ಕೊರೋನಾ ರೋಗಿಗಳಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆದವರು.

ಅತಿಯಾದ ಸ್ಯಾನಿಟೈಸರ್‌ ಬಳಸುತ್ತೀರಾ? ಎಚ್ಚರ...! ಮತ್ತೊಂದು ಸಮಸ್ಯೆಗೆ ಇದು ದಾರಿ!

ಕೊರೋನಾ ಸೋಂಕು ತಗುಲಿ ಖಾಸಗಿ ಆಸ್ಪತ್ರೆ ಸೇರಿದ್ದ ಸಹೋದರನ ಚಿಕಿತ್ಸೆಗೆ ಆಸ್ಪತ್ರೆ ವಿಧಿಸಿದ್ದ 11 ಲಕ್ಷ ರು. ಬಿಲ್‌ ಕಂಡು ಕಂಗೆಟ್ಟಕದಾರ್‌ ಶೇಖ್‌ (59) ಎಂಬವರು ನೊಂದು ತಮ್ಮ 30,000 ಚ.ಕಿ.ಮೀ. ಖಾಸಗಿ ಕಚೇರಿಯನ್ನೇ 84 ಹಾಸಿಗೆಗಳ ಕೋವಿಡ್‌ ಕಾಳಜಿ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ಈ ಕೇಂದ್ರವನ್ನು ಸೂರತ್‌ ಮಹಾನಗರ ಪಾಲಿಕೆ ನಿರ್ವಹಿಸುತ್ತಿದೆ.

ತಂಬಾಕುದಾಸರಿಗೆ ಕೊರೋನಾ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು!

ಪ್ರವೀಣ್‌ ಭಲಾಲ ತಮ್ಮ 1.5 ಎಕರೆ ಭೂಮಿಯನ್ನು ಐಸೋಲೇಷನ್‌ ವಾರ್ಡ್‌ ಆಗಿ ಪರಿವರ್ತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಲಾಲ್‌ ‘ನಾನು ಸೋಂಕಿನಿಂದ ಗುಣಮುಖನಾದ ನಂತರ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಿದ್ದರು. ನಾನು ನನ್ನ ಫಾಮ್‌ರ್‍ಹೌಸಿನಲ್ಲಿ ಇದ್ದೆ. ಆ ವೇಳೆ ಇಂಥ ಸೌಲಭ್ಯ ಇರದ ಬಡವರ ನೆನಪಾಯಿತು. ಹಾಗಾಗಿ ಅಂಥವರಿಗಾಗಿ ಫಾಮ್‌ರ್‍ಹೌಸನ್ನು ಕಾಳಜಿ ಕೇಂದ್ರವಾಗಿ ಪರಿವರ್ತಿಸಿದೆ’ ಎಂದಿದ್ದಾರೆ.

click me!