ಪಗಡೆಯಾಟದಲ್ಲಿ ತನ್ನನ್ನೇ ಪಣಕಿಟ್ಟು ಸೋತ ನಾರಿ: ಎತ್ತಾಕ್ಕೊಂಡೋದ ಮನೆ ಮಾಲೀಕ

Published : Dec 06, 2022, 11:26 AM ISTUpdated : Dec 06, 2022, 11:29 AM IST
ಪಗಡೆಯಾಟದಲ್ಲಿ ತನ್ನನ್ನೇ ಪಣಕಿಟ್ಟು ಸೋತ ನಾರಿ: ಎತ್ತಾಕ್ಕೊಂಡೋದ ಮನೆ ಮಾಲೀಕ

ಸಾರಾಂಶ

ಮಹಿಳೆಯೊಬ್ಬಳು ತನ್ನನ್ನೇ ತಾನು ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಪಗಡೆಯಾಟವಾಡಿ ಸೋತು ಹೋಗಿದ್ದಾಳೆ. ಇದರಿಂದ ಮಹಿಳೆ ಮಾಲೀಕನ ಪಾಲಾಗಿದ್ದಾಳೆ. ಈ ವಿಚಿತ್ರ ಘಟನೆ ಉತ್ತರಪ್ರದೇಶದ ಪ್ರತಾಫ್‌ಗಢದಲ್ಲಿ ನಡೆದಿದೆ.

ಮಹಾಭಾರತದ ಕಾಲದಲ್ಲಿ ಪಗಡೆಯಾಟವಾಡಿದ ಧರ್ಮರಾಯ ಇಡೀ ತನ್ನ ಕುಟುಂಬ, ರಾಜ್ಯ ಹಾಗೂ ಪತ್ನಿಯನ್ನು ಪಣಕ್ಕಿಟ್ಟು ಕೊನೆಗೆ ಸೋತು ಎಲ್ಲವನ್ನು ಕಳೆದುಕೊಂಡು ಕಾಡಿಗೆ ಹೋಗಿರುವ ಪುರಾಣ ಕತೆ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ಜೂಜು, ಇಸ್ಪೀಟ್, ಅಂದರ್ ಬಾಹರ್ ಮುಂತಾದ ಅಧುನಿಕ ಹೆಸರಿನಿಂದ ಕರೆಯಲ್ಪಡುವ ಪಗಡೆಯಾಟದಲ್ಲಿ ಮಹಿಳೆಯೊಬ್ಬಳು ತನ್ನನ್ನೇ ತಾನು ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಪಗಡೆಯಾಟವಾಡಿ ಸೋತು ಹೋಗಿದ್ದಾಳೆ. ಇದರಿಂದ ಮಹಿಳೆ ಮಾಲೀಕನ ಪಾಲಾಗಿದ್ದಾಳೆ. ಈ ವಿಚಿತ್ರ ಘಟನೆ ಉತ್ತರಪ್ರದೇಶದ ಪ್ರತಾಫ್‌ಗಢದಲ್ಲಿ ನಡೆದಿದ್ದು, ಈ ಘಟನೆಯಿಂದ ಆಘಾತಗೊಂಡಿರುವ ಮಹಿಳೆ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.

ಹೀಗೆ ಪಗಡೆಯಾಟವಾಡಿ(Gambling) ಮಾಲೀಕನ ಪಾಲಾದ ಮಹಿಳೆಯ ಹೆಸರು ರೇಣು. ಲೂಡೋ ಗೇಮ್‌ಗೆ (Ludo Game) ಗೀಳು ಹೆಚ್ಚಿಸಿಕೊಂಡಿದ್ದ ಈ ಮಹಿಳೆ ತನ್ನ ಮನೆಯ ಮಾಲೀಕನೊಂದಿಗೆ ಸದಾ ಕಾಲ ಈ ಲೂಡೋ ಗೇಮ್ ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಾ ತನ್ನಲಿದ್ದ ಹಣವನ್ನೆಲ್ಲಾ ಕಳೆದುಕೊಂಡ ಆಕೆ, ಬಳಿಕ ತನ್ನ ಮಾಲೀಕನ ಬಳಿ ತನ್ನನ್ನೇ ಪಣಕ್ಕಿಟ್ಟಿದ್ದಳು. ಹೀಗೆ ತನ್ನನ್ನೇ ಪಣಕ್ಕಿಟ್ಟ ಬಳಿಕವೂ ಆಕೆ ಸೋತಿದ್ದು, ಇದರಿಂದ ಮಾಲೀಕ ಆಕೆಯನ್ನು ಹೊತ್ತೊಯ್ದಿದ್ದಾನೆ ಎನ್ನಲಾಗಿದೆ. ಇದರಿಂದ ಮಹಿಳೆ ತನ್ನ ಗಂಡನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ವಿಚಾರ ತಿಳಿದ ಗಂಡ ಓಡಿಬಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಲೂಡೋ ಆಡ್ತಾ ಆನ್‌ಲೈನಲ್ಲಿ ಲವ್.! ಮನೆಬಿಟ್ಟು ಓಡಿದ ಗೇಮ್ ಸುಂದರಿ

ಇತ್ತ ಈ ಮಹಿಳೆ ರೇಣು (Renu) ಪತಿ ದೂರದ ರಾಜಸ್ತಾನದ (Rajastan) ಜೈಪುರಕ್ಕೆ (Jaipur) ಕೆಲಸಕ್ಕಾಗಿ ಹೊರಟು ಹೋಗಿದ್ದು ಅಲ್ಲೇ ವಾಸ ಮಾಡುತ್ತಿದ್ದ, ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಗೆ ಬಂದ ರೇಣು ಪತಿ ಪ್ರತಾಪಗಢ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರತಾಪ್‌ಗಡದ (Pratapgarh) ದೇವಕಲಿ (Devakali) ಎಂಬಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಾತನಾಡಿದ ರೇಣುವಿನ ಪತಿ, ದೇವಕಲಿ ನಗರದ ಆಸುಪಾಸಿನಲ್ಲಿ ಈತ ಹಿಂದೊಮ್ಮೆ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಿದ್ದ. ಆದರೆ ಆರು ತಿಂಗಳ ಹಿಂದೆ ಈತ ಕೆಲಸಕ್ಕಾಗಿ ಜೈಪುರಕ್ಕೆ ವಲಸೆ ಹೋಗಿದ್ದು, ಅಲ್ಲಿ ದುಡಿಮೆ ಮಾಡುತ್ತಿದ್ದ ಆತ ದೂರದಲ್ಲಿದ್ದ ಪತ್ನಿಗಾಗಿ ಹಣ ಕಳುಹಿಸುತ್ತಿದ್ದ. ಆದರೆ ಈ ಪತ್ನಿ ಆ ಹಣವನ್ನು ಇಟ್ಟು ಜೂಜಾಡಿದ್ದಲ್ಲದೇ ತನ್ನನ್ನೇ ಪಣಕ್ಕಿಟ್ಟು ಗಂಡನಿಗೆ ಪತ್ನಿ ಇಲ್ಲದಂತೆ ಮಾಡಿದ್ದಾಳೆ. 

'ಜಮೀನಲ್ಲ, ಆಸ್ತಿಯಲ್ಲ ಲೂಡೋದಲ್ಲಿ ಅಪ್ಪ ಮೋಸ ಮಾಡಿದ್ದಾನೆ, ನ್ಯಾಯ ಕೊಡಿಸಿ'!

ಘಟನೆಯ ಬಳಿಕ ಮಹಿಳೆ ಮನೆ ಮಾಲೀಕನ ಮನೆಗೆ ಹೊರಟು ಹೋಗಿದ್ದು, ಆಕೆ ಆತನೊಂದಿಗೆ ಹೋಗದಂತೆ ಎಲ್ಲಾ ಪ್ರಯತ್ನಗಳನ್ನು ನಾನು ಮಾಡಿದೆ. ಆದರೆ ಜೂಜಿನಲ್ಲಿ ಸೋತಿರುವುದರಿಂದ ವಾಪಸ್ ಬರಲು ಆಕೆ ಸಿದ್ಧಳಿಲ್ಲ ಎಂದು ಪತಿ ಹೇಳಿದ್ದಾನೆ. ಈ ಬಗ್ಗೆ ಪೊಲೀಸರ ಪ್ರತಿಕ್ರಿಯೆ ಕೇಳಿದಾಗ, ನಾವು ಮಹಿಳೆಯ ಪತಿ ಜೊತೆ ಸಂಪರ್ಕದಲ್ಲಿದ್ದು ಕೂಡಲೇ ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. 

ಲೂಡೋ ಗೇಮ್‌ನಲ್ಲಿ ಸೋಲಿಸಿದ ಹೆಂಡತಿ ಬೆನ್ನುಮೂಳೆ ಮುರಿದ ಗಂಡ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು