ರಥ ಯಾತ್ರೆಗೆ ಬ್ರೇಕ್, ಅನುಮತಿ ನೀಡಿದರೆ ಪುರಿ ಜಗನ್ನಾಥ ಕ್ಷಮಿಸಲ್ಲ ಎಂದ ಸುಪ್ರೀಂ ಕೋರ್ಟ್!

By Suvarna NewsFirst Published Jun 18, 2020, 8:44 PM IST
Highlights

ಕೊರೋನಾ ವೈರಸ್ ಕಾರಣ ಕೋರ್ಟ್ ಮೆಟ್ಟಿಲೇರಿದ್ದ ಪುರಿ ಜಗನ್ನಾಥ ರತ ಯಾತ್ರೆಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಇಷ್ಟೇ ಅಲ್ಲ ಅನುಮತಿ ನೀಡಿದರೆ ಜಗನ್ನಾಥ ಕ್ಷಮಿಸಲ್ಲ ಎಂದು ಸುಪ್ರೀಂ ಹೇಳಿದೆ.

ನವದೆಹಲಿ(ಜೂ.18): ವಿಶ್ವವಿಖ್ಯಾತ ಪುರಿ ಜಗನ್ನಾಥ ಮಂದಿರದ ರತ ಯಾತ್ರೆಗೆ ಬ್ರೇಕ್ ಬಿದ್ದಿದೆ. ಜೂನ್ 23 ರಿಂದ 10 ದಿನಗಳ ಕಾಲ ನಡೆಯಬೇಕಿದ್ದ ವಾರ್ಷಿಕ ರಥ ಯಾತ್ರೆ ಆಯೋಜಿಸಲು ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಡೆ, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ಎಸ್ ಬೋಪಣ್ಣ ಒಳಗೊಂಡ ಪೀಠ ಮಹತ್ವದ ಆದೇಶ ನೀಡಿದೆ.

ಮಾಸ್ಕ್ ಡೇ: ಸಿಎಂ ಜೊತೆ ಸೆಲೆಬ್ರಿಟಿಗಳ ಸಾಥ್, ಇಲ್ಲಿವೆ ಫೋಟೋಸ್.

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಈ ಕ್ರಮ ತೆಗೆದುಕೊಳ್ಳಬೇಕಿದೆ. ಪುರಿ ಜಗನ್ನಾಥ ಮಂದಿರ ವಾರ್ಷಿಕ ರಥ ಯಾತ್ರೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಅನುಮತಿ ನೀಡಿದರೆ ಪುರಿ ಜಗನ್ನಾಥ ನಮ್ಮನ್ನು ಕ್ಷಮಿಸಲ್ಲ ಎಂದು ಪೀಠ ಹೇಳಿದೆ. 

ಕೊರೋನಾಗೆ ವ್ಯಾಕ್ಸಿನ್: ಬ್ರಿಟನ್ ವೈದ್ಯರ ತಂಡದಲ್ಲಿ ಕೊಡಗಿನ ವೈದ್ಯೆ

ಪುರಿ ಜಗನ್ನಾಥ ಮಂದಿರದ ವಾರ್ಷಿಕ ರಥ ಯಾತ್ರೆಗೆ ಲಕ್ಷಕ್ಕೂ ಅಧಿಕ ಮಂದಿ ಸೇರುತ್ತಾರೆ. ಹೀಗಾಗಿ ಎನ್‌ಜಿಯೋ ರಥ ಯಾತ್ರೆ ನಡೆಸದಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಡಿಶಾ ಸರ್ಕಾರಕ್ಕೆ ಕಟ್ಟು ನಿಟ್ಟಿನ ಆದೇಶ ನೀಡಿದೆ. ಯಾವುದೇ ಕಾರಣಕ್ಕೂ ರಥ ಯಾತ್ರೆಗೆ ಅನುಮತಿ ನೀಡಬಾರದು. ಇಷ್ಟೇ ಅಲ್ಲ ಮೆರವಣಿಗೆ ಸೇರಿದಂತೆ ಭಕ್ತರು ಸೇರುವಂತ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಸೂಚಿಸಿದೆ.

ಲಕ್ಷ ಲಕ್ಷ ಭಕ್ತರು ಸೇರಿದರೆ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬಲಿದೆ. ಇದು ಆತಂಕಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


 

click me!