
ನವದೆಹಲಿ (ಡಿ.6): ಸುಪ್ರೀಂ ಕೋರ್ಟ್ ತನ್ನಲ್ಲಿನ ಕೇಸ್‌ಗಳನ್ನು ದಾಖಲು ಮಾಡುವ ಹಾಗೂ ಕೇಸ್ ಅನ್ನು ಲಿಸ್ಟಿಂಗ್ ಮಾಡುವ ಕೋರ್ಟ್ ರಿಜಿಸ್ಟ್ರಿಯನ್ನು ಸುಧಾರಣೆ ಮಾಡುವ ನಿರ್ಧಾರ ಮಾಡಿದೆ. ಅದಕ್ಕಾಗಿ ಇದೇ ಮೊದಲ ಬಾರಿಗೆ ಹ್ಯಾಕಥಾನ್‌ಅನ್ನು ಆಯೋಜನೆ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ಮೇಲ್ವಿಚಾರಣೆಯಲ್ಲಿ, ನವೀನ ಆಲೋಚನೆಗಳನ್ನು ಗುರುತಿಸಲು ಹಾಗೂ ಈಗಿರುವ ನೋಂದಣಿ ಪ್ರಕ್ರಿಯೆಯಲ್ಲಿ ಪರಿಷ್ಕರಣೆ ಮತ್ತು ದಕ್ಷತೆಯನ್ನು ತರಲು ಹ್ಯಾಕಥಾನ್‌ಅನ್ನು ಆಯೋಜನೆ ಮಾಡಲಾಗುತ್ತದೆ. ನೋಂದಣಿ ಪ್ರಕ್ರಿಯೆ ಆದಷ್ಟು ಸುಲಭವಾಗುವ ನಿಟ್ಟಿನಲ್ಲಿ ಯಾವೆಲ್ಲಾ ರೀತಿಯ ಕ್ರಮಗಳನ್ನು ಮಾಡಬಹುದು ಎನ್ನುವ ನಿಟ್ಟಿನಲ್ಲಿ ಈ ಹ್ಯಾಕಥಾನ್ ಆಯೋಜನೆ ಮಾಡಲಾಗುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಇದು ಎಲ್ಲರನ್ನೂ ಒಳಗೊಂಡಿರುವ ಕಾರ್ಯಕ್ರಮ, ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ಮಾಡಬಹುದು, ಆದಷ್ಟು ಸುಲಭ ಹಾಗೂ ಶೀಘ್ರಗತಿಯಲ್ಲಿ ಕೋರ್ಟ್‌ನಲ್ಲಿ ವ್ಯವಹಾರ ಮಾಡುವುದು ಹೇಗೆ ಎನ್ನುವ ವಿಚಾರ ಇದರಲ್ಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಈವೆಂಟ್‌ನಲ್ಲಿ ಭಾಗವಹಿಸಲು ಮತ್ತು ವ್ಯವಸ್ಥೆಯ ಸುಧಾರಣೆಗಾಗಿ ತಮ್ಮ ಸಲಹೆಗಳ ಮೂಲಕ ಒಳನೋಟಗಳನ್ನು ಒದಗಿಸಲು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ಅನ್ನೂ ಆಹ್ವಾನ ಮಾಡಿದೆ. ಅದರೊಂದಿಗೆ ಕೋರ್ಟ್‌ನಲ್ಲಿ ಕರ್ತವ್ಯದಲ್ಲಿರುವವರು ಅಂದರೆ, ನೋಂದಾವಣೆ ಅಧಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ವಸತಿ ಕಚೇರಿಗಳಲ್ಲಿ ನಿಯೋಜಿಸಲಾದ ಕಾನೂನು ಗುಮಾಸ್ತರಿಂದಲೂ ಸಲಹೆಗಳನ್ನು ಕೇಳಲಾಗುತ್ತದೆ.
ಸ್ವಾಮೀಜಿಯನ್ನು ಪರಮಾತ್ಮ ಎಂದು ಘೋಷಿಸಲು ಕೋರಿದ್ದ ಅರ್ಜಿ ವಜಾ
ಅತ್ಯುತ್ತಮ ಹದಿನೆಂಟು ಸಲಹೆಗಳು/ನವೀನ ವಿಚಾರಗಳನ್ನು ಈ ಹ್ಯಾಕಥಾನ್‌ನಿಂದ ಗುರುತಿಸಲಾಗುತ್ತದೆ ಮತ್ತು ಅವರ ಸಲಹೆಯನ್ನು ಇನ್ನಷ್ಟು ವಿಸ್ತಾರ ರೂಪದಲ್ಲಿ ತಿಳಿಸಲು ಹಾಗೂ ಕೋರ್ಟ್‌ನ ಮುಂದಿಡಲು ಅವಕಾಶವನ್ನೂ ನೀಡಲಾಗುತ್ತದೆ ಎಂದು ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಮೇಲ್ವರ್ಗ ಮೀಸಲು ಪ್ರಶ್ನಿಸಿ ಡಿಎಂಕೆ ಸುಪ್ರೀಂಕೋರ್ಟ್‌ಗೆ
ಹ್ಯಾಕಥಾನ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದವರು ಮತ್ತು ರನ್ನರ್ ಅಪ್ ಆದವರನ್ನು ಸನ್ಮಾನಿಸಲಾಗುವುದು. ಈ ಸಂಬಂಧದ ಅಧಿಸೂಚನೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು, ಇದು ಈವೆಂಟ್‌ಗೆ ಅರ್ಜಿ ಸಲ್ಲಿಸುವ ವಿಧಾನವನ್ನು ವಿವರಿಸುತ್ತದೆ ಮತ್ತು ಅರ್ಜಿಗಳ ಆನ್‌ಲೈನ್ ಸಲ್ಲಿಕೆಗೆ ಲಿಂಕ್ ಅನ್ನು ಒದಗಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ