ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆ, ಕೇರಳ ಸ್ಟೋರಿ ಪ್ರದರ್ಶನಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್!

By Suvarna News  |  First Published May 18, 2023, 3:53 PM IST

ಕೇರಳ ಸ್ಟೋರಿ ಸಿನಿಮಾ ಪ್ರದರ್ಶನದಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ನಿಷೇಧ ನಿರ್ಧಾರಕ್ಕೆ ತಡೆ ನೀಡಿದೆ. ಈ ಮೂಲಕ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದೆ.


ನವದೆಹಲಿ(ಮೇ.18): ಐಸಿಸ್ ಉಗ್ರವಾದ, ಮತಾಂತರ, ಭಯೋತ್ಪಾದನೆ ಷಡ್ಯಂತ್ರ ಕುರಿತ ಕೇರಳ ಸ್ಟೋರಿ ಚಿತ್ರ ಪರ ವಿರೋಧಕ್ಕೆ ಕಾರಣಾಗಿದೆ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧ ಹೇರಿದ್ದರು. ಪಶ್ಚಿಮ ಬಂಗಾಳದಲ್ಲಿ ಈ ಚಿತ್ರ ದ್ವೇಷ ಹರಡಲಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಎಂದು ನಿಷೇಧ ಹೇರಿತ್ತು.  ಇದರ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಚಿತ್ರತಂಡಕ್ಕೆ ಗೆಲುವು ಸಿಕ್ಕಿದೆ. ಜಸ್ಟೀಸ್ ಪಿಎಸ್ ನರಸಿಂಹ , ಜಸ್ಟೀಸ್ ಜೆಬಿ ಪರಿದಿವಾಲ ಅವರಿದ್ದ ಪೀಠ ಮಹತ್ವದ ಆದೇಶ ನೀಡಿದೆ. ಪಶ್ಚಮ ಬಂಗಾಳ ವಿಧಿಸಿದ ನಿಷೇಧಕ್ಕೆ ತಡೆ ಕೋರಿ, ಇದೀಗ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ.

ಐಸಿಸ್‌ ಉಗ್ರರ ಕಥಾ ಹಂದರದ ವಿವಾದಿತ ‘ದ ಕೇರಳ ಸ್ಟೋರಿ’ ಸಿನಿಮಾಗೆ ವಿಧಿಸಿರುವ ನಿಷೇಧದ ಕುರಿತಾಗಿ ವಿವರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು. ಇದರಂತೆ ಪಶ್ಚಿಮ ಬಂಗಾಳ ಸರ್ಕಾರ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ ಕಾರಣವನ್ನು ಸಮರ್ಥಿಸಿಕೊಂಡಿತ್ತು. ಆದರೆ ಪಶ್ಚಿಮ ಬಂಗಾಳ ವಾದವನ್ನ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಮಮತಾ ಬ್ಯಾನರ್ಜಿ ಹೇರಿದ್ದ ಚಿತ್ರ ಪ್ರದರ್ಶನ ನಿಷೇಧ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತು.

Tap to resize

Latest Videos

'ದಿ ಕೇರಳ ಸ್ಟೋರಿ'ಯಲ್ಲಿ ಶಿವನನ್ನು ಗೇಲಿ ಮಾಡಿದ ಮಹಿಳೆ; ಸದ್ಗುರುವಿನ ಹಳೆಯ ಉತ್ತರ ವೈರಲ್

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ‘ಇಡೀ ದೇಶದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪಶ್ಚಿಮ ಬಂಗಾಳದ ರೀತಿಯ ಜನರನ್ನೇ ಹೊಂದಿರುವ ರಾಜ್ಯಗಳಲ್ಲೂ ಸಿನಿಮಾ ಪ್ರದರ್ಶನವಾಗುತ್ತಿದೆ. ಇಲ್ಲಿ ಯಾವುದೇ ಸಮಸ್ಯೆಗಳು ಸಂಭವಿಸಿಲ್ಲ. ಆದರೂ ಬಂಗಾಳದಲ್ಲಿ ಮಾತ್ರ ಏಕೆ ಸಿನಿಮಾಗೆ ನಿಷೇಧ ವಿಧಿಸಲಾಗಿದೆ? ಜನರಿಗೆ ಸಿನಿಮಾ ಇಷ್ಟವಾಗದಿದ್ದರೆ ಅವರು ಅದನ್ನು ನೋಡುವುದಿಲ್ಲ ಎಂದು ಕೋರ್ಟ್ ಹೇಳಿತ್ತು.

ಈ ಸಿನಿಮಾ ದ್ವೇಷ ಮತ್ತು ಹಿಂಸೆಯನ್ನು ಹರಡುತ್ತದೆ ಎಂಬ ಕಾರಣವನ್ನು ನೀಡಿದ್ದ ಮಮತಾ ಬ್ಯಾನರ್ಜಿ, ‘ಇದು ಕೇರಳ ರಾಜ್ಯಕ್ಕೆ ಅವಮಾನ ಮಾಡುತ್ತದೆ. ಇದೇ ರೀತಿಯ ದ್ವೇಷ ರಾಜ್ಯದಲ್ಲಿ ಹರಡುವುದನ್ನು ತಪ್ಪಿಸುವುದಕ್ಕಾಗಿ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಲಾಗಿದೆ ಎಂದಿದ್ದರು. 

The Kerala Story: ಕೇವಲ ಸಿನಿಮಾವಲ್ಲ ಇದೊಂದು ಚಳುವಳಿ- ನಟಿ ಅದಾ ಶರ್ಮಾ ಬೋಲ್ಡ್ ಹೇಳಿಕೆ

ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಭಾರತೀಯ ಚಿತ್ರ ನಿರ್ಮಾಪಕರ ಒಕ್ಕೂಟ, ಚಿತ್ರವನ್ನು ಬಿಡುಗಡೆ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಹಕ್ಕು ಕೇಂದ್ರೀಯ ಚಲನಚಿತ್ರ ಸೆನ್ಸಾರ್‌ ಮಂಡಳಿ ಹೊರತು ಯಾರಿಗೂ ಇಲ್ಲ’ ಎಂದಿತ್ತು. ‘ಚಿತ್ರವನ್ನು ನೋಡಬೇಕೋ ಬೇಡವೋ ಎಂಬುದನ್ನು ಪ್ರೇಕ್ಷಕನೇ ಆಯ್ಕೆ ಮಾಡುತ್ತಾನೆ. ಮಂಡಳಿ ಹೊರತು ಚಿತ್ರವನ್ನು ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ’ ಎಂದು ಕಿಡಿಕಾರಿತ್ತು.

click me!