ಕರ್ನಾಟಕ ಮೂಲದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶಾಂತನಗೌಡರ ನಿಧನ

By Suvarna NewsFirst Published Apr 25, 2021, 9:08 AM IST
Highlights

 ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ನ್ಯಾಯಾಧೀಶ ನ್ಯಾ.ಮೋಹನ್‌.ಎಂ.ಶಾಂತನಗೌಡರ (63) ಶನಿವಾರ ವಿಧಿವಶರಾಗಿದ್ದಾರೆ. ಕೊರೋನಾ ಸೋಂಕು ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. 

ನವದೆಹಲಿ (ಏ.25): ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ನ್ಯಾಯಾಧೀಶ ನ್ಯಾ.ಮೋಹನ್‌.ಎಂ.ಶಾಂತನಗೌಡರ (63) ಶನಿವಾರ ವಿಧಿವಶರಾಗಿದ್ದಾರೆ. 

ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕು ಚಿಕ್ಕೇರೂರಿನವರಾದ ಅವರು 3 ದಿನ ಹಿಂದೆ ಅನಾರೋಗ್ಯದಿಂದ ಹರ್ಯಾಣದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು.  

ಕ್ಯಾನ್ಸರ್‌ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು ಎಂದು ಸುಪ್ರೀಂಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್‌ ಗಗನ್‌ ಸೋನಿ ತಿಳಿಸಿದ್ದಾರೆ.

 

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ನಿಧನಕ್ಕೆ ಮುಖ್ಯಮಂತ್ರಿ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲೆಯವರಾದ ಮೋಹನ್ ಶಾಂತನಗೌಡರ್ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಸೇವೆ ಸಲ್ಲಿಸಿದ್ದರು. (1/2)

— CM of Karnataka (@CMofKarnataka)

ಕೋವಿಡ್‌ ನಿಗ್ರಹ ರಾಷ್ಟ್ರೀಯ ನೀತಿ ವಿಚಾರಣೆಯಿಂದ ಸಾಳ್ವೆ ಹಿಂದಕ್ಕೆ! .

ಮೋಹನ್ ಎಂ.ಶಾಂತನಗೌಡರ್ 

ಮೇ.5 1958ರಲ್ಲಿ ಜನಿಸಿದ್ದ ನ್ಯಾ. ಮೋಹನ್ ಎಂ.ಶಾಂತನಗೌಡರ್ ಸೆಪ್ಟೆಂಬರ್ 1980ರಲ್ಲಿ ವಕೀಲರಾಗಿ ಕಾರ್ಯಾರಂಭ ಮಾಡಿದ್ದರು. ಬೆಂಗಳೂರಿಗೆ ಮೊದಲು ಧಾರವಾರಡದಲ್ಲಿಯೇ ಒಂದು ವರ್ಷ ಅಭ್ಯಾಸ ನಡೆಸಿದ್ದರು. 

2003ರಲ್ಲಿ ರಾಜ್ಯ ಹೈ ಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2004ರಲ್ಲಿ  ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದರು. 2016ರಲ್ಲಿ ಕೇರಳ ಹೈ ಕೋರ್ಟ್ ಮುಖ್ಯ ನ್ಯಾಮೂರ್ತಿಯಾಗಿ ಸೇವೆ ಸಲ್ಲಿಸಿದ್ದು ಇಲ್ಲಿನ ಒಂದು ವರ್ಷದ ಕಾರ್ಯದ ಬಳಿಕ ಸುಪ್ರೀಂ ಕೋರ್ಟ್ ನ್ಯಾಮೂರ್ತಿಯಾಗಿ ನೇಮಕಗೊಂಡರು. 

2017ರಲ್ಲಿ ನ್ಯಾ. ಮೋಹನ್ ಎಂ ಶಾಂತನಗೌಡರ್ ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿದ್ದು, 2023ರ ಮೇ 4ರ ವರೆಗೆ ಅವರ ಸೇವಾವಧಿ ಇತ್ತು. ಇದೀಗ ಅನಾರೋಗ್ಯ ಮೃತರಾಗಿದ್ದಾರೆ. 

click me!