Breaking: ಚುನಾವಣಾ ಬಾಂಡ್‌ಗಳ ನಂಬರ್‌ ಕೂಡ ಎಸ್‌ಬಿಐ ನೀಡಬೇಕು: ಸುಪ್ರೀಂ ಕೋರ್ಟ್‌

Published : Mar 15, 2024, 10:52 AM ISTUpdated : Mar 15, 2024, 11:08 AM IST
Breaking: ಚುನಾವಣಾ ಬಾಂಡ್‌ಗಳ ನಂಬರ್‌ ಕೂಡ ಎಸ್‌ಬಿಐ ನೀಡಬೇಕು: ಸುಪ್ರೀಂ ಕೋರ್ಟ್‌

ಸಾರಾಂಶ

ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಎಸ್‌ಬಿಐ, ಬಾಂಡ್‌ ಮಾರಾಟ ಹಾಗೂ ಖರೀದಿ ಮಾಡಿದವರು ಮತ್ತು ದಿನಾಂಕ ಮಾತ್ರವಲ್ಲ, ಚುನಾವಣಾ ಬಾಂಡ್‌ಗಳ ನಂಬರ್‌ಗಳನ್ನೂ ಕೂಡ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ನವದೆಹಲಿ (ಮಾ.15): ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಎಸ್‌ಬಿಐನ ಕಿವಿ ಹಿಂಡಿದೆ. ಬಾಂಡ್‌ ಪಡೆದವರು ಹಾಗೂ ನೀಡಿದವರ ವಿವರ ಮಾತ್ರವಲ್ಲ, ಚುನಾವಣಾ ಬಾಂಡ್‌ಗಳ ನಂಬರ್‌ಗಳನ್ನೂ ಕೂಡ ಎಸ್‌ಬಿಐ ನೀಡಬೇಕು ಎಂದು ತಿಳಿಸಿದೆ. ಎಸ್‌ಬಿಐ ಸೀಲ್‌ ಮಾಡಿ ಸುಪ್ರೀಂ ಕೋರ್ಟ್‌ಗೆ ನೀಡಿರುವ ದಾಖಲೆಗಳನ್ನು ತನಗೆ ಹಿಂದಿರುಗಿಸುವಂತೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಸಲ್ಲಿಸಿದ್ದ ಅರ್ಜಿಯನ್ನು, ಶುಕ್ರವಾರ ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ವೇಳೆ ಎಸ್‌ಬಿಐಗೆ ಬಾಂಡ್‌ನ ನಂಬರ್‌ಗಳನ್ನು ಕೂಡ ನೀಡುವಂತೆ ಸಿಜೆಐ ಡಿವೈ ಚಂದ್ರಚೂಡ್‌ ತಿಳಿಸಿದ್ದಾರೆ. ಇದೇ ವೇಳೆ ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ಆದೀಶ್ ಅಗರ್ವಾಲ್‌ ಅವರು, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಚುನಾವಣಾ ಬಾಂಡ್‌ ವಿಚಾರವಾಗಿ ನೀಡಿರುವ ತೀರ್ಪನ್ನು ಸ್ವಯಂಪ್ರೇರಿತವಾಗಿ ಪರಿಶೀಲನೆ ಮಾಡುವಂತೆ ಸಿಜೆಐಗೆ ಪತ್ರವನ್ನು ಕಳುಹಿಸಿದ್ದಾಗಿ ತಿಳಿಸಿದ್ದಾರೆ. ಇದೂ ಕೂಡ ಶುಕ್ರವಾರ ವಿಚಾರಣೆಗೆ ಬರಲಿದೆ.

ವಿಚಾರಣೆಯ ವೇಳೆ ಸಿಎಜೆಐ, ಇಂದಿನ ಕಲಾಪವನ್ನು ವೀಕ್ಷಣೆ ಮಾಡಲು ಇಂಗ್ಲೆಂಡ್‌ನ ಜಡ್ಜ್‌ಗಳು ಕೂಡ ಜೊತೆಯಾಗಿದ್ದಾರೆ ಅನ್ನೋದನ್ನು ತಿಳಿಸಿದರು. ಈ ವೇಳೆ ಇಸಿಐ ಪರ ವಕೀಲ, ಇದು ಚಿಕ್ಕ ಮಾರ್ಪಾಡಿಗಾಗಿ ಸಲ್ಲಿಸಿರುವ ಅರ್ಜಿ.. ದಾಖಲೆಗಳನ್ನು ಮುಚ್ಚಿದ ಕವರ್‌ನಲ್ಲಿ ಸಲ್ಲಿಸಲಾಗಿದೆ. ಇದರ ಸಂಪೂರ್ಣ ಮಾಹಿತಿಯು ಈಗ ನ್ಯಾಯಾಲಯದಲ್ಲಿದೆ ಎಂದು ಹೇಳಿದರು. ಈ ವೇಳೆ ಸಿಜೆಐ, ಡೇಟಾವನ್ನು ಸ್ಕ್ಯಾನ್ ಮಾಡಲು ಮತ್ತು ಡಿಜಿಟೈಜ್ ಮಾಡಲು ನಾವು ಕಚೇರಿಗೆ ಸೂಚಿಸಿದ್ದೇವೆ. ಇದಕ್ಕೆ  ಇದು ಒಂದು ದಿನ ತೆಗೆದುಕೊಳ್ಳಬಹುದು. ಡೇಟಾವನ್ನು ಸ್ಕ್ಯಾನ್ ಮಾಡಿದ ತಕ್ಷಣ, ಮೂಲ ಪ್ರತಿಯನ್ನು  ECI ಗೆ ಹಿಂತಿರುಗಿಸಲಾಗುತ್ತದೆ ಎಂದು ಹೇಳಿದರು.

ನಮಗೆ ಸಲ್ಲಿಸಿದ ಡೇಟಾವನ್ನು ನಾಳೆ ಸಂಜೆ 5 ಗಂಟೆಯ ಒಳಗಾಗಿ ಸ್ಕ್ಯಾನ್‌ ಹಾಗೂ ಡಿಜಿಟಲೈಸ್‌ ಮಾಡಬೇಕು ಎಂದು  ರಿಜಿಸ್ಟಾರ್ ಜುಡಿಷಿಯಲ್‌ಗೆ ನ್ಯಾಯಪೀಠ ನಿರ್ದೇಶನ ನೀಡಿದೆ. ಇದು ಪೂರ್ಣಗೊಂಡ ನಂತರ, ಮೂಲ ಪ್ರತಿಗಳನ್ನು ಇಸಿಐಗೆ ಹಿಂತಿರುಗಿಸಲಾಗುತ್ತದೆ. ಸ್ಕ್ಯಾನ್ ಮಾಡಿದ ಮತ್ತು ಡಿಜಿಟೈಸ್ ಮಾಡಿದ ಫೈಲ್‌ಗಳ ನಕಲನ್ನು ಸಹ ಇಸಿಐಗೆ ಲಭ್ಯವಾಗುವಂತೆ ಮಾಡಬೇಕು. ECI ನಂತರ ತನ್ನ ವೆಬ್‌ಸೈಟ್‌ನಲ್ಲಿ ಡೇಟಾವನ್ನು ಅಪ್‌ಲೋಡ್ ಮಾಡುತ್ತದೆ ಎಂದು ತಿಳಿಸಲಾಗಿದೆ.

2019-2024ರ ಅವಧಿಯಲ್ಲಿ 22,217 ಚುನಾವಣಾ ಬಾಂಡ್‌ ಖರೀದಿ, ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮಾಹಿತಿ!

ಒಂದು ವಿಚಾರವನ್ನು ಇಲ್ಲಿ ತಿಳಿಸಬೇಕು, ಎಸ್‌ಬಿಐ ಪರವಾಗಿ ಇಲ್ಲಿ ಯಾರು ಬಂದಿದ್ದೀರಿ? ಅವರು ಬಾಂಡ್‌ ನಂಬರ್‌ಗಳ ವಿವರವನ್ನು ನೀಡಿಲ್ಲ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಈ ಬಾಂಡ್‌ ವಿವರಗಳನ್ನು ಇದರಲ್ಲಿ ಲಗತ್ತಿಸಬೇಕು ಎಂದು ಸಿಜೆಐ ತಿಳಿಸಿದ್ದಾರೆ. ಚುನಾವಣಾ ಬಾಂಡ್‌ ಕುರಿತಾದ ಎಲ್ಲಾ ಸಂಪೂರ್ಣ ವಿವರಗಳನ್ನು ಎಸ್‌ಬಿಐ ನೀಡಬೇಕು ಎಂದಿದ್ದಾರೆ. ಈ ವೇಳೆ ಕೇಂದ್ರದ ಪರವಾಗಿ ಮಾತನಾಡಿದ ಸಾಲಿಸಿಟರ್‌ ಜನರಲ್‌, ಈ ತೀರ್ಪಿನಲ್ಲಿ ಎಸ್‌ಬಿಐ ಯಾವುದೇ ಪಕ್ಷದಲ್ಲಿಲ್ಲ. ಅವರಿಗೆ ಈ ಕುರಿತಾಗಿ ಸುಪ್ರೀಂ ಕೋರ್ಟ್‌ ನೋಟಿಸ್‌ಅನ್ನೇ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಈ ಹಂತದಲ್ಲಿ ಮಾತನಾಡಿದ ವಕೀಲ ಕಪಿಲ್‌ ಸಿಬಲ್‌, ತೀರ್ಪು ಬಹಳ ಸ್ಪಷ್ಟವಾಗಿ ಬಂದಿದೆ. ಈ ಕುರಿತಾದ ಎಲ್ಲಾ ವಿವರಗಳನ್ನು ಸ್ವತಃ ಎಸ್‌ಬಿಐ ನೀಡಬೇಕು ಎಂದು ತಿಳಿಸಲಾಗಿದೆ.

ಎಸ್‌ಬಿಐ ಚುನಾವಣಾ ಬಾಂಡ್‌ ದೇಣಿಗೆ ರಹಸ್ಯ ಆಯೋಗದಿಂದ ಬಹಿರಂಗ, ಬಿಜೆಪಿ ಟಾಪ್‌, ಜೆಡಿಎಸ್‌ಗೆ 43 ಕೋಟಿ!  

ಬಾಂಡ್‌ ನಂಬರ್‌ಗಳು ಯಾಕೆ ಇಂಪಾರ್ಟೆಂಟ್‌?: ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಎಸ್‌ಬಿಐ ನೀಡಿದ್ದರೂ, ಬಾಂಡ್‌ ನಂಬರ್‌ಗಳನ್ನು ದಾಖಲಿಸಿಲ್ಲ. ಬಾಂಡ್‌ ನಂಬರ್‌ಗಳು ಬಾಂಡ್‌ ನೀಡಿದವರ ಹಾಗೂ ಖರೀದಿಸಿದವರ ಲಿಂಕ್‌ ಅನ್ನು ಜಗಜ್ಜಾಹೀರು ಮಾಡುತ್ತದೆ.  

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌