ಉಚಿತ ಕೊಡುಗೆ ಪ್ರಶ್ನಿಸಿದ್ದ ಅರ್ಜಿ ಮಾರ್ಚಲ್ಲಿ ವಿಚಾರಣೆ : ಸುಪ್ರೀಂ

Kannadaprabha News   | Kannada Prabha
Published : Feb 06, 2026, 05:03 AM IST
Supreme court

ಸಾರಾಂಶ

ಚುನಾವಣೆಯಲ್ಲಿ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ರಾಜಕೀಯ ಪಕ್ಷಗಳು ಭರವಸೆಗಳನ್ನು ಕೊಡುವ ಭರದಲ್ಲಿ ಭರ್ಜರಿ ಉಚಿತಗಳನ್ನು ಘೋಷಿಸುತ್ತಿರುವ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮಾರ್ಚ್‌ನಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ನವದೆಹಲಿ: ಚುನಾವಣೆಯಲ್ಲಿ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ರಾಜಕೀಯ ಪಕ್ಷಗಳು ಭರವಸೆಗಳನ್ನು ಕೊಡುವ ಭರದಲ್ಲಿ ಭರ್ಜರಿ ಉಚಿತಗಳನ್ನು ಘೋಷಿಸುತ್ತಿರುವ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮಾರ್ಚ್‌ನಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ತರ್ಕಬದ್ಧವಲ್ಲದ ಭರವಸೆ

ತರ್ಕಬದ್ಧವಲ್ಲದ ಭರವಸೆಗಳನ್ನು ನೀಡುವ ಪಕ್ಷಗಳ ಚಿಹ್ನೆಯನ್ನು ವಶಪಡಿಸಿಕೊಳ್ಳುವುದು ಅಥವಾ ಅದರ ನೋಂದಣಿಯನ್ನು ರದ್ದುಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಬಗ್ಗೆ ಸ್ವತಃ ನ್ಯಾ। ಅಶ್ವಿನಿ ಉಪಾಧ್ಯಾಯ ಅವರು 2022ರಲ್ಲಿ ಕೇಂದ್ರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿದ್ದು, ಅದರಲ್ಲಿ, ‘ಸೂರ್ಯ, ಚಂದ್ರನನ್ನು ಬಿಟ್ಟು ಉಳಿದೆಲ್ಲವನ್ನೂ ಕೊಡುವುದಾಗಿ ಪಕ್ಷಗಳು ಭರವಸೆ ನೀಡುತ್ತದೆ.

ಭ್ರಷ್ಟಾಚಾರಕ್ಕೆ ಸಮ

ಇದು ಭ್ರಷ್ಟಾಚಾರಕ್ಕೆ ಸಮ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮಾರಕವಾಗಿರುವ ಇದು, ಸಂವಿಧಾನಕ್ಕೂ ಹಾನಿಯುಂಟುಮಾಡುತ್ತದೆ’ ಎಂದು ವಾದಿಸಿದ್ದರು. ಜತೆಗೆ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದರು. ಆ ವೇಳೆ ಸಿಜೆಐ ಆಗಿದ್ದ ನ್ಯಾ। ಎನ್‌.ವಿ. ರಮಣ ಅವರ ಪೀಠ ಉಚಿತಗಳ ಭರವಸೆ ಮಿತಿಮೀರುತ್ತಿರುವುದನ್ನು ಗಮನಿಸಿ ಈ ಬಗ್ಗೆ ಪ್ರತಿಕ್ಗರಿಯಿಸುವಂತೆ ಕೇಂದ್ರ ಹಾಗೂ ಆಯೋಗಕ್ಕೆ ತಾಕೀತು ಮಾಡಿತ್ತು.

ಆ ಅರ್ಜಿಯನ್ನು ಪರಿಗಣಿಸಿರುವ ಸಿಜೆ ನ್ಯಾ। ಸೂರ್ಯಕಾಂತ್‌ ಅವರು, ‘ಇದು ಗಂಭೀರ ವಿಚಾರವಾಗಿದ್ದು, ಮಾರ್ಚ್‌ನಲ್ಲಿ ಅವಶ್ಯವಾಗಿ ವಿಚಾರಣೆ ನಡೆಸಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಕೇರಳ, ಬಂಗಾಳ, ತಮಿಳುನಾಡು ಸೇರಿ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು : ಪ್ರಧಾನಿ