ಸುಪ್ರೀಂ ಕೋರ್ಟ್ ಹೊಸ ನಿಯಮ ಜಾರಿ, ಕೆಲಸದ ಅವಧಿ 4.30ಕ್ಕೆ ಇಳಿಕೆ! ಆದ್ರೆ ಮುಖ್ಯವಾದ ಬದಲಾವಣೆ ಇದು

Published : Jun 17, 2025, 04:32 PM IST
The Supreme Court of India (File photo/ANI)

ಸಾರಾಂಶ

ಜುಲೈ 14, 2025 ರಿಂದ ಸುಪ್ರೀಂ ಕೋರ್ಟ್ ಕಚೇರಿ ಸಮಯದಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. 4:30ರ ನಂತರ ಕಚೇರಿ ಕೆಲಸ ನಿಷೇಧಿಸಲಾಗಿದೆ ಮತ್ತು ಎಲ್ಲಾ ನಾಲ್ಕು ಶನಿವಾರಗಳೂ ಕೆಲಸದ ದಿನಗಳಾಗಿವೆ.

ಭಾರತದ ಸುಪ್ರೀಂ ಕೋರ್ಟ್ ತನ್ನ ಕಚೇರಿ ಕಾರ್ಯಪದ್ಧತಿಯಲ್ಲಿ ಪ್ರಮುಖ ಬದಲಾವಣೆಯನ್ನು ಜುಲೈ 14, 2025 ರಿಂದ ಜಾರಿಗೆ ತರಲಿದ್ದು, ಇದನ್ನು "ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು, 2025" ಎಂಬ ಹೆಸರಿನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ತಿದ್ದುಪಡಿ ಭಾರತದ ಸಂವಿಧಾನದ ವಿಧಿ 145ರ ಅಡಿಯಲ್ಲಿ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಜಾರಿಗೆ ತರಲಾಗುತ್ತಿದೆ.

4.30 ನಂತರ ಕಚೇರಿ ಬಂದ್

ಕಚೇರಿಯಲ್ಲಿ ಸಂಜೆ 4.30 ನಂತರ ಯಾವ ಉದ್ಯೋಗಿಗಳು ಕೂಡ ಕೆಲಸ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೊಸ ನಿಯಮದಲ್ಲಿ ಹೇಳಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರವೇ ಕೆಲಸದ ಸಮಯವನ್ನು ಹೆಚ್ಚಿಸಬಹುದು ಎಂದಿದೆ. ಜೂನ್ 16 ರಂದು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು 2025 ರ ಅಡಿಯಲ್ಲಿ ತನ್ನ ಕಚೇರಿ ಕೆಲಸದ ಸಮಯದಲ್ಲಿ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.

ತಿಂಗಳ 4 ಶನಿವಾರವೂ ಕೆಲಸ ಕಡ್ಡಾಯ

ಒಂದು ಪ್ರಮುಖ ಆಡಳಿತಾತ್ಮಕ ಪರಿಷ್ಕರಣೆಯಲ್ಲಿ, ಕಾನೂನು ಮತ್ತು ನ್ಯಾಯ ಸಚಿವಾಲಯವು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು 2025ರ ಅನ್ವಯ ಸುಪ್ರೀಂ ಕೋರ್ಟ್ ನೋಂದಾವಣೆ ಮತ್ತು ಕಚೇರಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಇದ್ದ ರಜೆಗಳನ್ನು ರದ್ದು ಮಾಡಿ ಮತ್ತೆ ಕೆಲಸ ಮಾಡುವ ದಿನದ ಪಟ್ಟಿಗೆ ತಂದಿದೆ. ಭಾರತದ ಗೆಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, ತಿದ್ದುಪಡಿ ಜುಲೈ 14, 2025 ರಿಂದ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ.

ಕೆಲಸದ ಅವಧಿ ಕಡಿತ

ಈ ತಿದ್ದುಪಡಿಯು 2025ರ ಜೂನ್ 14 ರಂದು GSR 385(E) ಅಡಿಯಲ್ಲಿ ಭಾರತ ಸರ್ಕಾರದ ಅಸಾಧಾರಣ ಗಜೆಟ್‌ನಲ್ಲಿ ಪ್ರಕಟವಾಗಿದೆ. ಇದರಿಂದ, "ಸುಪ್ರೀಂ ಕೋರ್ಟ್ ನಿಯಮಗಳು, 2013" ರ ಆದೇಶ II, ನಿಯಮಗಳು 1 ರಿಂದ 3 ಅನ್ನು ಬದಲಾಯಿಸಲಾಗಿದ್ದು, ನ್ಯಾಯಾಲಯದ ಕಾರ್ಯದ ದಿನಗಳು ಹಾಗೂ ಸಮಯಕ್ಕೆ ಹೆಚ್ಚಿನ ಸ್ಪಷ್ಟತೆ ಮತ್ತು ಶಿಸ್ತನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದಿದೆ. ಹೊಸ ನಿಮಯಮಕ್ಕೂ ಮುನ್ನ ಸುಪ್ರೀಂ ಕೋರ್ಟ್ ಗೆ ಸಂಬಂಧಿಸಿದ ಎಲ್ಲಾ ಇಲಾಖೆಯಲ್ಲಿ ಕೆಲಸದ ದಿನ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ ನಿಯಮಿತ ವಾರದ ದಿನಗಳಲ್ಲಿ ಸಂಜೆ 4:30 ರ ನಂತರ ತುರ್ತು ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಜೊತೆಗೆ ಎಲ್ಲಾ ಶನಿವಾರಗಳಂದು ನ್ಯಾಯಾಲಯ ಕಚೇರಿಗಳು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಇರುತ್ತದೆ ಮತ್ತು ತುರ್ತು ಅರ್ಜಿಗಳನನ್ನು ಮಧ್ಯಾಹ್ನ 12:00 ಗಂಟೆಯ ಮೊದಲು ಸಲ್ಲಿಸಬೇಕು ಎಂದಿದೆ.

ವಿಶೇಷ ರಜೆಗಳು ನ್ಯಾಯಮೂರ್ತಿಗಳ ನಿರ್ಧಾರದ ಮೇಲೆ ನಿಂತಿದೆ

ಕ್ರಿಸ್‌ಮಸ್ ಅಥವಾ ಹೊಸ ವರ್ಷದಂತಹ ವಿಶೇಷ ರಜಾದಿನಗಳಿಗಾಗಿ, ಕೆಲಸದ ಸಮಯವನ್ನು ಘನ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಕೇಸುಗಳಿಗೆ ಅನುಗುಣವಾಗಿ ನಿರ್ಧರಿಸುತ್ತಾರೆ ಮತ್ತು ಘೋಷಿಸುತ್ತಾರೆ. ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು, 2025 ರ ಪೂರ್ಣ ಪಠ್ಯವನ್ನು ಭಾರತದ ಸುಪ್ರೀಂ ಕೋರ್ಟ್ ಮತ್ತು ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಈ ತಿದ್ದುಪಡಿಯು ಸುಪ್ರೀಂ ಕೋರ್ಟ್ ನಿಯಮಗಳು, 2013 ರ ಆದೇಶ II ರ ನಿಯಮಗಳು 1 ರಿಂದ 3 ರ ಹಿಂದಿನ ನಿಬಂಧನೆಗಳನ್ನು ಬದಲಾಯಿಸುತ್ತದೆ , ಇದನ್ನು ಮೇ 29, 2014 ರ GSR 368(E), ಸೆಪ್ಟೆಂಬರ್ 18, 2019 ರ GSR 670(E), ಜುಲೈ 16, 2024 ರ GSR 457(E), ನವೆಂಬರ್ 5, 2024 ರ GSR 688(E) ಮತ್ತು ಮಾರ್ಚ್ 7, 2025 ರ GSR 163(E) ಸೇರಿದಂತೆ ಹಲವಾರು ಅಧಿಸೂಚನೆಗಳಿಂದ ಮಾರ್ಪಡಿಸಲಾಗಿದೆ.

ಕಾರ್ಪೋರೇಟ್‌ ವಲಯದಲ್ಲಿ ಭಾರೀ ಚರ್ಚೆ: 

ಸುಪ್ರೀಂ ಕೋರ್ಟ್ ತಂದಿರುವ ಹೊಸ ನಿಯಮಕ್ಕೆ ಖಾಸಗಿ ಕಂಪೆನಿಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ದಯವಿಟ್ಟು ಕಾರ್ಪೋರೇಟ್ ವಲಯದಲ್ಲೂ ಈ ರೀತಿಯ ನಿಯಮ ಜಾರಿಗೆ ತನ್ನಿ ಕೆಲಸದ ಅವಧಿಯನ್ನು ಕಡಿಮೆ ಮಾಡಿ, ಒತ್ತಡದ ಕೆಲಸದಿಂದ ಮುಕ್ತಿ ಸಿಗುವಂತೆ ಮಾಡಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ಸರ್ಕಾರದ ಕಚೇರಿಗೆ ಅದರಲ್ಲೂ ಸುಪ್ರೀಂ ಕೋರ್ಟ್ ಗೆ ಮಾತ್ರ ಸೀಮಿತ ನಮ್ಮ ಬೇಡಿಕೆಗಳು ಈಡೇರುವುದಿಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ