2000ರೂ.ಗಿಂತ ಮೇಲ್ಪಟ್ಟ ಯುಪಿಐ MDR ಶುಲ್ಕ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ನೋಟಿಸ್

Published : Sep 28, 2026, 01:43 PM IST
Supreme Court on UPI MDR

ಸಾರಾಂಶ

ತೀವ್ರ ಕೋಲಾಹಲ ಸೃಷ್ಟಿಸಿದ ಯುಪಿಐ ಪಾವತಿಯಲ್ಲಿನ MDR ಶುಲ್ಕ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದೆ. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ನವದೆಹಲಿ (ಸೆ.28) ಡಿಜಿಟಲ್ ಕ್ರಾಂತಿ ಬಳಿಕ ಭಾರತದ ಪಾವತಿ, ವಹಿವಾಟುಗಳು, ಹಣ ವರ್ಗಾವಣೆ ಸೇರಿದಂತೆ ಬಹುತೇಕ ವ್ಯವಹಾರಗಳು ಯುಪಿಐ ಮೂಲಕ ನಡೆಯುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ 2000 ರೂಪಾಯಿಗಿಂತ ಹೆಚ್ಚಿನ ವಹಿವಾಟಿಗೆ ವ್ಯಾಪಾರಿಗಳಿಗೆ MDR ಶುಲ್ಕ ವಿಧಿಸುವುದಾಗಿ ಹೇಳಿದೆ. ಈ ಕುರಿತು ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿದೆ. ಅಕ್ಟೋಬರ್ 2 ರಂದು ಯುಪಿಐ ಪಾವತಿ ಬಂದ್ ಮಾಡಿ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ಇದರ ನಡುವೆ ಈ ನಿರ್ಧಾರದ ವಿರುದ್ದ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ದಾಖಲಾಗಿದೆ. ಶುಲ್ಕ ಪಾವತಿ ನಿರ್ಧಾರಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ, ನೋಟಿಸ್ ಜಾರಿ

ಯುಪಿಐ ಪಾವತಿಗೆ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಮುಖ್ಯನ್ಯಾಯಮೂರ್ತಿಗಳ ಪೀಠ ಈ ಅರ್ಜಿ ವಿಚಾರಣೆ ನಡೆಸಿದೆ. ಈ ವೇಳೆ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಸನ್ ಆಫ್ ಇಂಡಿಯಾ ಹಾಗೂ ಯುಪಿಐ ಸರ್ವೀಸ್ ಕಮಿಟಿಗೆ ನೋಟಿಸ್ ಜಾರಿ ಮಾಡಿದೆ.

ಗ್ರಾಹಕರ ಮೇಲೂ ಹೊರೆ

ಶುಲ್ಕ ವಿಧಿಸುವುದರಿಂದ ಸುಲಭವಾಗಿ ಹಾಗೂ ಸರಳವಾಗಿ ನಡೆಯುತ್ತಿದ್ದ ಯುಪಿಐ ಪಾವತಿಗಳು ಜಟಿಲವಾಗಲಿದೆ. ವ್ಯಾಪಾರಿಗಳ ಮೇಲೆ ಹೆಚ್ಚಿನ ಹೊರೆ ಬೀಲಲಿದೆ. ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕಲಾಗುತ್ತದೆ. 2020ರಲ್ಲಿ ಜಾರಿಯಲ್ಲಿದ್ದ 2000 ರೂಪಾಯಿಗೆ ಮೇಲ್ಪಟ್ಟ ಪಾವತಿಗಳು ಶೂನ್ಯ ಎಂಡಿಆರ್ ಶುಲ್ಕ ನೀತಿಯನ್ನು ಹಿಂತೆಗೆದುಕೊಂಡು ಹೊಸ ನೀತಿ ಜಾರಿಗೊಳಿಸಲಾಗಿದೆ. ಹೀಗಾಗಿ ಸೆಪ್ಟೆಂಬರ್ 14ರಂದು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದರು.

ಅರ್ಜಿದಾರರ ವಾದ ಆಲಿಸಿದ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಅಂಗ ಸಂಸ್ಥಗಳಿಂದ ಪ್ರತ್ರಿಕ್ರಿಯೆ ಕೇಳಿದೆ. ನಾಲ್ಕು ವಾರಗಳಲ್ಲಿ ಈ ಕುರಿತು ಅಫಿದವಿತ್ ಸಲ್ಲಿಸುವಂತೆ ಸೂಚಿಸಿದೆ. ಇದೀಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ವ್ಯಾಪಾರಿಗಳಲ್ಲಿ ಕೊಂಚ ಸಮಾಧಾನ ಮೂಡಿದೆ. ಆದರೆ ಆದೇಶಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿರುವುದು ಆತಂಕ ಹೆಚ್ಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1 ಗಂಟೆಯಲ್ಲಿ 5 ಲಕ್ಷ ಕೋಟಿ ರೂ ನಷ್ಟ, ಭಾರತದ ಮಾರ್ಕೆಟ್ ಕುಸಿತಕ್ಕೆ ಹೂಡಿಕೆದಾರರು ಕಂಗಾಲು
ಬೆಳಗ್ಗೆ ಕೇಳಿಸುವ ಹನುಮಾನ್ ದೇಗುಲದ ಶಬ್ದಕ್ಕೆ ಕೆರಳಿದ ಅಲ್ಲು ಅರ್ಜನ್ ಸಹೋದರ, ಕ್ರಮಕ್ಕೆ ಆಗ್ರಹ